ನವದೆಹಲಿ: ಅಧಿಕ ಟಿಡಿಎಸ್ ಕಡಿತದಿಂದ ಪಾರಾಗಬೇಕೆಂದರೆ ಈ ತಿಂಗಳ 31ರೊಳಗೆ ನಿಮ್ಮ ಪ್ಯಾನ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿ!
ಹೀಗೆಂದು ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ಸೂಚಿಸಿದೆ. ಐಟಿ ನಿಯಮಗಳ ಪ್ರಕಾರ, ಪ್ಯಾನ್ ಸಂಖ್ಯೆಯನ್ನು ಆಧಾರ್ ಜತೆ ಲಿಂಕ್ ಮಾಡದೇ ಇದ್ದರೆ, ನಿಗದಿತ ಮೊತ್ತಕ್ಕಿಂತ ದುಪ್ಪಟ್ಟು ಟಿಡಿಎಸ್ ಕಡಿತಗೊಳ್ಳಲಿದೆ. ಮೇ 31ರೊಳಗೆ ಲಿಂಕ್ ಮಾಡಿದರೆ ಈ ಸಮಸ್ಯೆ ಇರುವುದಿಲ್ಲ.
ಪ್ಯಾನ್ ಕಾರ್ಡ್ ಹೊಂದಿರುವ ಪ್ರತಿ ತೆರಿಗೆದಾರನೂ ಪ್ಯಾನ್‌ಗೆ ಆಧಾರ್ ಲಿಂಕ್ ಮಾಡಲು ಕಳೆದ ವರ್ಷವೇ ಐಟಿ ಇಲಾಖೆ ಗಡುವು ವಿಧಿಸಿತ್ತು. ಯಾರು ಲಿಂಕ್ ಮಾಡಿಲ್ಲವೋ ಅವರ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ ಎಂದೂ ಎಚ್ಚರಿಸಿತ್ತು. ಯಾರ ಪ್ಯಾನ್ ನಿಷ್ಕ್ರಿಯಗೊಂಡಿರುತ್ತದೋ, ಅವರ ವೇತನ, ಹೂಡಿಕೆ ಮೇಲಿನ ಬಡ್ಡಿ ಇತ್ಯಾದಿಗಳ ಮೇಲೆ ಹೆಚ್ಚುವರಿ ಟಿಡಿಎಸ್ ಕಡಿತಗೊಳ್ಳುತ್ತದೆ.
ಇದೇ ವೇಳೆ, ಮೇ 31ರೊಳಗೆ ಎಸ್‌ಎಫ್ಟಿ(ಸ್ಟೇಟ್‌ಮೆಂಟ್ ಆಫ್ ಸ್ಪೆಸಿಫೈಡ್ ಫಿನಾನ್ಶಿಯಲ್ ಟ್ರಾನ್ಸಾಕ್ಷನ್ಸ್) ಫೈಲ್ ಮಾಡುವ ಮೂಲಕ ದಂಡದಿಂದ ಪಾರಾಗುವಂತೆ ಬ್ಯಾಂಕುಗಳು, ಎನ್‌ಬಿಎಫ್ಸಿ, ಅಂಚೆ ಕಚೇರಿಗಳು, ಮ್ಯೂಚುವಲ್ ಫಂಡ್ ಟ್ರಸ್ಟಿಗಳು, ಕಂಪನಿಗಳು, ಫಾರೆಕ್ಸ್ ಡೀಲರ್‌ಗಳಿಗೆ ಐಟಿ ಇಲಾಖೆ ಸೂಚಿಸಿದೆ. ಎಸ್‌ಎಫ್ಟಿ ಫೈಲ್ ಮಾಡುವಾಗ ವಿಳಂಬವಾದರೆ, ಪ್ರತಿ ದಿನ 1 ಸಾವಿರ ರೂ. ದಂಡ ಬೀಳುತ್ತದೆ.
ಇದನ್ನೂ ಓದಿ: Lok sabha Election: ತ್ರಿಕೋನ ಪೈಪೋಟಿ- ಒಗ್ಗಟ್ಟಿಗೆ ಬಾದಾಮಿ ಬೆಟ್ಟದಷ್ಟೇ ತಾಪತ್ರಯ