Advertisement

ರಸ್ತೆ ಮಧ್ಯೆಯೇ ಹೆರಿಗೆ: ನೆರವಿಗೆ ಧಾವಿಸಿದ ಭಿಕ್ಷುಕಿ

11:20 AM Mar 13, 2017 | Harsha Rao |

ಮಾನ್ವಿ: ರಾಯಚೂರು ಜಿಲ್ಲೆ ಮಾನ್ವಿಯ ಬಸವ ವೃತ್ತದ ಮುಖ್ಯರಸ್ತೆಯ ಮಧ್ಯದಲ್ಲೇ ಗರ್ಭಿಣಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ರಕ್ತಹೀನತೆಯಿಂದ ಬಳಲುತ್ತಿದ್ದ ತುಂಬು ಗರ್ಭಿಣಿ ಯಲ್ಲಮ್ಮ ಎಂಬಾಕೆ, ರಾಯಚೂರಿನ ರಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Advertisement

ಭಾನುವಾರ ಮುಂಜಾನೆ ಆಸ್ಪತ್ರೆಯಿಂದ ಬಿಡುಗಡೆಗೊಂಡು ಪಟ್ಟಣಕ್ಕೆ ಮರಳಿದ್ದರು. ಬಸ್‌ ನಿಲ್ದಾಣದಿಂದ ಆಟೋದಲ್ಲಿ ಮನೆಗೆ ತೆರಳುತ್ತಿದ್ದಾಗ ದಾರಿ ಮಧ್ಯೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿತು. ಚಾಲಕ ರಸ್ತೆ ಪಕ್ಕದಲ್ಲಿ ಆಟೋ ನಿಲ್ಲಿಸಿದ. ಮಲ್ಲಮ್ಮ ಹೆರಿಗೆ ನೋವಿನಿಂದ ಬಳಲುತ್ತಿರುವುದನ್ನು ಕಂಡ ಭಿಕ್ಷುಕಿಯೊಬ್ಬಳು, ನೆರವಿಗೆ ಧಾವಿಸಿ, ಹೆರಿಗೆಗೆ ಸಹಾಯ ಮಾಡಿಸಿದಳು.

ಈಗಾಗಲೇ ಮೂರು ಗಂಡು ಮಕ್ಕಳಿರುವ ಮಲ್ಲಮ್ಮಗೆ ಈ ಸಲ ಹೆಣ್ಣು ಮಗುವಾಗಿದೆ. ಬಳಿಕ ಬಾಣಂತಿ, ಶಿಶುವನ್ನು ಮಾನ್ವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ. ಎರಡು ದಿನಗಳಿಂದ ರಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತುಂಬು ಗರ್ಭಿಣಿಗೆ, ಹೆರಿಗೆಯಾಗುವ ಸಾಧ್ಯತೆ ಇದ್ದರೂ ಖಚಿತಪಡಿಸಿಕೊಳ್ಳದೆ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ವೈದ್ಯರು ನಿರ್ಲಕ್ಷé ತೋರಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next