Advertisement

ಕೋವಿಡ್ ನಿಂದಾಗಿ ಬಡತನ, ಹಸಿವಿನಿಂದ ಬಳಲುತ್ತಿರುವವರ ಪ್ರಮಾಣ ಹೆಚ್ಚಾಗುತ್ತಿದೆಯೇ

05:17 PM May 24, 2020 | keerthan |

ಮಣಿಪಾಲ: ಕೋವಿಡ್-19ನಿಂದಾಗಿ ಬಡತನ ಮತ್ತು ಹಸಿವಿನಿಂದ ಬಳಲುತ್ತಿರುವವರ ಪ್ರಮಾಣ ಹೆಚ್ಚಾಗುತ್ತಿದೆ ಎಂಬ ವಿಶ್ವಬ್ಯಾಂಕ್ ಅಭಿಪ್ರಾಯಕ್ಕೆ ನಿಮ್ಮ ಪ್ರತಿಕ್ರಿಯೆಯೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯ ಇಲ್ಲಿದೆ.

Advertisement

ಮಧುಕರ್ ಬಿಳಿಚೋಡು: ನಿಜ ಸರ್ ಸಾಕಷ್ಟು ಉದಾಹರಣೆಗಳನ್ನು ನಾವು ನೀವು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ನೋಡುತ್ತಿಲ್ಲವೆ. ಕೋವಿಡ್-19 ಪ್ರಪಂಚದಾದ್ಯಂತ ಹರಡಿದೆ. ಇದು ಜೀವ ನೂ ಕೊಲ್ಲುತ್ತಿದೆ, ಜೀವನವನ್ನು ಕೊಲ್ಲುತ್ತೀದೆ. ಮನುಷ್ಯ ನಿಗೆ ಜೀವ ಎಷ್ಟು ಮುಖ್ಯವೋ ಜೀವನವು ಅಷ್ಟೇ ಮುಖ್ಯ ಎಂಬುದು ನಾವಿಲ್ಲಿ ಅರಿಬೇಕಾಗಿರುವ ನೈಜ ಸಂಗತಿ ಅಲ್ಲವೆ. ಕೋವಿಡ್-19ಗಿಂತ ಹಸಿವಿನಿಂದ ಸಾಯುವವರ ಸಂಖ್ಯೆಯ್ಕ ಪ್ರಮಾಣ ಕೆಲವೇ ದಿನಗಳಲ್ಲಿ ಹೆಚ್ಚಾಗುವುದರಲ್ಲಿ ಯಾವ ಸಂಶಯ ಅಥವಾ ಸಮೀಕ್ಷೆಯೂ ಬೇಡ ಎಂಬುದು ನನ್ನ ಅಭಿಪ್ರಾಯ.

ಪ್ರೇಮಚಂದ್ರ ಕಾರಂತ: ಸಾಧ್ಯವೇ ಇಲ್ಲ, ಭೂಮಿ ತಾಯಿ ಇದ್ದಾಳೆ, ಭೂಮಿ ಇದ್ದವರಿಗೆ ಏನೋ ತೊಂದರೆ ಇಲ್ಲ. ನಮ್ಮ ಜಾಗೆ “ಉಳುವವನಿಗೆ ಭೂಮಿ” ಕಾನೂನಿನಡಿಯಲ್ಲಿ ಹೋಯಿತು. ಸರಕಾರ, ಸ್ವಾತಂತ್ಯ ಹೋರಾಟಗಾರರಿಗೆ ಕೊಡುವ 15 ಏಕರೆ ಜಾಗವನ್ನು ತಂದೆಯವರು ವಿನೋಭಾ ಭಾವೆಯವರ ಗೋಮಾಳ ಹಾಗೂ ಭೂದಾನ ಚಳುವಳಿಗೆ ದಾನ ಮಾಡಿಬಿಟ್ಟರು. ಹಾಗಾಗದಿದ್ದರೆ ನನಗೆ ಊಟಕ್ಕೇನೂ ತೊಂದರೆಯಾಗುತ್ತಿರಲಿಲ್ಲ. ಏಕೆ ಹೇಳಿದೆನೆಂದರೆ, ಭೂಮಿಯಲ್ಲಿ ಕೆಲಸ ಮಾಡಲು, ಸೋಂಬೇರಿಗಳು, ಶೋಕಿ ಬೇಕಾದವರು, ದಾಯವಾದಿ ಜಗಳ ಇರುವವರು ಮಾತ್ರ ನಗರಕ್ಕೆ ಬರುತ್ತಾರೆ. ನಾ ನೋಡಿದಂತೆ, ನಗರದಲ್ಲಿ ಕೆಲಸ ಮಾಡುವ ವ್ಯಕ್ತಗಳಿಗೆ ಸರಾಸರಿ ಕನಿಷ್ಟ 3 ಏಕರೆ ಜಾಗ ತನ್ನೂರಿನಲ್ಲಿ ಹೊಂದಿರುತ್ತಾನೆ.

Advertisement

Udayavani is now on Telegram. Click here to join our channel and stay updated with the latest news.

Next