Advertisement

ಮೊದಲ ಟೆಸ್ಟ್‌ನಿಂದ ಮಾಯಾಂಕ್‌ ಔಟ್‌

09:10 PM Aug 02, 2021 | Team Udayavani |

ನಾಟಿಂಗ್‌ಹ್ಯಾಮ್‌: ಅಭ್ಯಾಸದ ವೇಳೆ ತಲೆಗೆ ಏಟು ಅನುಭವಿಸಿದ ಮಾಯಾಂಕ್‌ ಅಗರ್ವಾಲ್‌ ಇಂಗ್ಲೆಂಡ್‌ ಎದುರಿನ ಮೊದಲ ಟೆಸ್ಟ್‌ ಪಂದ್ಯದಿಂದ ಹೊರಬಿದ್ದಿದ್ದಾರೆ.

Advertisement

ನೆಟ್‌ ಪ್ರ್ಯಾಕ್ಟೀಸ್‌ ವೇಳೆ ಮೊಹಮ್ಮದ್‌ ಸಿರಾಜ್‌ ಅವರ ಎಸೆತವೊಂದು ಅಗರ್ವಾಲ್‌ ತಲೆಯ ಹಿಂಭಾಗಕ್ಕೆ ಬಡಿಯಿತು. ಏಟು ಗಂಭೀರವಲ್ಲವಾದರೂ ಕನ್‌ಕಶನ್‌ ಟೆಸ್ಟ್‌ ನಡೆಸಿದ ಬಳಿಕ ಅವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಯಿತು. ಸರಣಿಯ ಮೊದಲ ಟೆಸ್ಟ್‌ ಬುಧವಾರ ಟ್ರೆಂಟ್‌ಬ್ರಿಜ್‌ ಅಂಗಳದಲ್ಲಿ ಆರಂಭವಾಗಲಿದೆ.

ಮಾಯಾಂಕ್‌ ಅಗರ್ವಾಲ್‌ ಅನುಪಸ್ಥಿತಿಯಲ್ಲಿ ರೋಹಿತ್‌ ಶರ್ಮ ಜತೆ ಕರ್ನಾಟಕದ ಮತ್ತೋರ್ವ ಆಟಗಾರ ಕೆ.ಎಲ್‌. ರಾಹುಲ್‌ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ. ಅಭಿಮನ್ಯು ಈಶ್ವರನ್‌ ತಂಡದಲ್ಲಿರುವ ಮತ್ತೋರ್ವ ಸ್ಪೆಷಲಿಸ್ಟ್‌ ಓಪನರ್‌. ಹನುಮ ವಿಹಾರಿ ಕೂಡ ರೇಸ್‌ನಲ್ಲಿದ್ದಾರೆ. ವಿಹಾರಿ ಆಫ್ ಸ್ಪಿನ್‌ ಬೌಲಿಂಗ್‌ ಕೂಡ ಮಾಡಬಲ್ಲರು.

Advertisement

Udayavani is now on Telegram. Click here to join our channel and stay updated with the latest news.

Next