Advertisement

‘ಆರೋಗ್ಯ ಕಾಳಜಿಗೆ ಗರಿಷ್ಠ ಕೊಡುಗೆ ಮುಖ್ಯ’

12:58 PM May 18, 2018 | |

ಮಂಗಳೂರು: ನಗರದ ಫಳ್ನೀರಿನ ಅಥೆನಾ ಇನ್‌ಸ್ಟಿಟ್ಯೂಟ್‌ ಆಫ್‌ ಹೆಲ್ತ್‌ ಸಯನ್ಸಸ್‌ನಲ್ಲಿ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆ ಗುರುವಾರ ನಡೆಯಿತು. ಕಾಲೇಜಿನ ವಿದ್ಯಾರ್ಥಿಗಳಿಂದ ‘ದಾದಿಯರ ನುಡಿಯಲ್ಲಿ ಆರೋಗ್ಯ ಮಾನವನ ಹಕ್ಕು’ ಎಂಬ ವಿಷಯದ ಕುರಿತು ಚರ್ಚಾಕೂಟ ಜರಗಿತು.

Advertisement

ಕಾರ್ಯಕ್ರಮದಲ್ಲಿ ಲಕ್ಷ್ಮೀ ಮೆಮೋರಿಯಲ್‌ ಕಾಲೇಜ್‌ ಆಫ್‌ ನರ್ಸಿಂಗ್‌ನ ಉಪಪ್ರಾಂಶುಪಾಲೆ ಡಾ| ಥೆರೆಸಾ ಎಲ್‌. ಮೆಂಡೋನ್ಸಾ ಮುಖ್ಯ ಅತಿಥಿಯಾಗಿದ್ದರು. ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯ ಮಹತ್ವದ ಕುರಿತು ವಿವರಿಸಿ ದಾದಿಯರ ವೃತ್ತಿಪರತೆ ಅಂತಸ್ತನ್ನು ವೃದ್ಧಿಸುವ ಬಗ್ಗೆ ವಿವರಿಸಿದರು.

ಕಾಲೇಜಿನ ಚೇರ್‌ಮನ್‌ ಆರ್‌.ಎಸ್‌. ಶೆಟ್ಟಿಯಾನ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ದಾದಿಯರಿಗೆ ಶುಭ ಹಾರೈಸಿ ಆರೋಗ್ಯ ಕಾಳಜಿ ಬಗ್ಗೆ ತಮ್ಮ ಗರಿಷ್ಠ ಕೊಡುಗೆ ನೀಡಲು ತಿಳಿಸಿದರು. ಅಥೆನಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆಶಾ ಶೆಟ್ಟಿಯಾನ್‌ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲೆ ಪ್ರೊ| ಸಿ| ಧನ್ಯಾ ದೇವಾ ಸಿಯಾ ದಾದಿಯರ ಜವಾಬ್ದಾರಿಯ ಬಗ್ಗೆ ನುಡಿದರು. ಆ್ಯನ್ಸಿ ಮರಿಯಾ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ರೇಖಾ ಕುಮಾರಿ ಮತ್ತು ಗ್ಲೋರಿಯಾ ಕಾರ್ಯ ಕ್ರಮ ನಿರೂಪಿಸಿದರು. ಮಿನ್ನು ಮೇರಿ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next