Advertisement

ಮೇ 7ಕ್ಕೆ ಎಸ್ಸೆಸ್ಸೆಲ್ಸಿ ಫ‌ಲಿತಾಂಶ 

07:00 AM Apr 07, 2018 | Team Udayavani |

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿರುವ 8.54 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಮೇ 7ಕ್ಕೆ ನಿರ್ಧಾರವಾಗಲಿದ್ದು, ಮೇ 8ಕ್ಕೆ ಎಲ್ಲ ಪ್ರೌಢ ಶಾಲೆಗಳಲ್ಲೂ ಫ‌ಲಿತಾಂಶ ಲಭ್ಯವಾಗಲಿದೆ. ರಾಜ್ಯದ 14,385 ಪ್ರೌಢಶಾಲೆಗಳ 8,54,424 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾರೆ. 33 ವಿಷಯ ಹಾಗೂ 7 ಮಾಧ್ಯಮಗಳ ಪರೀಕ್ಷೆ 2,817 ಕೇಂದ್ರಗಳಲ್ಲಿ ನಡೆದಿದೆ. ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು (ಎಸ್ಸೆಸ್ಸೆಲ್ಸಿ ಬೋರ್ಡ್‌) ಮೇ 7ರ ಸಂಜೆ ಫ‌ಲಿತಾಂಶ ಪ್ರಕಟಿಸಿ, ಅಂದೇ ಎಲ್ಲಾ ಶಾಲೆಗಳಿಗೂ ಫ‌ಲಿತಾಂಶದ ಮಾಹಿತಿಯನ್ನು ರವಾನಿಸಲಿದ್ದು, ಮೇ 8ರಂದು ಎಲ್ಲಾ ಶಾಲೆಗಳಲ್ಲಿ ಫ‌ಲಿತಾಂಶ ದೊರೆಯಲಿದೆ.

Advertisement

ಪರೀಕ್ಷೆ ಪ್ರಕ್ರಿಯೆಯನ್ನು ಪಾರದರ್ಶಕ ಹಾಗೂ ವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ಕರ್ನಾಟಕ ಸುರಕ್ಷಿತ ಪರೀಕ್ಷಾ ಪದ್ಧತಿಯಿಂದಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಯಾವುದೇ ಸೋರಿಕೆ ಅಥವಾ ಅಕ್ರಮ ನಡೆದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಡೆಯುತ್ತಿದ್ದ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇವೆ.  ಬಾರ್‌ ಕೋಡಿಂಗ್‌, ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ, ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳ ಸಾಗಾಟದಲ್ಲಿ ಡಿಜಿಟಲ್‌ ತಂತ್ರಾಂಶದ ಬಳಕೆ, ಪ್ರಶ್ನೆ ಪತ್ರಿಕೆ ತಯಾರಿಕಾ ವಿಧಾನದಲ್ಲಿ ಅಳವಡಿಸಿದ ನೂತನ ಗೌಪ್ಯತಾ ವಿಧಾನ ಸೇರಿ ನಾಲ್ಕು ಹಂತದ ಸುರಕ್ಷಾ ವಿಧಾನ ಫ‌ಲ ನೀಡಿದೆ ಎಂದು ಹೇಳಿದರು.

ಮೌಲ್ಯಮಾಪನ: ಏಪ್ರಿಲ್‌ 15ರಂದು ಜಿಲ್ಲಾವಾರು ಅಥವಾ ವಿಷಯವಾರು ಮೌಲ್ಯಮಾಪನ ಕೇಂದ್ರಗಳಿಗೆ ಜಂಟಿ
ಮುಖ್ಯಮೌಲ್ಯಮಾಪಕರು ಹಾಗೂ ಉಪ ಮುಖ್ಯಮೌಲ್ಯಮಾಪಕರು ಹಾಜರಾಗಲಿದ್ದಾರೆ. ಅಂದೇ ಕೀ ಆನ್ಸರ್‌ ಮತ್ತು ಸ್ಕೀಂ ಆಫ್ ಇವೇಲ್ಯೂಷನ್‌ ಬಗ್ಗೆ ತರಬೇತಿ ನೀಡಲಾಗುತ್ತದೆ. ಏ.16ಕ್ಕೆ ಸಹಾಯಕ ಮೌಲ್ಯಮಾಪಕರು ಮೌಲ್ಯಮಾಪನಾ ಕೇಂದ್ರಕ್ಕೆ ಬರಲಿದ್ದಾರೆ. ಏ.25ರ ವರೆಗೆ ಮೌಲ್ಯಮಾಪನ ನಡೆಯಲಿದೆ. 8.54 ಲಕ್ಷ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನ 10 ದಿನದೊಳಗೆ ಮುಗಿಯಲಿದೆ ಎಂಬ ಮಾಹಿತಿ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next