Advertisement

ಹೊಸಬರ ಕಣ್ಣಲ್ಲಿ ಎಂಬಿಎ ಕನಸು

11:08 AM Feb 01, 2021 | Team Udayavani |

ಎಂಬಿಎ ಎಂಬ ಸಿನಿಮಾವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಸಂಭಾಷಣೆಕಾರ ಮಳವಳ್ಳಿ ಸಾಯಿಕೃಷ್ಣ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಹೆಚ್‌ಪಿ ಎನ್ನುವವರು ಈ ಚಿತ್ರದ ನಿರ್ದೇಶಕರು. ನಿರ್ದೇಶನದ ಜೊತೆಗೆ ನಿರ್ಮಾಣ ಕೂಡಾ ಇವರದೇ.

Advertisement

ನಿರ್ದೇಶಕರು ಹೇಳುವಂತೆ, ಎಂಬಿಎ ವ್ಯಾಸಂಗ ಮಾಡುವವರು, ಮಾಡಿದವರು ಮತ್ತು ಮಾಡಬೇಕಾದವರು ಈ ಚಿತ್ರವನ್ನು ಒಮ್ಮೆ ನೋಡಿದರೆ ಅವರ ಮನ ಮುಟ್ಟುತ್ತದೆಯಂತೆ. ಅಷ್ಟಕ್ಕೂ ಕಥೆ ಏನು, ಚಿತ್ರದಲ್ಲಿ ಏನು ಹೇಳಿದ್ದಾರೆ ಎಂಬ ಕುತೂಹಲಕ್ಕೆ ಸಿನಿಮಾವನ್ನೇ ನೋಡಿ ಎಂಬ ಉತ್ತರ ಅವರಿಂದ ಬರುತ್ತದೆ.

ಇದನ್ನೂ ಓದಿ:ಪಾತ್ರಗಳ ಸುತ್ತ ದರ್ಶನ್‌ ಕಟೌಟ್: ಅಭಿಮಾನಿಗಳ ಹೊಸ ಪ್ರಯತ್ನ

ಚಿತ್ರದಲ್ಲಿ ಪುನೀತ್‌ ಗೌಡ ಎನ್ನುವವರು ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದು, ದೃಢ ಮನೋವೃತ್ತಿಯ ಹುಡುಗನಾಗಿ ಕಾಣಿಸಿಕೊಂಡಿದ್ದಾರಂತೆ. ಈ ಪಾತ್ರಕ್ಕಾಗಿ ಹೇರ್‌ ಸ್ಟೈಲ್‌ ಕೂಡಾ ಬದಲಾಯಿಸಿದರಂತೆ. ಇವರ ಜೊತೆ ಸೋಮ ಕೂಡಾ ನಟಿಸಿದ್ದಾರೆ. ಇವರಿಗೆ ಜೋಡಿಯಾಗಿ ಕಾವ್ಯಾ ಗೌಡ, ಸೌಮ್ಯ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಹರ್ಷ ಕಾಗೋಡು ಸಂಗೀತ, ದರ್ಶನ್‌ ದೇವ್‌ ಛಾಯಾಗ್ರಹಣ, ಮರಿಸ್ವಾಮಿ ಸಂಕಲನವಿದೆ. ಬೆಂಗಳೂರು, ಮೈಸೂರು, ಮಂಡ್ಯ, ಚಿಕ್ಕಮಗಳೂರು ಮತ್ತು ಹಾಸನ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next