Advertisement

ಮೇಯರ್‌ ಚುನಾವಣೆಗೆ ಆಸ್ತಿ ಘೋಷಣೆ ಕಂಟಕ?

12:47 PM Sep 16, 2017 | Team Udayavani |

ಬೆಂಗಳೂರು: ಬಿಬಿಎಂಪಿಯ ಬಹುತೇಕ ಸದಸ್ಯರು ಆಸ್ತಿ ಘೋಷಣೆ ಮಾಡದೆ ಕೆಎಂಸಿ ಕಾಯ್ದೆಯನ್ನು ಉಲ್ಲಂ ಸಿರುವ ಹಿನ್ನೆಲೆಯಲ್ಲಿ ಅವರ ಸದಸ್ಯತ್ವ ರದ್ದುಪಡಿಸುವಂತೆ ನವಭಾರತ ಪ್ರಜಾಸತ್ತಾತ್ಮಕ ಪಕ್ಷದ ಮುಖಂಡರು ನಗರದ ಪ್ರಾದೇಶಿಕ ಆಯುಕ್ತೆ ಜಯಂತಿ ಅವರಿಗೆ ದೂರು ನೀಡಿದ್ದಾರೆ. 

Advertisement

ಕೆಎಂಸಿ ಕಾಯ್ದೆ 1976ರ ಕಲಂ 19ರಂತೆ ಪ್ರತಿಯೊಬ್ಬ ಚುನಾಯಿತ ಬಿಬಿಎಂಪಿ ಸದಸ್ಯರು ಮೇಯರ್‌ ಚುನಾವಣೆಯಾದ 1 ತಿಂಗಳೊಳಗಾಗಿ ಬಿಬಿಎಂಪಿ ಆಯುಕ್ತರಿಗೆ ತಮ್ಮ ಹಾಗೂ ಕುಟುಂಬದವರ ಆಸ್ತಿ ವಿವರಗಳನ್ನು ಸಲ್ಲಿಕೆ ಮಾಡಬೇಕು. ಆದರೆ, 2015ರ ಸೆ.11ರಂದು ಮೊದಲ ಮೇಯರ್‌ ಆಯ್ಕೆಯಾಗಿ  ಒಂದು ತಿಂಗಳು ಕಳೆದರೂ 90 ಕ್ಕೂ ಹೆಚ್ಚು ಸದಸ್ಯರು ವಿವರಗಳನ್ನು ಸಲ್ಲಿಕೆ ಮಾಡಿಲ್ಲ. 

ಆ ಹಿನ್ನೆಲೆಯಲ್ಲಿ ನವಭಾರತ ಪ್ರಜಾಸತ್ತಾತ್ಮಕ ಪಕ್ಷದ ಮುಖಂಡರು 2016ರ ಜನವರಿಲ್ಲಿ ಸರ್ಕಾರಕ್ಕೆ ಪತ್ರ ಬರೆದು ಅವರ ಸದಸ್ಯತ್ವ ರದ್ದುಗೊಳಿಸುವಂತೆ ಕೋರಿತ್ತು. ಅದರ ಆಧಾರದ ಮೇಲೆ ನಿಯಮದಂತೆ ಕ್ರಮಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರಿಗೆ ಸರ್ಕಾರ ಪತ್ರ ಬರೆದಿತ್ತು. ಆದರೆ, ಪ್ರಾದೇಶಿಕ ಆಯುಕ್ತರು ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಮತ್ತೂಮ್ಮೆ ದೂರು ನೀಡಿರುವ ಪಕ್ಷದ ಮುಖಂಡರು ಈಗಲೂ ಕ್ರಮಕೈಗೊಳ್ಳದಿದ್ದರೆ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ.  

ಅಲ್ಲದೆ, ಮೇಯರ್‌ ಚುನಾವಣೆಯನ್ನೇ ರದ್ದು ಮಾಡುವಂತೆ ಮನವಿ ಮಾಡಿದ್ದಾರೆ. ಒಂದೊಮ್ಮೆ  ಈ ವಿಚಾರ ನ್ಯಾಯಾಲಯ ಅಂಗಳಕ್ಕೆ ಹೋದರೆ ಸೆ. 28ರ ಮೇಯರ್‌ ಮತ್ತು ಉಪಮೇಯರ್‌ ಚುನಾವಣೆಗೆ ತೊಡಕಾಗುವ ಸಾಧ್ಯತೆಯಿದೆ. 

Advertisement

Udayavani is now on Telegram. Click here to join our channel and stay updated with the latest news.

Next