Advertisement

ಮೇಯರ್‌ ಸಂಪತ್‌ರಾಜ್‌ ಚೀನಾ ಪ್ರವಾಸ ಆರಂಭ

11:33 AM Jan 11, 2018 | |

ಬೆಂಗಳೂರು: ಬಿಬಿಎಂಪಿ ಮೇಯರ್‌ ಆಗಿ ಆಯ್ಕೆಯಾದ ಬಳಿಕ ಎರಡನೇ ಬಾರಿಗೆ ಆರ್‌.ಸಂಪತ್‌ರಾಜ್‌ ವಿದೇಶಿ ಪ್ರವಾಸ ಕೈಗೊಂಡಿದ್ದು, ಬುಧವಾರ ನಗರದ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಚೀನಾಗೆ ತೆರಳಿದ್ದಾರೆ.

Advertisement

ಚೀನಾದಲ್ಲಿ ನಡೆಯಲಿರುವ “ವಿಶ್ವ ವ್ಯಾಪಾರ ಸಮ್ಮೇಳನ’ದಲ್ಲಿ ಭಾಗವಹಿಸಲು ನಗರಾಭಿವೃದ್ಧಿ ಇಲಾಖೆಯ ಆಹ್ವಾನದ
ಮೇರೆಗೆ ಮೇಯರ್‌ ಸಂಪತ್‌ರಾಜ್‌ ಹಾಗೂ ಆಡಳಿತ ಪಕ್ಷ ನಾಯಕ ಮಹಮದ್‌ ರಿಜ್ವಾನ್‌ ನವಾಬ್‌ ಬುಧವಾರ ಚೀನಾ ಪ್ರವಾಸ ಕೈಗೊಂಡಿದ್ದು, ಜ.14ರಂದು ಚೀನಾದಿಂದ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. 

ಈ ಮೊದಲು ತಮ್ಮ ಸ್ನೇಹಿತರೊಬ್ಬರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾರಿಗೂ ಮಾಹಿತಿ ನೀಡಿದೆ ದುಬೈ ಪ್ರವಾಸ ಕೈಗೊಂಡಿದ್ದ ಸಂಪತ್‌ರಾಜ್‌ ಅವರು, ಇದೀಗ ಅಧಿಕೃತ ಆಹ್ವಾನದ ಮೇರೆಗೆ ನಾಲ್ಕು ದಿನಗಳ ಚೀನಾ ಪ್ರವಾಸಕ್ಕೆ ಮುಂದಾಗಿದ್ದಾರೆ.
 
ಮೇಯರ್‌ ಸಂಪತ್‌ರಾಜ್‌ ಈ ಕುರಿತು ಪ್ರತಿಕ್ರಿಯಿಸಿ, ಚೀನಾದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ವಿಶ್ವದ ಹಲವಾರು ನಗರಗಳ ಮೇಯರ್‌ಗಳು ಭಾಗವಹಿಸಲಿದ್ದು, ಕೇಂದ್ರ ನಗರಾಭಿವೃದ್ಧಿ ಇಲಾಖೆಯಿಂದ ಆಹ್ವಾನ ಬಂದ ಹಿನ್ನೆಲೆಯಲ್ಲಿ ಚೀನಾ ಪ್ರವಾಸಕ್ಕೆ ತೆರಳಿದ್ದೇವೆ. ಸಮ್ಮೇಳನ ಮುಗಿಸಿಕೊಂಡು ಸಂಕ್ರಾಂತಿ ವೇಳೆಗೆ ನಗರಕ್ಕೆ ವಾಪಸ್ಸಾಗುತ್ತೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next