Advertisement

ಮೇ 7: ಬಪ್ಪನಾಡು ದೃಢ ಕಲಶ, ನಿತ್ಯ ಅನ್ನದಾನ ಆರಂಭ

10:32 AM May 04, 2018 | |

ಮೂಲ್ಕಿ : ಒಂಬತ್ತು ಮಾಗಣೆಯ ಮೂಲ್ಕಿ ಸೀಮೆಯ ವ್ಯಾಪ್ತಿಗೆ ಒಳಪಟ್ಟಿರುವ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೆಶ್ವರೀ ದೇವಸ್ಥಾನದಲ್ಲಿ ಮಾರ್ಚ್‌ನಲ್ಲಿ ನಡೆದ ಬ್ರಹ್ಮಕಲಶದ ಅನಂತರ ಕ್ಷೇತ್ರದಲ್ಲಿ 48 ದಿನಗಳಲ್ಲಿ ನಡೆಯ ಬೇಕಾಗಿರುವ ದೃಢಕಲಶ ಧಾರ್ಮಿಕ ಕಾರ್ಯಕ್ರಮ ಮೇ 7ರಂದು ನಡೆಯಲಿದೆ ಎಂದು ದೇವಾಲಯದ ಆಡಳಿತ ಮೋಕ್ತೇಸರ ಎನ್‌.ಎಸ್‌. ಮನೋಹರ ಶೆಟ್ಟಿ ಮತ್ತು ದೇಗುಲ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಂ. ನಾರಾಯಣ ಶೆಟ್ಟಿ ತಿಳಿಸಿದ್ದಾರೆ.

Advertisement

ಗುರುವಾರ ಕ್ಷೇತ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮ ಮತ್ತು ಯೋಜನೆಗಳ ಬಗ್ಗೆ ಅವರು ಮಾಹಿತಿ ನೀಡಿದರು. ನಿತ್ಯ ಅನ್ನದಾನ ಸೇವೆಯಲ್ಲಿ ಭಾಗವಹಿಸಲು ಭಕ್ತರಿಗೆ ಅವಕಾಶ ನೀಡಲಾಗಿದ್ದು 1ಲಕ್ಷ ರೂ. ಠೇವಣಿ ಇಟ್ಟವರ ಹೆಸರಿನಲ್ಲಿ ಅವರು ಸೂಚಿಸಿದ ದಿನ ಪ್ರತಿ ವರ್ಷ ಅನ್ನದಾನ ಸೇವೆಯನ್ನು ನಡೆಸಲಾಗುವುದಲ್ಲದೆ 10 ಸಾವಿರ ರೂ. ಸೇವಾ ರೂಪದಲ್ಲಿ ಸಲ್ಲಿಸುವವರಿಗೆ ಅವರ ಹೆಸರಿನಲ್ಲಿ ಒಂದು ದಿನದ ಅನ್ನ ಪ್ರಸಾದ ವಿತರಣೆ ನಡೆಸಲಾಗುವುದು ಎಂದು ಆಡಳಿತ ಮೋಕ್ತೇಸರ ಮನೋಹರ ಶೆಟ್ಟಿ ತಿಳಿಸಿದರು.

ದೇಗುಲದ ಎರಡೂ ಯಾತ್ರಿ ನಿವಾಸಗಳಲ್ಲಿ ಆಗಬೇಕಾಗಿರುವ ಕೆಲವು ಮೂಲಸೌಕರ್ಯದ ಕೆಲಸಗಳು ಪೂರ್ಣಗೊಂಡ ತತ್‌ಕ್ಷಣದಿಂದ ವ್ಯವಸ್ಥಿತವಾಗಿ ಭಕ್ತ ಉಪಯೋಗಕ್ಕೆ ಒದಗಿಸುವ ಬಗ್ಗೆ ಆಡಳಿತೆಯು ಕಾರ್ಯಪ್ರವೃತ್ತವಾಗಿದೆ ಎಂದು ಅವರು ತಿಳಿಸಿದ್ದಾರೆ. ಅಭಿವೃದ್ಧಿ ಸಮಿತಿಯು ಮುಂದಿನ ಮೂರು ವರ್ಷಗಳ ಅವಧಿಗೆ ದೇಗುಲದಲ್ಲಿ ನಡೆಯಬೇಕಾಗಿರುವ ವಿವಿಧ ಕಾರ್ಯಯೋಜನೆಗಳ ಪೂರೈಕೆಗಾಗಿ ಆಡಳಿತದ ಜತೆ ಕೈ ಜೋಡಿಸಲಿದೆ ಎಂದು ನಾರಾಯಣ ಶೆಟ್ಟಿ ತಿಳಿಸಿದರು.

ಬಂಡಸಾಲೆ ಶೇಖರ್‌ ಶೆಟ್ಟಿ, ಉಪಾಧ್ಯಕ್ಷರಾದ ಬಾಳದ ಗುತ್ತು ಕೆ. ಕರುಣಾಕರ ಶೆಟ್ಟಿ, ಎಚ್‌.ವಿ. ಕೋಟ್ಯಾನ್‌, ಕಾರ್ಯದರ್ಶಿ ಸುನೀಲ್‌ ಆಳ್ವ ಹಾಗೂ ಕ್ಷೇತ್ರದ ಇಒ ಜಯಮ್ಮ ಉಪಸ್ಥಿತರಿದ್ದರು.

ನಿತ್ಯ ಅನ್ನದಾನ ಸೇವೆ 
ಈ ಸಂದರ್ಭ ನಿತ್ಯ ಅನ್ನ ಪ್ರಸಾದ ವಿತರಣೆಯ ಯೋಜನೆಯನ್ನು ಮೊದಲ ಹಂತವಾಗಿ ಮೇ 7ರಿಂದ ದೇವಾಲಯದಲ್ಲಿ ಆರಂಭಿಸಲಾಗುವುದು. ಎಂದು ಸಮಿತಿ ತಿಳಿಸಿದೆ. ಯೋಜನೆಗೆ ಬೇಕಾದ ಎಲ್ಲ ವ್ಯವಸ್ಥೆಗಳು ಪೂರ್ಣಗೊಂಡ ಆನಂತರ ವಿಸ್ತಾರವಾಗಿ ಅನ್ನ ಪ್ರಸಾದ ವಿತರಣೆ ನಡೆಸಲು ತೀರ್ಮಾನಿಸಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next