ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಕೂಟಕ್ಕೆ ಮಳೆ ಕಾಟ ಹೆಚ್ಚಾಗಿದೆ. ಮೆಲ್ಬರ್ನ್ ನಲ್ಲಿ ಸುರಿದ ಧಾರಾಕಾರ ಮಳೆಗೆ ಐರ್ಲೆಂಡ್ ಮತ್ತು ಅಫ್ಘಾನಿಸ್ಥಾನ ನಡುವಿನ ಪಂದ್ಯ ರದ್ದಾಗಿದೆ.
ಸುರಿಯುತ್ತಲೇ ಇದ್ದ ಮಳೆ ನಿಲ್ಲದ ಕಾರಣ ಟಾಸ್ ಕೂಡಾ ಕಾಣದ ಪಂದ್ಯವನ್ನು ರದ್ದು ಮಾಡಲಾಯಿತು. ಕ್ರೀಡಾಂಗಣಕ್ಕೆ ಬಂದಿದ್ದ ಪ್ರೇಕ್ಷಕರು ಬೇಸರದಿಂದಲೇ ನಡೆದ ದೃಶ್ಯಗಳು ಕಂಡು ಬಂತು.
ಎರಡೂ ತಂಡಗಳು ತಲಾ ಒಂದಂಕ ಪಡೆದವು. ಇಂಗ್ಲೆಂಡ್ ವಿರುದ್ಧ ಗೆದ್ದ ಆತ್ಮವಿಶ್ವಾಸದಲ್ಲಿ ಇಂದೂ ಪಂದ್ಯ ಗೆಲ್ಲುವ ಹುಮ್ಮಸ್ಸಿನಿಂದ ಬಂದಿದ್ದ ಐರಿಷ್ ಆಟಗಾರರು ಬೇಸರಪಟ್ಟರು. ಅತ್ತ ಕಡೆ ಅಫ್ಘಾನಿಸ್ಥಾನ ತಂಡವು ಸತತ ಎರಡು ಪಂದ್ಯಗಳನ್ನು ಮಳೆಯ ಕಾರಣದಿಂದ ಕಳೆದುಕೊಂಡಿತು.
ಇದನ್ನೂ ಓದಿ:ಮೇಯರ್ ಸೂಚನೆ ; 3 ವರ್ಷಗಳಿಂದ ಹಾಕಲಾದ ಕಲ್ಲು, ಮಣ್ಣಿನ ರಾಶಿ ತೆರವುಗೊಳಿಸಿದ ಇಲಾಖೆ
ಇದೇ ಮೆಲ್ಬರ್ನ್ ಅಂಗಳದಲ್ಲಿ ಆತಿಥೇಯ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ಪ್ರಕಾರ 1.30ಕ್ಕೆ ಪಂದ್ಯ ನಡೆಯಲಿದ್ದು, ಮಳೆ ಮುಂದುವರಿದರೆ ಈ ಪಂದ್ಯವೂ ರದ್ದಾಗುವ ಸಾಧ್ಯತೆಯಿದೆ.