Advertisement
ಅವರು ಶನಿವಾರ ಕುಂದಾಪುರ ತಾಲೂಕಿನ ಹಾಲಾಡಿ ಮತ್ತು ಅಮಾಸೆಬೈಲು ಗ್ರಾಮದಲ್ಲಿ ಗ್ರಾಮವಾಸ್ತವ್ಯ ನಡೆಸಿ ದರು. ಹಾಲಾಡಿಯ ಶಾಲಿನಿ ಜಿ.ಶಂಕರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ ಅವರು ಕೇಂದ್ರ ಸರಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಫಲಾನುಭವಿಗಳಿಗೆ ಅಕ್ಕಿಯನ್ನು ವಿತರಿಸಿದರು. ಈ ಸಂದರ್ಭದಲ್ಲಿ ಹಾಲಾಡಿ ಗ್ರಾ.ಪಂ. ಅಧ್ಯಕ್ಷೆ ಸಾಧು, ಉಪಾಧ್ಯಕ್ಷ ಜನಾರ್ದನ, ಸದಸ್ಯರು, ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ, ಕುಂದಾಪುರ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ಕುಂದಾಪುರ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಎನ್., ಹಾಗೂ ವಿವಿಧ ಇಲಾಖೆಯ ಎಲ್ಲ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕುಂದಾಪುರ ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಸ್ವಾಗತಿಸಿ, ವಂಡ್ಸೆ ಹೋಬಳಿ ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ ವಂದಿಸಿ, ಉಪನ್ಯಾಸಕ ಅಕ್ಷಯ್ ಹೆಗ್ಡೆ ಮೊಳಹಳ್ಳಿ ನಿರೂಪಿಸಿದರು.
ಕೆಎಸ್‌ಆರ್‌ಟಿಸಿ ಬಸ್ ಬರುತ್ತಿಲ್ಲ
ಅಮಾಸೆಬೈಲು ಗ್ರಾಮದ ಮಚ್ಚಟ್ಟು ಗ್ರಾಮಕ್ಕೆ ಎರಡು ಕೆಎಸ್‌ಆರ್ ಟಿಸಿ ಬಸ್ ಪರವಾನಿಗೆ ಸಿಕ್ಕಿವೆ. ಆದರೆ ಈಗ ಒಂದು ಬಸ್ ಸಹ ಬರುತ್ತಿಲ್ಲ ಎಂದು ಗ್ರಾಮಸ್ಥರೊಬ್ಬರು ಮನವಿ ಸಲ್ಲಿಸಿದರು. ಇದಕ್ಕೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಕರೆದ ಜಿಲ್ಲಾಧಿಕಾರಿಗಳು, ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ, ಬಸ್ ಆರಂಭಿಸಲು ಕ್ರಮಕೈಗೊಳ್ಳಿ ಎಂದು ಡಿಸಿ ಹೇಳಿದರು.
3 ವರ್ಷವಾದರೂ ಗೊತ್ತಿಲ್ವಾ?
ತೊಂಬಟ್ಟುವಿನಿಂದ ಹೊಸಂಗಡಿಗೆ ಹೋಗುವ ಜಿ.ಪಂ. ರಸ್ತೆಯಲ್ಲಿ 4 ಕೋ.ರೂ. ವೆಚ್ಚದಲ್ಲಿ ಸೇತುವೆಯಾಗಿದೆ. ಆದರೆ ಮಧ್ಯದಲ್ಲಿ ಮೀಸಲು ಅರಣ್ಯ ಕಾರಣಕ್ಕೆ ರಸ್ತೆ ಸಮಸ್ಯೆಯಿದೆ. ಸೇತುವೆ ಇದ್ದರೂ ಪ್ರಯೋಜನವಾಗುತ್ತಿಲ್ಲ ಎನ್ನುವ ಪ್ರಶ್ನೆಯನ್ನು ಅಲ್ಲಿನ ಸ್ಥಳೀಯರೊಬ್ಬರು ಗಮನಕ್ಕೆ ತಂದರು. ಈ ಇಲಾಖೆಗೆ ಬಂದು 3 ವರ್ಷ ಆಯಿತು ಅಂತ ಹೇಳ್ತಿರಿ. ಆದರೂ ಈ ರಸ್ತೆ ಯಾವುದು ಅಂತ ನಿಮಗೆ ಗೊತ್ತಿಲ್ವಾ? ಮತ್ತೆ ಏನು ಕೆಲಸ ಮಾಡುತ್ತೀರಿ ಎನ್ನುವುದಾಗಿ ಜಿ.ಪಂ. ಎಂಜಿನಿಯರೊಬ್ಬರನ್ನು ಜಿಲ್ಲಾಧಿಕಾರಿ ಖಾರವಾಗಿಯೇ ಪ್ರಶ್ನಿಸಿದರಲ್ಲದೆ ಈ ಬಗ್ಗೆ ಕೂಡಲೇ ತಿಳಿದುಕೊಂಡು, ಅವರಿಗೆ ಉತ್ತರಿಸಿ ಎಂದರು.
ನಿವೇಶನ: ಲಿಂಗತ್ವ ಅಲ್ಪಸಂಖ್ಯಾತರ ಮನವಿ
ಕೋಟೇಶ್ವರ ಸಮೀಪದ ಕಾಗೇರಿ ಯಲ್ಲಿ ಬಾಡಿಗೆ ಮನೆಯಲ್ಲಿರುವ ಐವರು ಲಿಂಗತ್ವ ಅಲ್ಪಸಂಖ್ಯಾತರು ತಮಗೆ ನಿವೇಶನ ಒದಗಿಸಿಕೊಡಿ ಹಾಗೂ ಮತದಾನದ ಅವಕಾಶ ಕಲ್ಪಿಸಿ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಐವರ ಪೈಕಿ ಇಬ್ಬರಿಗೆ ಮಾತ್ರ ಆಧಾರ್ ಕಾರ್ಡ್, ವೋಟರ್ ಐಡಿ ಇದ್ದು, ಎಲ್ಲರಿಗೂ ಮಾಡಿಕೊಡಿ ಎಂದು ಅಹವಾಲು ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಡಿಸಿ, ಈ ಬಗ್ಗೆ ಲಿಖೀತವಾಗಿ ಅರ್ಜಿ ಕೊಡಿ, ಜಾಗ ಗುರುತಿಸಿ, ಒದಗಿಸಲಾಗುವುದು ಎಂದರು. ಮುಂದಿನ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ನಡೆಸಿಕೊಡುವಂತೆ ತಾ.ಪಂ. ಇಒಗೆ ಸೂಚಿಸಿದರು.