Advertisement
ದ.ಕ.ದ ಮೂಡುಬಿದಿರೆ 13 ಮತ್ತು ಉಡುಪಿ ಜಿಲ್ಲೆಯ ಹೆಬ್ರಿ 9 ಮತಗಟ್ಟೆಗಳನ್ನು ಹೊಂದಿದ್ದು ಇದು ಉಭಯ ಜಿಲ್ಲೆಗಳಲ್ಲಿ ತಾಲೂಕು ಹೊಂದಿರುವ ಅತಿ ಕಡಿಮೆ ಮತಗಟ್ಟೆಯಾಗಿದೆ. ದ.ಕ.ದ ಮಂಗಳೂರು 40, ಬೆಳ್ತಂಗಡಿ 49, ಪುತ್ತೂರು 23, ಸುಳ್ಯ 26, ಕಡಬ ತಾಲೂಕು 21 ಮತಗಟ್ಟೆಗಳನ್ನು ಹೊಂದಿದ್ದು ಒಟ್ಟು ಜಿಲ್ಲೆಯಲ್ಲಿರುವ ಮತಗಟ್ಟೆಗಳ ಸಂಖ್ಯೆ 231 ಆಗಿದೆ.
Related Articles
Advertisement
ಮತದಾರರಿಗೆ ಸಹಾಯಕರ ಅವಕಾಶ ವಿಧಾನಪರಿಷತ್ ಚುನಾವಣೆಯಲ್ಲಿ ಅನಕ್ಷರಸ್ಥ, ಅಂಧ ಮತದಾರರಿದ್ದರೆ ಅವರಿಗೆ ಸಹಾಯಕರನ್ನು ಕರೆದುಕೊಂಡು ಬರಲು ಅವಕಾಶ ನೀಡಲಾಗಿದೆ. ಅವರು ಸಹಾಯಕರ ನೆರವು ಪಡೆದು ತಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಚಲಾವಣೆ ಮಾಡಬಹುದಾಗಿದೆ. ಕೇಂದ್ರ ಚುನಾವಣ ಆಯೋಗವು ಚುನಾವಣೆ ನಡೆಸುವ ನಿಯಮಾವಳಿ, 1961ರ ನಿಯಮ 40ಎಗೆ ತಂದಿರುವ ತಿದ್ದುಪಡಿಯಂತೆ ಈ ಅವಕಾಶ ನೀಡಲಾಗಿದ್ದು ಇಂತಹ ಮತದಾರರು ಜಿಲ್ಲಾಧಿಕಾರಿ ಕಚೇರಿಗೆ ಡಿ. 7ರೊಳಗೆ ಈ ಬಗ್ಗೆ ಕೋರಿಕೆ ಸಲ್ಲಿಸಬೇಕಾಗಿದೆ. ಕ್ಷೇತ್ರದ ಮತದಾರರ ಪೈಕಿ ಯಾರಾದರೂ ಅನಕ್ಷರಸœರು, ಅಂಧರಿದ್ದಲ್ಲಿ ಮತಪತ್ರದಲ್ಲಿ 1, 2, 3 ಇತ್ಯಾದಿ ಅಂಕೆಗಳಲ್ಲಿ ಪ್ರಾಶಸ್ತ್ಯ ಮತವನ್ನು ನಮೂದಿಸುವಲ್ಲಿ ಅಸಹಾಯಕರಾಗಿದ್ದಲ್ಲಿ ಅವರಿಗೆ ಮತ ಚಲಾಯಿಸಲು ಜತೆಗಾರರನ್ನು ನೇಮಿಸಿಕೊಳ್ಳುವಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ವ್ಯಕ್ತಿಯು 18 ವರ್ಷ ತುಂಬಿದವರಾಗಿರಬೇಕು ಹಾಗೂ ಅವರನ್ನು ಒಬ್ಬ ಮತದಾರನಿಗೆ ಮಾತ್ರ ಜತೆಗಾರರಾಗಿ ನೇಮಿಸಿಕೊಳ್ಳುವಲ್ಲಿ ಅವಕಾಶವಿರುತ್ತದೆ. ಈ ಬಗ್ಗೆ ಡಿ. 7ರೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಲಿಖಿತವಾಗಿ ಕೋರಿಕೆ ಸಲ್ಲಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ತಿಳಿಸಿದ್ದಾರೆ.