ಪುಣೆ: ನಾಸಿಕ್‌ನ ಮಹಾರಾಷ್ಟ್ರ ಯುನಿವರ್ಸಿಟಿ ಆಫ್ ಹೆಲ್ತ… ಸಾಯನ್ಸ್ ಇದರ ಮೂರನೇ ವರ್ಷದ ಎಂಬಿಬಿಎಸ್ OPHTHALMOLOGY ವಿಭಾಗದ ಪರೀಕ್ಷೆಯಲ್ಲಿ ಹರ್ಷಿತಾ ಹರೀಶ್ ಶೆಟ್ಟಿ ಅವರು ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕವನ್ನು ಪಡೆದಿದ್ದಾರೆ.
ಪುಣೆಯ ಬಿಜೆ ಮೆಡಿಕಲ್ ಕಾಲೇಜ್‌ನಲ್ಲಿ ವೈದ್ಯಕೀಯ ಅಭ್ಯಾಸ ಮಾಡುತ್ತಿರುವ ಇವರು ನಾಸಿಕ್ ಯುನಿವರ್ಸಿಟಿ ವಲಯದಲ್ಲಿ ಎಂಬಿಬಿಎಸ್ 3ನೇ ವರ್ಷದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಪುಣೆಯ ದಿ| ಡಾ| ರಾಜೀವ ನಾರಾಯಣ ಭಾಲೆ ಸಂಸ್ಮರಣ ಚಿನ್ನದ ಪದಕ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.
ನಾಸಿಕ್‌ನ ಮಹಾರಾಷ್ಟ್ರ ಯುನಿವರ್ಸಿಟಿ ಆಫ್ ಹೆಲ್ತ… ಸಾಯನ್ಸ್ ಇದರ 21 ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಅವರನ್ನು ಚಿನ್ನದ ಪದಕದೊಂದಿಗೆ ಪ್ರಮಾಣ ಪತ್ರವನ್ನಿತ್ತು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು. ಪುಣೆಯ ಬೈರಾಮ್‌ಜೀ ಜೀಜಾಬಾಯಿ ಗವರ್ನ್ಮೆಂಟ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಇವರು ಪ್ರಾಥಮಿಕ, ಪ್ರೌಢ ಮತ್ತು ಪದವಿಯನ್ನು ಅತ್ಯಧಿಕ ಅಂಕಗಳೊಂದಿಗೆ ಪೂರೈಸಿದ್ದಾರೆ.
2015 -2016 ರಲ್ಲಿ ಎಂಎಚ್‌ಸಿಇಟಿ ಪರೀಕ್ಷೆಯಲ್ಲಿ ಇನ್ನೂರಕ್ಕೆ ಇನ್ನೂರು ಅಂಕ ಪಡೆದು ಮಹಾರಾಷ್ಟ್ರಕ್ಕೆ ಪ್ರಥಮ ರ್‍ಯಾಂಕ್ ಗಳಿಸಿದ್ದರು. ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ಇವರು ಪುಣೆಯ ಹೊಟೇಲ್ ಉದ್ಯಮಿ ಧನಕವಾಡಿ ನಿವಾಸಿ ಮೂಲತ ಶಿರ್ವ ಪಂಜಿಮಾರು ದೊಡ್ಡಮನೆ ಹರೀಶ್ ಎನ್. ಶೆಟ್ಟಿ ಮತ್ತು ಉಡುಪಿ ಕಬ್ಯಾಡಿ ತತ್ತೂರು ಮನೆ ವಾರಿಜ ಶೆಟ್ಟಿ ದಂಪತಿಯ ಪುತ್ರಿ.