Advertisement

ಹೊಸ ವರ್ಷದ ಸಂಭ್ರಮ: ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ, ರಾಷ್ಟ್ರಪತಿ

09:40 AM Jan 01, 2021 | Team Udayavani |

ನವದೆಹಲಿ: ದೇಶವು ಹೊಸ ಭರವಸೆ ಮತ್ತು ಹೊಸ  ಶಕ್ತಿಯೊಂದಿಗೆ ಮುನ್ನಡೆಯಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಅವರು ಟ್ವೀಟ್​ ಮೂಲಕ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.

Advertisement

2021 ರ ಶುಭಾಶಯಗಳು! ಈ ವರ್ಷ ಉತ್ತಮ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ. ಭರವಸೆ ಮತ್ತು ಸ್ವಾಸ್ಥ್ಯದ ಮನೋಭಾವ ಗೆಲುವು ಸಾಧಿಸಲಿ’ ಎಂದು ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡ ಟ್ವೀಟ್​ ಮಾಡಿದ್ದು, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು! ಹೊಸ ವರ್ಷವು ಹೊಸ ಆರಂಭವನ್ನು ಮಾಡಲು ವೈಯಕ್ತಿಕ ಹಾಗೂ ಸಾಮೂಹಿಕ ಅಭಿವೃದ್ಧಿಗೆ ಅವಕಾಶ ಒದಗಿಸುತ್ತದೆ. ಕೋವಿಡ್  ಪರಿಸ್ಥಿತಿಯಿಂದ ಉಂಟಾಗುವ ಸವಾಲುಗಳು ಒಗ್ಗಟ್ಟಿನಿಂದ ಎದುರಿಸೋಣ ಎಂದು ಟ್ವೀಟ್​ ಮಾಡಿದ್ದಾರೆ.

Advertisement

ಇದನ್ನೂ ಓದಿ: ಮಕ್ಕಳ ವರ್ತನೆಯಿಂದ ಬೇಸರ; ಅರ್ಧದಷ್ಟು ಆಸ್ತಿಯನ್ನು ಸಾಕುನಾಯಿ ಹೆಸರಿಗೆ ಬರೆದ ರೈತ

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಟ್ವೀಟ್ ಮಾಡಿ, ದೇಶದ ಎಲ್ಲಾ ನಾಗರೀಕರಿಗೂ 2021 ಹೊಸ ವರ್ಷದ ಶುಭಾಶಯಗಳು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next