Advertisement

ಪಚ್ಚನಾಡಿ ಕಸ ಕರಗಿಸಲು ಬಯೋಮೈನಿಂಗ್‌; ಸದ್ಯದಲ್ಲೇ ಟೆಂಡರ್‌ ಅಂತಿಮ: ನಿರೀಕ್ಷೆ

05:19 PM Feb 16, 2022 | Team Udayavani |

ಮಹಾನಗರ: ಪಚ್ಚನಾಡಿಯ ಮಂದಾರ ಪ್ರದೇಶದಲ್ಲಿ 2 ವರ್ಷಗಳಿಂದ ರಾಶಿಬಿದ್ದಿರುವ ಪಾರಂಪರಿಕ ತ್ಯಾಜ್ಯವನ್ನು ಬಯೋಮೈನಿಂಗ್‌ ತಂತ್ರಜ್ಞಾನದ ಮುಖೇನ ಕರಗಿಸಲು ತೀರ್ಮಾನಿಸಲಾಗಿದ್ದು, ಕೆಲವೇ ದಿನಗಳಲ್ಲಿ ಟೆಂಡರ್‌ ಪ್ರಕ್ರಿಯೆ ಅಂತಿಮಗೊಳ್ಳಲಿದೆ. 9 ಲಕ್ಷ ಟನ್‌ ತ್ಯಾಜ್ಯವನ್ನು ಕರಗಿಸಲು ಯೋಜನೆ ರೂಪಿಸಲಾಗಿದೆ.

Advertisement

ಸುಮಾರು 73.73 ಕೋರೂ. ವೆಚ್ಚದಲ್ಲಿ ಈ ಯೋಜನೆ ನಡೆಯ ಲಿದ್ದು, ಟೆಂಡರ್‌ ಪ್ರಕ್ರಿಯೆ ಮುಕ್ತಾಯ ಗೊಂಡಿದೆ. 3 ಸಂಸ್ಥೆಗಳು ಟೆಂಡರ್‌ಗಾಗಿ ಸ್ಪರ್ಧಿ ಸಿದೆ. ಈ ಪಟ್ಟಿಯನ್ನು ತಾಂತ್ರಿಕ ಮೌಲ್ಯಮಾಪನಕ್ಕಾಗಿ ಸರಕಾ ರಕ್ಕೆ ಕಳುಹಿಸಲಾಗಿದ್ದು, ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ.

ಸುಮಾರು 9 ಲಕ್ಷ ಟನ್‌ ಪಾರಂ ಪರಿಕ ತ್ಯಾಜ್ಯ ನಿರ್ವಹಣೆಗೆ 73.73 ಕೋ.ರೂ. ವೆಚ್ಚದಲ್ಲಿ ಈಗಾಗಲೇ ಅನುಮೋದನೆ ದೊರಕಿದೆ. ಪ್ರೀಮಿ ಯಂ ಎಫ್‌ಎಆರ್‌ ಬ್ಯಾಂಕ್‌ನಿಂದ ಸಂದಾಯವಾದ 15.23 ಕೋ.ರೂ. ಬಡ್ಡಿಮೊತ್ತವನ್ನು ಪಾಲಿಕೆಯು ಬಂಡವಾಳ ವೆಚ್ಚವನ್ನಾಗಿ ಬಳಸಲು ನಿರ್ಧರಿಸಲಾಗಿದೆ. ಕರ್ನಾಟಕ ನೀರು ಮತ್ತು ನೈರ್ಮಲ್ಯ ಕ್ರೋಢೀಕರಿಸಿದ ನಿಧಿಯಿಂದ 35.54 ಕೋ. ರೂ. ಸಾಲ ಪಡೆಯಲು ಪಾಲಿಕೆ ನಿರ್ಧರಿಸಿದೆ.

ಏನಿದು ಬಯೋಮೈನಿಂಗ್‌ ವ್ಯವಸ್ಥೆ?
ಗುಡ್ಡೆಯಂತೆ ಬೆಳೆದಿರುವ ಡಂಪಿಂಗ್‌ ಯಾರ್ಡ್‌ಗಳ ತ್ಯಾಜ್ಯವನ್ನು ಜೈವಿಕ ವಿಧಾನದ ಮುಖೇನ ಕರಗಿಸುವ ವ್ಯವಸ್ಥೆಗೆ ಬಯೋಮೈನಿಂಗ್‌ ಎನ್ನಲಾಗುತ್ತದೆ. ಈ ವಿಧಾನದಲ್ಲಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಬೇರ್ಪಡಿಸಲಾಗುತ್ತದೆ. ಪ್ರಕೃತಿಯಲ್ಲಿ ಕರಗುವ ಮತ್ತು ಕರಗದಿರುವ ತ್ಯಾಜ್ಯವನ್ನು ಬೇರ್ಪಡಿಸಿ ಉತ್ಪತ್ತಿಯಾಗುವ ಗೊಬ್ಬರವನ್ನು ರೈತರಿಗೆ ನೀಡಬಹುದು. ಅದೇ ರೀತಿ, ಪ್ಲಾಸ್ಟಿಕ್‌, ರಬ್ಬರ್‌, ಗಾಜು ಮರು ಬಳಕೆಗಾಗಿ ಸಿಮೆಂಟ್‌ ಕಾರ್ಖಾನೆಗೆ ನೀಡಬಹುದಾಗಿದೆ. ಹಸಿ ತ್ಯಾಜ್ಯವನ್ನು ಸಂಸ್ಕರಣೆ ಮಾಡಲಾಗುತ್ತದೆ. ಉಳಿದ ತ್ಯಾಜ್ಯ ನಾಶಪಡಿಸಲಾಗುತ್ತದೆ. ಇನ್ನು, ಮರಳನ್ನು ಸಂಸ್ಕರಿಸಿ ಮರು ಬಳಕೆ ಮಾಡಲು ಅವಕಾಶ ಇದೆ.

ಟೆಂಡರ್‌ಗೆ ಆಹ್ವಾನ
ತ್ಯಾಜ್ಯ ದುರಂತದಿಂದಾಗಿ ಪಚ್ಚನಾಡಿಯಲ್ಲಿ ರಾಶಿ ಬಿದ್ದಿರುವ ಕಸವನ್ನು ಬಯೋಮೈನಿಂಗ್‌ ವಿಧಾನದ ಮುಖೇನ ಕರಗಿಸಲಾಗುವುದು. ಈಗಾಗಲೇ 73.73 ಕೋ.ರೂ. ಅಂದಾಜು ವೆಚ್ಚದಲ್ಲಿ ಟೆಂಡರ್‌ ಕರೆಯಲಾಗಿದೆ. ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆ ಆರಂಭಕ್ಕೆ ಸಮ್ಮತಿ ಸಿಗುವ ಸಾಧ್ಯತೆ ಇದೆ.
ಅಕ್ಷಯ್‌ ಶ್ರೀಧರ್‌,
ಪಾಲಿಕೆ ಆಯುಕ್ತ

Advertisement

 

Advertisement

Udayavani is now on Telegram. Click here to join our channel and stay updated with the latest news.

Next