Advertisement

Rajya Sabha: ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆಗೆ ಅಸ್ತು

11:16 PM Dec 13, 2023 | Team Udayavani |

ನವದೆಹಲಿ: ತೆಲಂಗಾಣದಲ್ಲಿ ಸಮ್ಮಕ್ಕ ಸಾರಕ್ಕ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದ ವಿಧೇಯಕವು ಬುಧವಾರ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿತು. ಧ್ವನಿ ಮತದೊಂದಿಗೆ “ಕೇಂದ್ರೀಯ ವಿಶ್ವವಿದ್ಯಾಲಯಗಳ(ತಿದ್ದುಪಡಿ) ವಿಧೇಯಕ, 2023” ಅನ್ನು ಮೇಲ್ಮನೆಯಲ್ಲಿ ಅಂಗೀಕಾರಿಸಲಾಯಿತು.

Advertisement

ಇದೇ ವೇಳೆ, ಹಳತಾದ ಹಾಗೂ ಬಳಕೆಯಲ್ಲಿ ಇಲ್ಲದ 76 ಕಾನೂನುಗಳನ್ನು ರದ್ದುಪಡಿಸಲು ಸಲುವಾಗಿ ಮಂಡಿಸಿರುವ “ರದ್ದತಿ ಮತ್ತು ತಿದ್ದುಪಡಿ ವಿಧೇಯಕ, 2023” ಧ್ವನಿಮತದೊಂದಿಗೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿತು.

ಇನ್ನೊಂದೆಡೆ, ಜಿಎಸ್‌ಟಿ ಮೇಲ್ಮನವಿ ನ್ಯಾಯಮಂಡಳಿಗಳ ಅಧ್ಯಕ್ಷರು ಹಾಗೂ ಸದಸ್ಯರ ವಯೋಮಿತಿ ಹೆಚ್ಚಳ ನಿಟ್ಟಿನಲ್ಲಿ “ಕೇಂದ್ರ ಸರಕು ಮತ್ತು ಸೇವಾ ತೆರಿಗೆ(ಎರಡನೇ ತಿದ್ದುಪಡಿ), 2023” ವಿಧೇಯಕವನ್ನು ಲೋಕಸಭೆಯಲ್ಲಿ ಬುಧವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದರು.

ಇದೇ ವೇಳೆ, ಬಜೆಟ್‌ನಲ್ಲಿ ಘೋಷಿಸಲಾದ ಕಸ್ಟಮ್ಸ್‌ ಮತ್ತು ಅಬಕಾರಿ ಸುಂಕದಲ್ಲಿ ಬದಲಾವಣೆಗಾಗಿ “ತಾತ್ಕಲಿಕ ತೆರಿಗೆಗಳ ಸಂಗ್ರಹ ವಿಧೇಯಕ, 2023” ಅನ್ನು ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವರು ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next