Advertisement

ಮ್ಯಾಕ್ಸ್‌ವೆಲ್‌ಗೆ ಗಾಯ: ಐಪಿಎಲ್‌ಗೆ ಅನುಮಾನ

10:16 AM Feb 14, 2020 | sudhir |

ಮೆಲ್ಬನ್‌: ಮೊಣಕೈಯ ಗಾಯಕ್ಕೆ ಒಳಗಾಗಿರುವ ಆಸ್ಟ್ರೇಲಿಯದ ಡ್ಯಾಶಿಂಗ್‌ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಮತ್ತು ಟ್ವೆಂಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಅವರು ಮುಂಬರುವ ಐಪಿಎಲ್‌ ಕೂಟದ ಆರಂಭಿಕ ಪಂದ್ಯಗಳಲ್ಲಿ ಆಡುವುದು ಕೂಡ ಅನುಮಾನ ಎನ್ನಲಾಗಿದೆ.

Advertisement

ದಕ್ಷಿಣ ಆಫ್ರಿಕಾ ಪ್ರವಾಸವು ಫೆ. 21ರಿಂದ ಆರಂಭವಾಗಲಿದೆ. ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಮ್ಯಾಕ್ಸ್‌ವೆಲ್‌ ಬದಲಿಗೆ ಎರಡೂ ತಂಡಗಳಲ್ಲಿ ಡಿ’ಆರ್ಕಿ ಶಾರ್ಟ್‌ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಪರಿಪೂರ್ಣ ದೈಹಿಕ ಕ್ಷಮತೆ ಹೊಂದಲು ಮ್ಯಾಕ್ಸ್‌ವೆಲ್‌ ಅವರಿಗೆ ಆರರಿಂದ 8 ವಾರ ಬೇಕಾಗ ಬಹುದು. ಹೀಗಾಗಿ ಅವರು ಐಪಿಎಲ್‌ನ ಆರಂಭಿಕ ಪಂದ್ಯಗಳನ್ನು ಕೂಡ ಕಳೆದುಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next