Advertisement

ಮೇ 26: ಮುಂಬಯಿಯಲ್ಲಿ ಕೈವಲ್ಯ ಮಠಾಧೀಶರ ದೀಕ್ಷಾ ರಜತ ಮಹೋತ್ಸವ

05:01 PM May 22, 2019 | Vishnu Das |

ಮುಂಬಯಿ: ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮಾಜದ ಅನುಯಾಯಿಗಳುಳ್ಳ ಮಠಗಳ ಸಾಲಿನಲ್ಲಿ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಅತಿ ಆದಿ ಮಠವೂ ಹಾಗೂ ಪ್ರಾಚೀನ ವಾದದು. ಸುಮಾರು 2,700 ವರ್ಷಗಳ ಇತಿಹಾಸವುಳ್ಳ ಈ ಮಠವು ಗೋವಾ, ಪೊಂಡಾದ ಕವಳೆ ಎಂಬ ಸ್ಥಾನದಿಂದ ತಮ್ಮ ಆಡಳಿತವನ್ನು ನಡೆಸಿ ಭಾರತಾದ್ಯಂತ ಹಲವು ಶಾಖೆಗಳನ್ನು ಹೊಂದಿದೆ.

Advertisement

ಅತಿ ಪ್ರಾಚೀನ ಸ್ಮಾರ್ಥ ಪಂಥಕ್ಕೆ ಸೇರಿದ ಗೌಡಪಾದಾಚಾರ್ಯ ಕೈವಲ್ಯ ಮಠದ ಆರಾಧ್ಯ ದೇವತೆ ಶ್ರೀ ಭವಾನಿ ಶಂಕರ. ಕ್ರಿಸ್ತಪೂರ್ವ 230ರಲ್ಲಿಮೊಟ್ಟ ಮೊದಲನೆ ಗುರುವರ್ಯರಾದ ಶ್ರೀಮದ್‌ ಗೌಡಪಾದಾಚಾರ್ಯ ಗುರುವರ್ಯ ಅವರ ಶಿಷ್ಯ ಸ್ವಾಮೀಜಿ ಶ್ರೀ ಗೋವಿಂದ ಭಗವದ್‌ಪಾದಾ ಚಾರ್ಯರು ಹಿಂದೂ ಸಂಸ್ಕೃತಿಯ ಬುನಾದಿಯಾಗಿರುವ ಗಣಮಾನ್ಯ ಶ್ರೇಷ್ಠ ಗುರು ಶ್ರೀ ಆದಿಶಂಕರರಿಗೆ ದೀಕ್ಷೆಯನ್ನು ದಯಪಾಲಿಸಿ ಗೋಮಾಂತಕದಲ್ಲಿ (ಗೋವಾ) ಮಠವನ್ನು ಸ್ಥಾಪಿಸಿ ಭವಾನಿ ಶಂಕರ ದೇವರನ್ನು ಆರಾಧಿಸುತ್ತಾ ಧರ್ಮ ಪ್ರಚಾರಗೈದರು.

ಶ್ರೀ ಸಂಸ್ಥಾನದ ವಿದ್ಯಮಾನ ಗುರುವರ್ಯರಾದ ಪರಮಪೂಜ್ಯ ಶ್ರೀಮದ್‌ ಶಿವಾನಂದ ಸರಸ್ವತಿ ಸ್ವಾಮೀಜಿ ಅವರು ಸಂಸ್ಥಾನದ 77ನೇ ಯತಿವರ್ಯರಾಗಿ ಗುರು ಶ್ರೀಮದ್‌ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರಿಂದ ದೀಕ್ಷೆಯನ್ನು ಸ್ವೀಕರಿಸಿ 1994ನೇ ಇಸವಿಯಲ್ಲಿ ಮಠದ ಪಟ್ಟವನ್ನು ಅಲಂಕರಿಸಿದರು. ಶ್ರೀಗಳು ಅಂದಿನಿಂದ ಹಲವು ಮಠ ಮಂದಿರಗಳನ್ನು ಜೀರ್ಣೋದ್ಧಾರಗೊಳಿಸಲು ಸಕ್ರಿಯರಾದಷ್ಟೇ ಅಲ್ಲ ಭಾರತದಲ್ಲೆಡೆ ಧರ್ಮಪ್ರಚಾರಗೈಯಲು ಸಂಚರಿಸಿ ಶಿಷ್ಯ ವರ್ಗಕ್ಕೆ ಬೋಧಿಸುತ್ತಿದ್ದಾರೆ.

ಮುಂಬಯಿ ದಕ್ಷಿಣ ಭಾಗದಲ್ಲಿ ನೆಲೆಸಿರುವ ಬಾಣಗಂಗಾ ಪರಿಸರದ ಮಠದ ಮಹತ್ವದ ಶಾಖೆ ವಾಲ್ಕೇಶ್ವರದ ಶಾಂತಾದುರ್ಗ ದೇವಳ ಕವಳೇ ಮಠದ ವತಿಯಿಂದ ಮೇ 26ರಂದು ಮುಂಬಯಿಯ ದಾದರ್‌ಪೂರ್ವದ ಕಿಂಗ್ಸ್‌ ಜಾರ್ಜ್‌ ಸ್ಕೂಲಿನ ಬಿ.ಎನ್‌. ವೈದ್ಯ ಸಭಾಗೃಹದಲ್ಲಿಸಂಜೆ 5 ಗಂಟೆಯಿಂದ ಅತಿ
ವಿಜೃಂಭಣೆಯಿಂದ ಸ್ವಾಮೀಜಿ ಅವರ ದೀಕ್ಷಾ ಸಮಾರಂಭದ ರಜತ ಮಹೋತ್ಸವವನ್ನು ಆಚರಿಸಲಿದೆ. ಅಂದು ಸಂಜೆ ಪರಮಪೂಜ್ಯ ಗುರುವರ್ಯರನ್ನು ಭಕ್ತ ಸಮಾಜ ಬಾಂಧವರು ರಾಜಾ ಶಿವಾಜಿ ವಿದ್ಯಾಲಯ ದಾದರ್‌ಗೆಸ್ವಾಗತಿಸಲಿರುವರು. ಈ ಸಂದರ್ಭದಲ್ಲಿ ಭಕ್ತಿ ಸಂಗೀತ ರಸಮಂಜರಿಯನ್ನು ಆಯೋಜಿಸ
ಲಾಗಿದೆ. ಬಳಿಕ ಸ್ವಾಮೀಜಿಯವರು ಸಮಾಜಬಾಂಧವ ರನ್ನು ಉದ್ದೇಶಿಸಿ ಆಶೀರ್ವಚನ ನೀಡಲಿರುವರು.
ಶಾಂತಾದುರ್ಗ ದೇವಿಯ 54ನೇ ವರ್ಧಾಪನಾ ಮಹೋತ್ಸವವನ್ನು ಮೇ 26ರಿಂದ ಮೇ 29ರವರೆಗೆ ಸಂಭ್ರಮದಿಂದ ಆಚರಿಸಲಾಗುವುದು. ಮೇ 29ರಂದು ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿÉ ದೇವಿಯ ಪಲ್ಲಕ್ಕಿ ಸೇವೆ ನಡೆಯಲಿದೆ. ಮೇ 26ರಂದು ದೀಕ್ಷಾ ಸಮಾರಂಭ ದಲ್ಲಿ ಭಾಗವಹಿಸಲಿಚ್ಛಿಸುವವರು ದೂರವಾಣಿ ಸಂಖ್ಯೆ 23625566 ಅನ್ನು ಸಂಪರ್ಕಿಸಿ ದೇಣಿಗೆ ಪ್ರವೇಶಪತ್ರ ಪಡೆಯಬಹುದೆಂದು ಮಠದ ಸಮಿತಿ ಸದಸ್ಯ, ವಕ್ತಾರ ಕಮಲಾಕ್ಷ ಸರಾಫ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ಸ್ವಾಮೀಜಿಯವರು ಮೇ 22ರಂದು ಸಂಜೆ 6ಕ್ಕೆ ವಾಲ್ಕೇಶ್ವರದ ಸ್ವಮಠಕ್ಕೆ ಆಗಮಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next