ಮೆಲ್ಬರ್ನ್: ಭಾರತದ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟಿಸಲಾಗಿದೆ. ಆಲ್ ರೌಂಡರ್ ಗಳಾದ ಗ್ಲೆನ್ ಮ್ಯಾಕ್ಸ್ ವೆಲ್, ಮಿಚೆಲ್ ಮಾರ್ಶ್ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ.
ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ 16 ಜನರ ತಂಡವನ್ನು ಆಯ್ಕೆ ಮಾಡಲಾಗಿದೆ. ವೇಗದ ಬೌಲರ್ ಜೇ ರಿಚರ್ಡ್ ಸನ್ ಕೂಡಾ ತಂಡಕ್ಕೆ ಬಂದಿದ್ದಾರೆ.
ಮಾಕ್ಸ್ ವೆಲ್, ಮಾರ್ಶ್ ಮತ್ತು ರಿಚರ್ಡ್ ಸನ್ ಗಾಯದ ಕಾರಣದಿಂದ ಬಿಗ್ ಬ್ಯಾಶ್ ಲೀಗ್ ತಪ್ಪಿಸಿಕೊಂಡಿದ್ದರು. ಮ್ಯಾಕ್ಸ್ ವೆಲ್ ಅವರು ಕಳೆದ ಟಿ20 ವಿಶ್ವಕಪ್ ಬಳಿಕ ಮನೆಯ ಪಾರ್ಟಿಯಲ್ಲಿ ಜಾರಿಬಿದ್ದು ಕಾಲು ಮುರಿದುಕೊಂಡಿದ್ದರು. ಮಿಚೆಲ್ ಮಾರ್ಶ್ ಅವರಿಗೆ ಪಾದದ ಶಸ್ತ್ರಚಿಕಿತ್ಸೆ ನಡೆದಿತ್ತು.
ಇದನ್ನೂ ಓದಿ:ವೆಸ್ಟ್ ಬ್ಯಾಂಕ್ ಸಂಘರ್ಷ: ಪ್ಯಾಲೆಸ್ತೀನ್ ನಲ್ಲಿ 11 ಜನರ ಹತ್ಯೆಗೈದ ಇಸ್ರೇಲ್ ಪಡೆಗಳು
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬಿದ್ದು ಗಾಯಗೊಂಡಿರುವ ಜೋಶ್ ಹೇಜಲ್ ವುಡ್ ಇನ್ನೂ ಗುಣಮುಖರಾಗದ ಕಾರಣ ಅವರನ್ನು ಸೇರಿಸಲಾಗಿಲ್ಲ. ಬಾರ್ಡರ್- ಗಾವಸ್ಕರ್ ಟೆಸ್ಟ್ ಸರಣಿಯಿಂದ ಹೊರಬಿದ್ದಿರುವ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಏಕದಿನ ಸರಣಿಯಲ್ಲಿ ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧ ಮೂರು ಏಕದಿನ ಪಂದ್ಯವಾಡಲಿದೆ. ಮಾರ್ಚ್ 17ರಿಂದ 22ರವರೆಗೆ ನಡೆಯುವ ಈ ಸರಣಿಯ ಪಂದ್ಯಗಳು ಮುಂಬೈ, ವಿಶಾಖಪಟ್ಟಣಂ ಮತ್ತು ಚೆನ್ನೈನಲ್ಲಿ ನಡೆಯಲಿದೆ.
ಆಸೀಸ್ ತಂಡ: ಪ್ಯಾಟ್ ಕಮ್ಮಿನ್ಸ್ (ನಾ), ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿ.ಕೀ), ಜೋಶ್ ಇಂಗ್ಲಿಶ್ (ವಿ.ಕೀ), ಮಾರ್ಕಸ್ ಸ್ಟೊಯಿನಸ್, ಮಿಚೆಲ್ ಸ್ಟಾರ್ಕ್, ಜೇ ರಿಚರ್ಡ್ ಸನ್, ಆ್ಯಡಂ ಝಂಪಾ, ಕ್ಯಾಮೆರಾನ್ ಗ್ರೀನ್ , ಆಷ್ಟನ್ ಅಗರ್, ಸೀನ್ ಅಬಾಟ್.