ಮುಂಬಯಿ: ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಮುಂಬಯಿ ಇದರ ವಾರ್ಷಿಕ ಸಮಾವೇಶವು ಫೆ. 17 ರಂದು ಸಂಜೆ ಘಾಟ್ಕೊàಪರ್ ಅಸಲ್ಫಾದ ಶ್ರೀ ಕ್ಷೇತ್ರ ಗೀತಾಂಬಿಕಾ ಸಭಾಗೃಹದಲ್ಲಿ ಕನ್ನಡ ಕಲಾಕೇಂದ್ರ ಅಧ್ಯಕ್ಷ ಬೈಲೂರು ಬಾಲಚಂದ್ರ ರಾವ್ ಅಧ್ಯಕ್ಷತೆಯಲ್ಲಿ ನೆರವೇರಿತು.
ಸಮಾರಂಭದಲ್ಲಿ ಅತಿಥಿ-ಗಣ್ಯರು ಗೋರೆಗಾಂವ್ ಕರ್ನಾಟಕ ಸಂಘಕ್ಕೆ ಸಂಸ್ಥೆಯ ವಾರ್ಷಿಕ ಚಕ್ರಧಾರಿ ಪ್ರಶಸ್ತಿಯನ್ನು ಸಂಘದ ಅಧ್ಯಕ್ಷರಾದ ದೇವಲ್ಕುಂದ ಶೆಟ್ಟಿ ಮತ್ತು ಪದಾಧಿಕಾರಿ ಗಳನ್ನೊಳಗೊಂಡು ಪ್ರದಾನಿಸಿದರು. ಹಾಗೂ ಸಂಸ್ಥೆಯ ವಾರ್ಷಿಕ ಕೃಷಿಬಂಧು ಪುರಸ್ಕಾರವನ್ನು ಅಖೀಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಅಧ್ಯಕ್ಷ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಅಧ್ಯಕ್ಷ ಶೇಖರ ಅಜೆಕಾರು ಇವರಿಗೆ ಪ್ರದಾನಿಸಿ ಗೌರವಿಸಿದರು. ಸದಾನಂದ ಭಂಡಾರಿ, ವಿN°àಶ ರಾಮಸ್ವಾಮಿ ಮತ್ತು ಗುರುಪ್ರಸಾದ್ ಭಟ್ ದಂಪತಿಗಳನ್ನು ಗೌರವಿಸಲಾಯಿತು.
ಸಮಾರಂಭದಲ್ಲಿ ಶ್ರೀ ಮೂಕಾಂಬಿಕಾ ಮಂದಿರ ಘನ್ಸೋ ಲಿ ಇದರ ಪ್ರಧಾನ ಅರ್ಚಕ ಗುರುಪ್ರಸಾದ್ ಭಟ್, ಫ್ರೆಂಡ್ಸ್ ಸ್ವಾವಲಂಬನ ಕೇಂದ್ರ ಡೊಂಬಿವಲಿ ಸಂಚಾಲಕ ಪ್ರೊ| ವೆಂಕಟೇಶ ಪೈ, ಕವಿ, ಲೇಖಕ ವಿಶ್ವನಾಥ್ ಶೆಟ್ಟಿ ಪೇತ್ರಿ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಹಿರಿಯ ವಿದ್ವಾಂಸ ದುರ್ಗಾಪ್ರಸಾದ್ ಖಾರ್‌ಘರ್ ಬಳಗದವರಿಂದ “ಚತುರ್ವೇದ ಪಾರಾ ಯಣ’ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಫ್ರೆಂಡ್ಸ್ ಸ್ವಾವಲಂಬನಾ ಕೇಂದ್ರ ಡೊಂಬಿವಲಿ ಇದರ ವಿದ್ಯಾರ್ಥಿಗಳಿಂದ ಭಜನಾ ಸಂಧ್ಯಾ ಕಾರ್ಯಕ್ರಮ, ವಿಷ್ಣು ಭಟ್ ಹೊಸ್ಮನೆ ಅತ್ರಾಡಿ ಬರೆದ ಕಥೆಯನ್ನಾಧರಿತ ವಿಶ್ವನಾಥ ದೊಡ್ಮನೆ ರಚಿಸಿರುವ “ಸೂರ್ಯಪ್ರಭೆ’ ಪೌರಾಣಿಕ ನಾಟಕವನ್ನು ರಂಗ ಕಲಾವಿದ ಅಶೋಕ್ ಕುಮಾರ್ ಕೊಡ್ಯಡ್ಕ ಮತ್ತು ತಂಡದ ಕಲಾವಿದರು ಪ್ರದರ್ಶಿಸಿದರು.
ಶಾಂತಿ ಪ್ರಿಯ ಉಡುಪ ಪ್ರಾರ್ಥನೆಗೈದರು. ಗುರುಮೂರ್ತಿ ಭುವನಗಿರಿ ಶ್ಲೋಕ ಪಠಣಗೈದರು. ವೀರ ಮರಣವನ್ನಪ್ಪಿದ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಾಂಸ್ಕೃತಿಕ ಪ್ರತಿಷ್ಠಾನದ ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಅತಿಥಿಗಳನ್ನು ಸ್ವಾಗತಿಸಿದರು. ಜಿ. ಟಿ. ಆಚಾರ್ಯ ಅವರು ಪ್ರಾಸ್ತಾವಿಕ ಭಾಷಣಗೈದು ಮಯೂರವರ್ಮ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ತಿಳಿಸಿದರು. ಸುಪ್ರಿಯಾ ಉಡುಪ ಅವರು ಸಮ್ಮಾನಿತರನ್ನು ಪರಿಚಯಿಸಿ, ಸಮ್ಮಾನ ಪತ್ರ ವಾಚಿಸಿದರು. ತನುಜಾ ಎಂ. ಭಟ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ರಾಜೇಶ್ ಪಿ. ಗೌಡ ವಂದಿಸಿದರು.
ಚಿತ್ರ – ವರದಿ : ರೋನ್ಸ್ ಬಂಟ್ವಾಳ್