Advertisement

ದಾಖಲೆ ತಿರುಚಿ ಒಕ್ಕಲೆಬ್ಬಿಸುವ ಹುನ್ನಾರ

09:46 PM Aug 16, 2019 | Lakshmi GovindaRaj |

ದೇವನಹಳ್ಳಿ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೂಗಳತೆ ದೂರದಲ್ಲಿರುವ ಸಾದಹಳ್ಳಿ ಗ್ರಾಮದ ಜಮೀನಿನಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಾಗಿರವ ಬಡವರನ್ನು, ಪ್ರಭಾವಿ ವ್ಯಕ್ತಿಗಳು ನಕಲಿ ದಾಖಲೆ ಸೃಷ್ಟಿಸಿ ಅಮಾಯಕ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಹುನ್ನಾರ ನಡೆಸಿದ್ದಾರೆ ಎಂದು ಎಂದು ಪ್ರಜಾ ವಿಮೋಚನಾ ಬಹುಜನ ಸಮಿತಿ ಸಂಸ್ಥಾಪಕ ಅಧ್ಯಕ್ಷ ಬಿಜ್ಜವಾರ ನಾಗರಾಜ್‌ ಗಂಭೀರ ಆರೋಪ ಮಾಡಿದ್ದಾರೆ.

Advertisement

ಸುಮಾರು ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿರುವ ಕುಟುಂಬಗಳ ಗೋಳು ಕೇಳುವವರಿಲ್ಲದಂತಾಗಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಯಾಗದಂತೆ ಹಾಗೂ ಅಮಾಯಕ ಕುಟುಂಬಗಳ ಹಿತರಕ್ಷಣೆ ಮಾಡಬೇಕು. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ನಾಗರಾಜ್‌ ಆಗ್ರಹಿಸಿದರು.

ತಾಲೂಕಿನ ಸಾದಹಳ್ಳಿ ಗ್ರಾಮದ ಗುಡಿಸಲು ಬಳಿ ಮಣ್ಣಿನ ರಾಶಿ ಹಾಕುತ್ತಿರುವುದರ ಕುರಿತು ಮಾತನಾಡಿ, ಸಾದಹಳ್ಳಿ ಗ್ರಾಮದಲ್ಲಿ ಬಡವರು ಗುಡಿಸಿಲುಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಸ್ಥಳೀಯ ಪ್ರಭಾವಿ ವ್ಯಕ್ತಿಗಳು ನಕಲಿ ದಾಖಲೆ ಸೃಷ್ಟಿಸಿ ಅಮಾಯಕ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸಾದಹಳ್ಳಿ ಗ್ರಾಮದ ಸರ್ವೇ ನಂ.196ರಲ್ಲಿ ಸರ್ಕಾರಿ ಭೂಮಿ ಮತ್ತು ಬಿ ಖರಾಬು ಸೇರಿ ಒಟ್ಟು 7.36 ಎಕರೆ ಜಾಗವಿದೆ. ಇದರ ಪೈಕಿ ಎನ್‌.ಹನುಮಂತಪ್ಪ ಎನ್ನುವವರಿಗೆ 3.14 ಎಕರೆ ಜಾಗ ಮಂಜೂರಾಗಿತ್ತು.

1992ರಲ್ಲಿ ಆಗಿನ ಕುಂದಾಣ ಮಂಡಲ್‌ ಪಂಚಾಯಿತಿಗೆ ತಮ್ಮ ಹೆಸರಿನಲ್ಲಿದ್ದ 3.14 ಎಕರೆ ಜಾಗದಲ್ಲಿ ದಲಿತರ ನಿವೇಶನಕ್ಕಾಗಿ ದಾನಪತ್ರದ ಮೂಲಕ 1.30 ಎಕರೆ ಮಾತ್ರ ಹಸ್ತಾಂತರಿಸಿದ್ದರು. ಉಳಿದ 4.22 ಎಕರೆ ಬಿ ಖರಾಬ್‌ ಎಂದು ದಾಖಲೆಯಲ್ಲಿ ಈ ಹಿಂದೆ ನಮೂದಿಸಲಾಗಿತ್ತು. 2008ರಲ್ಲಿ 4.22 ಎಕರೆ ಬಿ ಖರಾಬು ಜಾಗವನ್ನು ಎ ಖರಾಬು ಎಂದು ತಿರುಚಲಾಗಿದೆ ಎಂದು ಆರೋಪಿಸಿದರು.

ಕಳೆದ 40 ವರ್ಷಗಳಿಂದ ಸಾದಹಳ್ಳಿ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡಿಕೊಂಡು ಬಡವರು ವಾಸವಾಗಿದ್ದಾರೆ. ಪ್ರಸ್ತುತ ಹತ್ತು ಕುಟುಂಬಗಳನ್ನು ಎತ್ತಂಗಡಿ ಮಾಡುವ ಹುನ್ನಾರ ಮಾಡುತ್ತಿದ್ದಾರೆ. ಗುಡಿಸಲು ಕಟ್ಟಿಕೊಂಡಿರುವ ಕುಟುಂಬಗಳು ಬಿಪಿಎಲ್‌ ಕಾರ್ಡ್‌, ಮತದಾರ ಚೀಟಿ, ಆಧಾರ್‌ ಕಾರ್ಡ್‌ ಸೇರಿದಂತೆ ಹಲವು ದಾಖಲೆಗಳನ್ನು ಪಡೆದುಕೊಂಡಿದ್ದಾರೆ.

Advertisement

ಪ್ರಭಾವಿ ವ್ಯಕ್ತಿಗಳು ಮನೆ ಸುತ್ತಲೂ ಬೃಹತ್‌ ರಾಶಿ ಮಣ್ಣು ಹಾಕುತ್ತಿದ್ದಾರೆ. ಗುಡಿಸಲು ನಿವೇಶನ ಸಕ್ರಮಗೊಳಿಸುವಂತೆ 2019 ಮಾರ್ಚ್‌ 1ರಂದು ತಹಶೀಲ್ದಾರ್‌ರವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರುವುದಿಲ್ಲ. ಕಂದಾಯ ಅಧಿಕಾರಿಗಳು ಕನಿಷ್ಠ ಪರಿಶೀಲನೆ ನಡೆಸದೆ. ಅಧಿಕಾರಿಗಳಿಗೆ ಬಡವರ ಮೇಲೆ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next