Advertisement
ಯಾಕುಬ್ ಕಾರ್ಕಳ: ಭಾರತ ಸರಕಾರದ ಈ ಕೆಲಸ ತುಂಬಾ ಒಳ್ಳೇದು ಹೊರ ದೇಶದಲ್ಲಿ ಭಾರತದ ಪ್ರಜೆಗಳು ಕಷ್ಟದಲ್ಲಿ ಇರುವವರನ್ನು ಕರೆ ತರುದು ನಮ್ಮ ಸರಕಾರದ ಜವಾಬ್ದಾರಿಯಾಗಿದೆ. ಕೊಲ್ಲಿ ರಾಷ್ಟ್ರದ ಕುವೈಟ್ ನಲ್ಲಿ ನೆಲಸಿರುವ ಹಲವು ವರ್ಷಗಳಿಂದ, ಪಾಸ್ಪೋರ್ಟ್ ಇಲ್ಲದೆ, ಇಲ್ಲಿಯ ಕೆಲಸದ ರೆಸಿಡೆನ್ಸಿಯನ್ನು ರಿನೀವಲ್ ಮಾಡದೇ ತಪ್ಪಿಸಿ ಕೊಂಡವರು ಮತ್ತು ಇನ್ನಿತರ ಕಷ್ಟ ಇದ್ದು ಊರಿಗೆ ಹೋಗದೆ ಇದಂತಹ ಭಾರತೀಯರಿಗೆ ಕುವೈಟ್ ಸರಕಾರ ವು 20 ದಿನಗಳಿಂದ ಮೇಲ್ಕಂಡ ಭಾರತೀಯರ ಎಲ್ಲಾ ಖರ್ಚು ವೆಚ್ಚಗಳನ್ನು ಉಚಿತವಾಗಿ ನೀಡುತ್ತಿದ್ದು ಅದರೊಂದಿಗೆ ವಿಮಾನದ ಟಿಕೇಟಿನ ಹಣವನ್ನು ಕುವೈಟ್ ಸರಕಾರ ಬರಿಸಲಿದೆ ಭಾರತ ಸರಕಾರ ಹಾಗೂ ಕುವೈಟ್ ಸರಕಾರಕ್ಕೆ ತುಂಬು ಹೃದಯದ ಅಭಿನಂದನೆಗಳು
Related Articles
Advertisement
ವೇಣು ಎಸ್ ವೇಣು: ಕಾರ್ಫೋರೇಟರುಗಳ ವಿಷಯ ಇರಲಿ ಅವರ ಮಕ್ಕಳು ವಿದೇಶಗಳಲ್ಲಿ ನೆಮ್ಮದಿಯಾಗಿ ವಿದೇಶದ ಮನೆಯಲ್ಲಿ ತಿಂದುಕೊಂಡು ಇದ್ದಾರೆ ಹಾಗಾಗಿ ಮೊದಲು ತನ್ನ ದೇಶಕ್ಕಾಗಿ ದುಡಿಯುತ್ತಿದ್ದ, ದೇಶದ ವಿವಿಧ ರಾಜ್ಯಗಳಲ್ಲಿ ಸಿಲುಕಿ ಒದ್ದಾಡುತ್ತಿರುವ ಕೂಲಿಕಾರ್ಮಿಕರನ್ನು ಅವರ ಮನೆ ಸೇರಿಸಿ. ನಂತರ ವಿದೇಶಿ ವ್ಯಾಮೋಹದಿಂದ ವಿದೇಶಕ್ಕೆ ಹಾರಿಹೋಗಿ, ಅಲ್ಲೇ ಉಳಿದಿರುವ, ಕೋಟಿ ಕೋಟಿ ಕುಳಗಳ ಮಕ್ಕಳನ್ನು ಕರೆತರಲಿ.
ದಾವೂದ್ ಕೂರ್ಗ್: ಈ ಎರ್ ಲಿಫ್ಟ್ ಅಂದ್ರೆ ಫ್ರೀ ಆಗಿ ಕರೆದುಕೊಂಡು ಬರುವುದು ಎಂದೇ ಎಲ್ಲರು ಭಾವಿಸಿದ್ದಾರೆ. ಅನಿವಾಸಿ ಭಾರತೀಯರಿಂದ ಪ್ರಯಾಣಕ್ಕೆ 3 ಪಟ್ಟು ಹೆಚ್ಚು ದುಡ್ಡನ್ನು ವಸೂಲಿ ಮಾಡ್ತಿದ್ದಾರೆ. ಇವರು ಲಿಫ್ಟ್ ಕೊಡದೇ ಇರುವುದು ಉತ್ತಮ ಕೋವಿಡ್ ಮುಗಿದಮೇಲೆ ಕಡಿಮೆ ವೆಚ್ಚದ ಟಿಕೆಟ್ ನಲ್ಲೇ ಬರಲಿ ಪಾಪ.