ಕಿರುತೆರೆ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದ ನಟಿ ಮಯೂರಿ ಕ್ಯಾತರಿ ನಂತರ ಹಿರಿತೆರೆಯಲ್ಲಿ ನಾಯಕಿಯಾಗಿ ನೆಲೆ ಕಂಡುಕೊಂಡವರು. ಕನ್ನಡದಲ್ಲಿ ವಿಭಿನ್ನ ಚಿತ್ರಗಳು ಮತ್ತು ಪಾತ್ರಗಳ ಮೂಲಕ ಬೇಡಿಕೆಯ ನಟಿಯಾಗಿ ಗುರುತಿಸಿಕೊಳ್ಳುತ್ತಿರುವಾಗಲೇ, ನಟಿ ಮಯೂರಿ ಹಸೆಮಣೆ ಏರಿದ್ದರು. ಇನ್ನೇನು ಮದುವೆಯಾದ ಬಳಿಕ ಮಯೂರಿ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಾರೇನೋ ಎಂದು ಕೆಲವರು ಅಂದಾಜಿಸಿದ್ದರೆ, ಮಯೂರಿ ಮದುವೆಯ ಬಳಿಕ ಮತ್ತೆ ಚಿತ್ರರಂಗದಲ್ಲಿ ಸಕ್ರಿಯವಾಗುವ ಸುಳಿವು ನೀಡಿದ್ದಾರೆ.
ಹೌದು, ಸಾಂಸಾರಿಕ ಜೀವನಕ್ಕೆ ಕಾಲಿಟ್ಟರೂ ಅಭಿನಯವನ್ನು ಬಿಡಬಾರದು. ಸಂಸಾರ ಮತ್ತು ಸಿನಿಮಾ ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕು ಅನ್ನೋದು ಮಯೂರಿ ನಿಲುವು. ಇನ್ನು ಇತ್ತೀಚೆಗಷ್ಟೇ ಮಯೂರಿ ತಮ್ಮ ಪತಿ ಮತ್ತು ಕುಟುಂಬದೊಡನೆ ಭರ್ಜರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇದೇ ವೇಳೆ ಮಯೂರಿ ಅಭಿನಯಿಸಿರುವ “ಆದ್ಯಂತ’ ಚಿತ್ರತಂಡ ಕೂಡ ಅವರಿಗೊಂದು ಸ್ಪೆಷಲ್ ಗಿಫ್ಟ್ ನೀಡಿದೆ. ಮಯೂರಿ ಬರ್ತ್ ಡೇಗಾಗಿ “ಆದ್ಯಂತ’ ಚಿತ್ರತಂಡ ಚಿತ್ರದ ಚೆಂದದ ಫಸ್ಟ್‌ಲುಕ್ ಬಿಡುಗಡೆಗೊಳಿಸಿದೆ.
“ಆದ್ಯಂತ’ ಮಯೂರಿ ಮದುವೆಯ ಮುನ್ನ ನಟಿಸಿದ ಚಿತ್ರ. ಬಾಕಿಯಿದ್ದ ಚಿತ್ರದ ಕೆಲ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ ಮಯೂರಿ ಬರ್ತ್ ಡೇಗಾಗಿ ಸ್ಪೆಷಲ್ ಫಸ್ಟ್‌ಲುಕ್ ರಿಲೀಸ್ ಮಾಡಿದೆ. ಮದುವೆಯ ಬಳಿಕ ಮಯೂರಿ ನಾಯಕಿಯಾಗಿ ಅಭಿನಯಿಸುತ್ತಿರುವ ಮೊದಲ ಚಿತ್ರ ಬಿಡುಗಡೆಯಾಗುತ್ತಿರುವುದರಿಂದ, ಚಿತ್ರದ ಮೇಲೆ ಮಯೂರಿ ಅವರಿಗೂ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಮಯೂರಿ ಪಾಲಿಗೆ ಬಯಸಿದ ಪಾತ್ರವೇ ಸಿಕ್ಕಿದೆಯಂತೆ. ನಟನೆಗೂ ವಿಪುಲ ಅವಕಾಶಗಳಿರೋ ಪಾತ್ರವಾಗಿದ್ದು, ಬೆಂಗಳೂರಿಂದ ಸಕಲೇಶಪುರ ಪ್ರದೇಶಕ್ಕೆ ಶಿಫ್ಟ್ ಆಗಿ ಹೆಜ್ಜೆ ಹೆಜ್ಜೆಗೂ ಕುತೂಹಲ ಮೂಡುವಂಥ ಧಾಟಿಯಲ್ಲಿ ಇಡೀ ಸಿನಿಮಾ ಮೂಡಿ ಬಂದಿದೆ. ಕನ್ನಡ ಆಡಿಯನ್ಸ್‌ಗೆ ಈ ಸಿನಿಮಾ ಮತ್ತು ನನ್ನ ಪಾತ್ರ ಎರಡೂ ಇಷ್ಟವಾಗಲಿದೆ ಎನ್ನುವುದು ಮಯೂರಿ ಭರವಸೆಯ ಮಾತು.
ಇನ್ನು ಪುನೀತ್ ಶರ್ಮನ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಲೇಖನಾ ಕ್ರಿಯೇಷನ್ಸ್ ಮತ್ತು ಆರ್.ಆರ್ ಮೂವೀಸ್ ಬ್ಯಾನರಿನಡಿಯಲ್ಲಿ ನಿರ್ಮಾಣವಾಗಿದೆ. ಚಿತ್ರಕ್ಕೆ ರಮೇಶ್ ಬಾಬು .ಟಿ ನಿರ್ಮಾಪಕರಾಗಿ ಬಂಡ ವಾಳ ಹೂಡಿದ್ದಾರೆ. ಚಿತ್ರ ದಲ್ಲಿ ಮ ಯೂರಿ ಅವ ರೊಂದಿಗೆ ದಿಲೀಪ್, ರಮೇಶ್ ಭಟ್ , ಪ್ರಶಾಂತ್ ನಟನಾ, ಶ್ರೀನಾಥ್ ವಸಿಷ್ಠ, ನಿಖೀಲ್ ಗೌಡ ಮುಂತಾದವರ ತಾರಾಗಣವಿದೆ.
ಒಟ್ಟಾರೆ ತನ್ನ ಫಸ್ಟ್ ಲುಕ್ ಮೂಲಕ ವಿಭಿನ್ನವಾದ ಟೈಟಲ್, ಅದಕ್ಕೆ ತಕ್ಕುದಾದ ಕಥೆಯ ಸುಳಿವು ನೀಡಿರುವ “ಆದ್ಯಂತ’ ಸಿನಿ ಪ್ರಿಯರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗ ಲಿದೆ ಅನ್ನೋದು ಚಿತ್ರ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.