Advertisement

ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದು ಕೋವಿಡ್-19 ತಡೆಗಟ್ಟುವ ಕಾರ್ಯಕ್ಕೆ ಹಿನ್ನಡೆಯಾಗಬಹುದೇ

06:38 PM May 05, 2020 | keerthan |

ಮಣಿಪಾಲ: ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದು ಕೋವಿಡ್-19  ತಡೆಗಟ್ಟುವ ಕಾರ್ಯಕ್ಕೆ ಹಿನ್ನಡೆಯಾಗಬಹುದೇ  ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ಶ್ರೀನಿವಾಸ್ ಜೆಜಿ: ಒಂದು ಗಾದೆ ಮಾತು ನೆನಪಾಯಿತು ಆದಾಯ ಮೂರು ರೂಪಾಯಿ ಖರ್ಚು ಆರು ರೂಪಾಯಿಯಾದರೆ…ಸರ್ಕಾರ ಆಗು ಹೋಗುಗಳ ಬಗೆಗೆ ಚಿಂತಿಸಬೇಕಿತ್ತು

ಪ್ರೇಮಚಂದ್ರ ಕಾರಂತ್:  ಖಂಡಿತ, ಹಾಗೂ ಸರಕಾರದ ಬೊಕ್ಕಸಕ್ಕೆ ಬರುವ ಆದಾಯಕ್ಕಿಂತ ಹೆಚ್ಚು ಇತರರಿಗೆ ಹೆಚ್ಚು ಆದಾಯ ಬರುತ್ತದೆ. ಅದನ್ನು ವಿವರಿಸಲಾಗದು, ಅಸಹ್ಯ.’

ಮೊಹಮ್ಮದ್ ಹ್ಯಾರಿಸ್ ಜಿಎ:  ಇನ್ನಾದರೂ ಸರಕಾರಕ್ಕೆ ನಿಯಂತ್ರಣಕ್ಕೆ ತರಬಹುದು. ನಾಳೆಯಿಂದ ಪುನಃ ಮಧ್ಯ ವನ್ನು ಸದ್ಯಕ್ಕೆ ಬಂದ್ ಮಾಡಬಹುದು

ಸುನೀಲ್ ಕುಮಾರ್ ಶೆಟ್ಟಿ:  ಹೌದು. ಕೋವಿಡ್ ವಿರುದ್ಧದ ಇಷ್ಟು ದಿನದ ಹೋರಾಟ ಒಂದೇ ದಿನದಲ್ಲಿ ವ್ಯರ್ಥವಾಗಿ ಬಿಡುವ ಎಲ್ಲಾ ಸಾದ್ಯತೆಯಿದೆ. ಕಿಲೋಮೀಟರುಗಳ ಉದ್ದದ ಕ್ಯೂನಲ್ಲಿ ಒಬ್ಬನೇ ಒಬ್ಬ ಸೊಂಕಿತನಿದ್ದರೂ ಸಾಕಲ್ಲವೇ??

Advertisement

ಮನುಗೌಡ ನಾಯಕ್: ತಪ್ಪು, ದಿನಸಿ,ತರಕಾರಿ, ಹಾಲು ಇವುಗಳು ಯಾವತ್ತೂ ನಿಂತಿಲ್ಲಾ.ಆಗ ಜಾಸ್ತಿ ಆಗದೆ ಇರೋದು ಈಗ ಯಾಕೆ ಆಗುತ್ತೆ

ರಾಜು ಜಗನ್ನಾಥ್:   ಹೌದು, ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ ಅದಕ್ಕೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಜನರ ಬೊಕ್ಕಸದಲ್ಲಿ ಹಣವಿಲ್ಲ, ಅವರು ಏನು ಮಡಬೇಕು. ಹಣಕ್ಕಾಗಿ ಈ ದಾರಿ ಸರಿಯಲ್ಲ

ಮೋಹನ್ ಬಾಳಿಗ: ಖಂಡಿತಾ ಇಲ್ಲ ,ಇದು ದೊಡ್ಡ ರಾಜಕೀಯ ಪ್ರೇರಿತ ವ್ಯವಸ್ಥೆ ,ಜನರು ಕುಡಿತವನ್ನು ಬಿಡಿಸಿದರೆ ನಾಳೆ ಸ್ವಲ್ಪ ಎಣ್ಣೆ ,ಪೊಟ್ಟಣ ಬಿರಿಯಾನಿಗೆ ಓಟು ಹಾಕುವವರು ಯಾರು ?? , ಜನರು ಎಚ್ಚರಿಕೆಯಿಂದ ಇಲ್ಲದೇ ಹೋದರೆ ನಮ್ಮ ದೇಶದ ಏಳಿಗೆ ಯಾವಾಗ ?? ಆಡಳಿತ ,ವಿಪಕ್ಷ ದವರು ಸೇರಿ ನಮ್ಮ ದೇಶದ ಜನರನ್ನು ದೋಚುವ ಪಿತೂರಿ ಅಷ್ಟೇ .!!!

ನೀಲಕಂಠ ಮಲಿಪಾಟೀಲ್:  ಕುಡಿದು ಕುಳಿತವನಿಗೆ ಸೋಶಿಯಲ್ ಡಿಸ್ಟೆನ್ಸ್ ಬಗ್ಗೆ ಹೇಳಿದರೆ ಏನು ಗೊತ್ತಾಗುವುದಿಲ್ಲ.ಇಂದು ಮಧ್ಯದ ಅಂಗಡಿಗಳು ತೆರೆದ ನಂತರ ಯಾವ ರೀತಿಯಲ್ಲಿ ಜನ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ನೋಡಿದ್ದಾಗಿದೆ.ಸರ್ಕಾರದ ಈ ನಿರ್ಧಾರದಿಂದ ಕೋವಿಡ್ ವಿರುದ್ಧದ ಹೋರಾಟಕ್ಕೆ ಹಿನ್ನಡೆ ಆಗುವದಂತು ನಿಜ. ಸರಕಾರದ ನಿರ್ಧಾರ ಸರಿಯಾಗಿಲ್ಲ ಅನಿಸುತ್ತೆ.

ದಾವೂದ್ ಕೂರ್ಗ್: ಖಂಡಿತ ಇಲ್ಲ ಜನರು ಮುಗಿಬಿದ್ದು ಗುಂಪಾಗಿ ಬಂದು ಮದ್ಯ ಕರೀದಿಸಿದ್ರೂ ಏನೂ ಆಗಲ್ಲ. ರಸ್ತೆಯಲ್ಲಿ ಒಬ್ಬರೇ ಸುತ್ತಾಡಿದ್ರೆ ಮಾತ್ರ ಬರುತ್ತೆ.

Advertisement

Udayavani is now on Telegram. Click here to join our channel and stay updated with the latest news.

Next