ವಿಧಾನಸಭೆ: ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಮ್ಮ ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ಪಾತ್ರೆಗಳು, ಸೀರೆ, ಕ್ರಿಕೆಟ್ ಕಿಟ್‌ಗಳನ್ನು ವಿತರಿಸುತ್ತಿದ್ದಾರೆಂದು ಆರೋಪಿಸಿ ಬಿಜೆಪಿ ಸದಸ್ಯರು ಅವುಗಳನ್ನು ಸದನದೊಳಗೆ ತಂದು ಪ್ರದರ್ಶಿಸಲು ಮುಂದಾದ ಘಟನೆ ಶುಕ್ರವಾರ ನಡೆಯಿತು. ಆದರೆ, ಈ ಬಗ್ಗೆ ಮುನ್ಸೂಚನೆ ದೊರೆತಿದ್ದ ಮಾರ್ಷಲ್‌ಗಳು ಅವುಗಳನ್ನು ಒಳಗೆ ತರಲು ಬಿಡಲಿಲ್ಲ. ಆದರೂ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಮಾರ್ಷಲ್‌ಗಳ ಕಣ್ತಪ್ಪಿಸಿ ಸಚಿವ ಎಂ.ಬಿ.ಪಾಟೀಲ್ ಸೀರೆ ಹಂಚಿದ್ದ ಅವರ ಭಾವಚಿತ್ರವಿರುವ ಲಕೋಟೆಗಳನ್ನು ಸದನದೊಳಗೆ ತಂದು ಪ್ರದರ್ಶಿಸಿದರು. ಈ ವಿಚಾರ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಜಟಾಪಟಿಗೂ ಕಾರಣವಾಯಿತು. ಸರ್ಕಾರದ ಪರವಾಗಿ ಉತ್ತರಿಸಿದ ಸಚಿವ ರಮೇಶ್‌ಕುಮಾರ್, ಚುನಾವಣಾ ಪೂರ್ವದಲ್ಲಿ ಪ್ರತಿಯೊಬ್ಬ ಜನಪ್ರತಿನಿಧಿ ಸೀರೆ, ಹೆಂಡ, ಹಣ ಹಚ್ಚುವುದು
ಸಾಮಾನ್ಯ. ತಮ್ಮ ಶಕ್ತಿಗನುಗುಣವಾಗಿ ಏನೇನು ಬೇಕೋ ಅದನ್ನು ಹಂಚುತ್ತಾರೆ. ಆದರೆ, ಸಿಕ್ಕಿಬೀಳಬಾರದು. ಲಂಚ
ತೆಗೆದುಕೊಳ್ಳುವುದು ತಪ್ಪಲ್ಲ. ತಗೊಂಡು ಸಿಕ್ಕಿಬೀಳಬಾರದು ಎಂದು ಮಾರ್ಮಿಕವಾಗಿ ನುಡಿದರು.