Advertisement

Firecracker; ಪಟಾಕಿ ಮಾರುಕಟ್ಟೆಯಲ್ಲಿ ಭೀಕರ ಅಗ್ನಿ ಅವಘಡ: ಹಲವರಿಗೆ ಗಂಭೀರ ಗಾಯ

04:41 PM Nov 12, 2023 | Team Udayavani |

ಮಥುರಾ : ದೀಪಾವಳಿ ಸಂಭ್ರಮ ಸಡಗರದ ವೇಳೆಯಲ್ಲಿ ಉತ್ತರಪ್ರದೇಶದ ಮಥುರಾ ನಗರದ ಹೊರವಲಯದಲ್ಲಿರುವ ಗೋಪಾಲ್‌ಬಾಗ್‌ನಲ್ಲಿ ಪಟಾಕಿ ಮಾರುಕಟ್ಟೆಯಲ್ಲಿ ಭಾನುವಾರ ಭೀಕರ ಅಗ್ನಿ ಅವಘಡ ಸಂಭವಿಸಿದ್ದು ಹಲವರು ಸುಟ್ಟ ಗಂಭೀರ ಗಾಯಗಳಿಗೆ ಗುರಿಯಾಗಿದ್ದಾರೆ.

Advertisement

ಬೆಂಕಿ ಕಾಣಿಸಿಕೊಂಡ ಬಳಿಕ ಹಲವರಿಗೆ ತಗುಲಿದ್ದು, ಪಟಾಕಿ ಮಾರಾಟ ಮಾಡುತ್ತಿದ್ದ ಕನಿಷ್ಠ 9 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಗೋಪಾಲಬಾಗ್ ಪ್ರದೇಶದಲ್ಲಿ ಪಟಾಕಿ ಮಾರಾಟ ಮಾಡುತ್ತಿದ್ದ ಏಳು ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ರಾಯಾ ಪೊಲೀಸ್ ಠಾಣೆ ಎಸ್‌ಎಚ್‌ಒ ಅಜಯ್ ಕಿಶೋರ್ ಹೇಳಿದ್ದಾರೆ.

ಏಳು ಅಂಗಡಿಗಳಿಗೆ ಪಟಾಕಿ ಮಾರಾಟ ಮಾಡಲು ಅನುಮತಿ ನೀಡಲಾಗಿತ್ತು. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬಂದಿಗಳು ದೌಡಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next