Advertisement

ವಿಜ್ಞಾನ ಕೇಂದ್ರದಲ್ಲಿ ಗಣಿತ ಮಾದರಿ ಸ್ಪರ್ಧೆ

04:27 PM Jan 23, 2021 | Team Udayavani |

ಧಾರವಾಡ: ಬೆಂಗಳೂರಿನ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಅವ್ವ ಸೇವಾ ಟ್ರಸ್ಟ್‌, ಹಾಗೂ ಕರ್ನಾಟಕ ರಾಜ್ಯ ಗಣಿತ ಪರಿಷತ್‌ ಸಹಯೋಗದಲ್ಲಿ ರಾಜ್ಯಮಟ್ಟದ ಗಣಿತ ಮಾದರಿಗಳ ಆನ್‌ಲೈನ್‌ ತಯಾರಿಕಾ ಸ್ಪರ್ಧೆ 2020-21, ಅಕ್ಷರ ದಾಸೋಹ ಪುಸ್ತಕ ಬಿಡುಗಡೆ ಸಮಾರಂಭ, ಗಣಿತ ಹಾಗೂ ವಿಜ್ಞಾನ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರವು ನಗರದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಶಿಕ್ಷಕರಿಗೆ ಸಮಯ ಬಹಳ ಮಹತ್ವದ್ದು. ಶಿಕ್ಷಣದ ವ್ಯವಸ್ಥೆಗೆ ಮಹತ್ವವನ್ನು ಕೊಡಬೇಕು. ಪ್ರಾಮಾಣಿಕವಾಗಿ ಸೇವೆ ಮಾಡಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿದರೆ ಅವರ ಭವಿಷ್ಯ ಉಜ್ವಲವಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ಮಾದರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರು.

Advertisement

ಇದನ್ನೂ ಓದಿ:ಯುವ ಸಮ್ಮೇಳನದಲ್ಲಿ ಐದು ನಿರ್ಣಯ ಮಂಡನೆ

ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಡಾ| ಕೆ.ಬಿ. ಗುಡಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯಕ್ಕೆ ಸಂಬಂಧಪಟ್ಟ ವಿಷಯದ ಜೊತೆಗೆ ನೀತಿ ಪಾಠದ ವಿಷಯವನ್ನು ಬೋ ಧಿಸಿದರೆ ಅಂಕಗಳ ಜೊತೆಗೆ ಉತ್ತಮ ನಾಗರಿಕನಾಗಿ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಲು ಸಾಧ್ಯ ಎಂದು ಹೇಳಿದರು.

ವಿಜ್ಞಾನ ಕೇಂದ್ರದ ನಿರ್ದೇಶಕ ಡಾ|ವೀರಣ್ಣ ಡಿ. ಬೋಳಿಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ ಕುಲಕರ್ಣಿ, ಎಂ. ಎ. ಬಾವಿಕಟ್ಟಿ, ಡಿಡಿಪಿಐ ಮೋಹನ ಹಂಚಾಟೆ, ಕ್ಷೇತ್ರ ಶಿಕ್ಷಣಾಧಿ ಕಾರಿ ಎ.ಎ. ಖಾಜಿ, ಉಮೇಶ ಬೊಮ್ಮಕ್ಕನವರ, ಬಿ.ಎಸ್‌. ಪಾಟೀಲ ಇದ್ದರು. ಆರ್‌.ಎಸ್‌. ದೇಶಪಾಂಡೆ ನಿರೂಪಿಸಿದರು. ಎ.ಎ.ಖಾಜಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next