ಹೊಸದುರ್ಗ: ಶಿಕ್ಷಣದ ಮೂಲಕ ಪ್ರಬುದ್ಧ ವ್ಯಕ್ತಿತ್ವವುಳ್ಳ ವಿದ್ಯಾರ್ಥಿಗಳನ್ನು ಸೃಷ್ಟಿಸುವಲ್ಲಿ ಶಿಕ್ಷಣ ಸಂಸ್ಥೆ ಹಾಗು ಹೆತ್ತವರ ಪಾತ್ರ ಮಹತ್ತರವಾದುದೆಂದು ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜು ಉಪನ್ಯಾಸಕ ಶಿವರಾಜ್ ರಾವ್ ಅವರು ಹೇಳಿದರು.
ಕೀಕಾನ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಅಧೀನದಲ್ಲಿರುವ ನಳಂದಾ ಪಬ್ಲಿಕ್ ಸ್ಕೂಲ್‌ನ ವಾರ್ಷಿಕೋತ್ಸವ ಸಮಾರೋಪ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕಲಿಕೆಯ ವಿಚಾರದಲ್ಲಿ ನಿರಂತರ ಒತ್ತಡ ಹೇರಿದರೆ ಮಕ್ಕಳ ಭವಿಷ್ಯದಲ್ಲಿ ಆಬಾಸಗಳು ಎದುರಾಗುವ ಸಾಧ್ಯತೆಯಿದ್ದು, ಮಕ್ಕಳು ಆಸಕ್ತಿ-ಸುಪ್ತ ಪ್ರತಿಭೆಯನ್ನು ಗುರುತಿಸಿ ಹಂತ ಹಂತವಾಗಿ ಮಾರ್ಗದರ್ಶನ ನೀಡುವುದರ ಜೊತೆಗೆ ಮಕ್ಕಳಿಂದ ಆಸ್ತಿ – ಆಸರೆ ಎಂಬ ಪರಿಕಲ್ಪನೆ ಬದಲಾಗಿ ಮಕ್ಕಳೇ ಆಸ್ತಿ ಎಂಬ ಚಿಂತನೆ ಬೇರೂರಬೇಕಿದೆ ಎಂದರು.
ಸಾಹಿತಿ ಚಂದ್ರಹಾಸ ಎಂ.ಬಿ.ಚಿತ್ತಾರಿ ಅವರು ಶಿಕ್ಷಣದ ಮೂಲಕ ಪ್ರಗತಿಪರ ಚಿಂತನೆ ಜೊತೆಗೆ ಆರೋಗ್ಯಪೂರ್ಣ ಸಿದ್ಧಾಂತವೊಂದನ್ನು ಗ್ರಾಮೀಣ ಪ್ರದೇಶದ ಜನರಿಗೆ ಕಟ್ಟಿಕೊಡುವಲ್ಲಿ ಕೀಕಾನ ಗ್ರಾಮದ ನಳಂದ ಪಬ್ಲಿಕ್ ಸ್ಕೂಲ್ ಯಶಸ್ವಿಯಾಗಿದೆ ಎಂದು ಪ್ರಶಂಸೆಯ ನುಡಿಗಳನ್ನಾಡಿದರು.ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಕಾಸರಗೋಡು ಉಪಸಂಘ ಕೀಕಾನ ಇದರ ಅಧ್ಯಕ್ಷರಾದ ಸುಭಾನಂದ ರಾವಣೇಶ್ವರ ವಹಿಸಿದ್ದರು. ಪ್ರಭಾಶಂಕರ ಬೇಲೆಗದ್ದೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಳಂದ ಪಬ್ಲಿಕ್ ಸ್ಕೂಲ್‌ನ ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳಾದ ಮನೋಜ್ ಪೂಚಕ್ಕಾಡು, ಮಹಮ್ಮಾಯ ಪ್ರಸಾದ್, ಶಾಲಾ ಮುಖ್ಯ ಶಿಕ್ಷಕಿ ನಯನಾ ಪ್ರಭಾಶಂಕರ್ ಉಪಸ್ಥಿತರಿದ್ದರು. ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಗಿರೀಶ್ ಮಾಸ್ತರ್, ಗೌರೀಶಂಕರ್ ಮುಕ್ಕೂಟು, ಗಣೇಶ್ ಬಿ.ಮಲ್ಲಿಗೆಮಾಡು, ಪುರುಷೋತ್ತಮ ಮುಕ್ಕೂಟು, ಶಿಕ್ಷಕಿಯರಾದ ಕಿಶೋರಿ, ಸ್ವಾತಿ ವಿವಿಧ ಕಾರ್ಯಕ್ರಮಗಳನ್ನು ಸಂಯೋಜಿಸಿದರು. ಅಶ್ವಿನಿ ದೇವದಾಸ್ ಆರ್. ಸ್ವಾಗತಿಸಿದರು. ದಿವ್ಯಾ ಶ್ಯಾಮ ಸುಂದರ್ ವಂದಿಸಿದರು. ಶ್ವೇತಾ ಹಾಗೂ ದೀಪಾ ಕಾರ್ಯಕ್ರಮ ನಿರೂಪಿಸಿದರು. ಲಕ್ಷಿ$¾àಶ್ ಪಟೇಲ್ ಲಂಡನ್, ಮನೋಜ ಪೂಚ್ಚಕ್ಕಾಡು, ಉದಯ ಚೇಟುಕುಂಡು, ಗಣೇಶ್ ಕೀಕಾನ, ವಾಮನ ರಾವಣೇಶ್ವರ, ದೇವರಾಜ್ ಮುಕ್ಕೂಟು ಸಹಕರಿಸಿದರು.
ಸಾಂಸ್ಕೃತಿಕ ವೈವಿಧ್ಯ
ಸಾಂಸ್ಕೃತಿಕ ವೈವಿಧ್ಯ ದೃಶ್ಯ ಕಾವ್ಯವಾಗಿ ಮೂಡಿಬರುವಲ್ಲಿ ನಳಂದ ಪಬ್ಲಿಕ್ ಸ್ಕೂಲ್ ಪ್ರತೀ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರತಿಭಾ ಪ್ರದರ್ಶನಗೈದಿರು ವುದು ಕಲಾರಂಗದಲ್ಲಿ ದಾಖಲೆಯಾಯಿತು. ನೃತ್ಯ ಸಂಯೋಜನೆ, ತರಬೇತಿ ನೀಡಿದ ಮಂಗಳೂರು ಗಣಪತಿ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿ ಗಿರೀಶ್ ಮಲ್ಲಿಗೆಮಾಡು ಅವರಿಗೆ ಸಭಿಕರಿಂದ ಪ್ರಶಂಸೆಯ ವ್ಯಕ್ತವಾಯಿತು.