Advertisement

ಲೋಕಸಭಾ ಚುನಾವಣೆಗೆ ಇವಿಎಂ ಬದಲು ಮತಪತ್ರ : ಮಾಯಾವತಿ ಆಗ್ರಹ

10:57 AM Jan 22, 2019 | udayavani editorial |

ಲಕ್ನೋ : ಮುಂಬರುವ ಲೋಕಸಭಾ ಚುನಾವಣೆಗೆ ಇಲೆಕ್ಟ್ರಾನಿಕ್‌ ಓಟಿಂಗ್‌ ಮಶೀನ್‌ (ಇವಿಎಂ) ಗಳ ಬದಲು ಮತಪತ್ರಗಳನ್ನೇ ಬಳಸಬೇಕು ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಇಂದು ಮಂಗಳವಾರ ಮತ್ತೆ ಆಗ್ರಹಿಸಿದ್ದಾರೆ.

Advertisement

ಅಮೆರಿಕದಲ್ಲಿನ ಭಾರತೀಯ ಸೈಬರ್‌ ಪರಿಣತ ವ್ಯಕ್ತಿಯೋರ್ವ ನಿನ್ನೆ ಸೋಮವಾರ ‘2014ರ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಹ್ಯಾಕ್‌ ಮಾಡುವ ಮೂಲಕ ಅಕ್ರಮ ಎಸಗಲಾಗಿತ್ತು’ ಎಂದು ಹೇಳಿಕೊಂಡಿರುವ ಹಿನ್ನೆಲೆಯಲ್ಲಿ ಮಾಯಾವತಿ, ಇವಿಎಂ ಬದಲು ಮತಪತ್ರ ಬಳಸುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.

‘ಇವಿಎಂ ಹ್ಯಾಕ್‌ ಮಾಡಬಹುದೆಂಬ ವಿಚಾರ ಈಗ ಬಯಲಾಗಿರುವುದರಿಂದ 2014ರ ಚುನಾವಣೆಯಲ್ಲಿ ಬಿಜೆಪಿ ಪಿತೂರಿ ನಡೆಸಿರುವುದು ಖಚಿತವಾಗಿದೆ; ಆದುದರಿಂದ ಮುಂಬರುವ ಲೋಕಸಭಾ ಚುನಾವಣೆಗೆ ಇವಿಎಂ ಬದಲು ಮತಪತ್ರ ಬಳಸಬೇಕು’ ಎಂದು ಮಾಯಾವತಿ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next