Advertisement

ಮ್ಯಾಕ್ರನ್‌ ಕಪ್‌ ಬಾಕ್ಸಿಂಗ್‌ ಭಾರತಕ್ಕೆ ಒಂದೇ ಸ್ವರ್ಣ

12:30 AM Mar 01, 2019 | |

ಹೊಸದಿಲ್ಲಿ: ಇರಾನ್‌ನಲ್ಲಿ ನಡೆಯುತ್ತಿರುವ “ಮ್ಯಾಕ್ರನ್‌ ಕಪ್‌’ ಬಾಕ್ಸಿಂಗ್‌ ಕೂಟದ ಫೈನಲಿಗೆ ಏರಿದ್ದ 6 ಭಾರತೀಯರಲ್ಲಿ ಓರ್ವ ಬಾಕ್ಸರ್‌ ಮಾತ್ರ ಸ್ವರ್ಣ ಪದಕ ಜಯಿಸುವಲ್ಲಿ ಸಫ‌ಲರಾಗಿದ್ದಾರೆ. ಉಳಿದ ಐವರು ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ.

Advertisement

49 ಕೆಜಿ ವಿಭಾಗದ ಫೈನಲ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್‌ ದೀಪಕ್‌ ಸಿಂಗ್‌ ಅವರು ಜಾಫ‌ರ್‌ ನಾಸೆರಿ ಅವರನ್ನು ಸೋಲಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ದ್ವಿತೀಯ ಸ್ಥಾನಿಗಳಾಗಿ ಕೂಟ ಮುಗಿಸಿದ ಭಾರತದ ಬಾಕ್ಸರ್‌ಗಳೆಂದರೆ ಪಿ. ಲಲಿತ್‌ ಪ್ರಸಾದ್‌ (52 ಕೆಜಿ), ಕಾಮನ್ವೆಲ್ತ್‌ ಗೇಮ್ಸ್‌ ಬೆಳ್ಳಿ ಪದಕ ವಿಜೇತ ಮನೀಷ್‌ ಕೌಶಿಕ್‌ (60 ಕೆಜಿ), ದುರ್ಯೋಧನ್‌ ಸಿಂಗ್‌ ನೇಗಿ (69 ಕೆಜಿ), ಸಂಜಿತ್‌ (91 ಕೆಜಿ) ಹಾಗೂ ಕಾಮನ್ವೆಲ್ತ್‌ ಗೇಮ್ಸ್‌ ಬೆಳ್ಳಿ ಪದಕ ವಿಜೇತ ಸತೀಶ್‌ ಕುಮಾರ್‌ (+91 ಕೆಜಿ).

ಇದಕ್ಕೂ ಮುನ್ನ ರೋಹಿತ್‌ ತೋಕಾಸ್‌ (64 ಕೆಜಿ) ಮತ್ತು ಮನ್‌ಜಿàತ್‌ ಸಿಂಗ್‌ ಪಂಗಲ್‌ ( 75 ಕೆಜಿ) ಕಂಚಿನ ಪದಕ ಜಯಿಸಿದ್ದರು.

ಈ ಕೂಟದಲ್ಲಿ ಭಾರತ ಒಟ್ಟು 9 ಪದಕ ಜಯಿಸಿತು. ಇದರಲ್ಲಿ ಒಂದೇ ಚಿನ್ನ ಒಳಗೊಂಡಿದೆ. ಉಳಿದಂತೆ 5 ಬೆಳ್ಳಿ, 2 ಕಂಚು ಸೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next