Advertisement

Bantwal ಮಟ್ಕಾ ಅಡ್ಡೆಗೆ ದಾಳಿ: ಇಬ್ಬರ ಬಂಧನ

09:19 PM Sep 24, 2023 | Team Udayavani |

ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮಟ್ಕಾ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ನಗರ ಪೊಲೀಸರು ಇಬ್ಬರು ಆರೋಪಗಳನ್ನು ಬಂಧಿಸಿ ಆಟಕ್ಕೆ ಬಳಸಲಾದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಕೃತ್ಯದಲ್ಲಿ ತೊಡಗಿದ್ದ ಚಂದ್ರಹಾಸ ಹಾಗೂ ಪುರುಷೋತ್ತಮನನ್ನು ಬಂಧಿಸಲಾಗಿದ್ದು, ಆರೋಪಗಳಿಂದ ಪುಸ್ತಕ, ಪೆನ್ನು, 1770 ರೂ.ನಗದು ಹಾಗೂ ಕಾರ್ಬನ್‌ ಹಾಳೆಗಳನ್ನು ವಶಪಡಿಕೊಳ್ಳಲಾಗಿದೆ.

ಬಂಟ್ವಾಳ ನಗರ ಠಾಣಾ ಪಿಎಸ್ ಐ ಹಾಗೂ ಸಿಬಂದಿ ದಾಳಿ ನಡೆಸಿದ್ದರು. ನ್ಯಾಯಾಲಯದ ಅನುಮತಿಯಂತೆ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next