Advertisement

ಮಾಸ್ತಿಗುಡಿ ದುರಂತ: ದೋಷಾರೋಪ ಪಟ್ಟಿ ಸಲ್ಲಿಕೆ

10:56 AM Apr 28, 2017 | |

ರಾಮನಗರ: ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ   “ಮಾಸ್ತಿಗುಡಿ’ ಚಿತ್ರೀಕರಣದ ವೇಳೆ ನಟರಿಬ್ಬರ ದುರ್ಮರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಡಿಸಿಬಿ ಪೊಲೀಸರು ಒಟ್ಟು ಆರು ಮಂದಿ ವಿರುದ್ಧ ಮಾಗಡಿ 1ನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಸುಮಾರು 400 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

Advertisement

ಪೈಲಟ್‌ ಹೆಸರು ಸೇರ್ಪಡೆ:
ತಿಪ್ಪಗೊಂಡನಹಳ್ಳಿ ಜಲಾಶಯದ ನೀರಿನಲ್ಲಿ ಚಿತ್ರೀಕರಣ ನಡೆಸಲು ಅನುಮತಿ ಪಡೆದಿರಲಿಲ್ಲ. ಹೀಗಾಗಿ ಜಲಾಶಯಕ್ಕೆ ಸಂಬಂಧಿಸಿದ ಎಇಇ ಅನಸೂಯಮ್ಮ ಅವರು ಚಿತ್ರದ ನಿರ್ಮಾಪಕರು, ನಿರ್ದೇಶಕರು ಮತ್ತಿತರರ ವಿರುದ್ಧ ದೂರು ದಾಖಲಿಸಿದ್ದರು. ಎಫ್ಐಆರ್‌ನಲ್ಲಿ ಹೆಲಿಕಾಪ್ಟರ್‌ ಪೈಲಟ್‌ರ ಹೆಸರು ಪ್ರಸ್ತಾಪವಾಗಿರಲಿಲ್ಲ. ದೋಷಾರೋಪಣ ಪಟ್ಟಿಯಲ್ಲಿ ಅವರ ಹೆಸರು ನಮೂದಾಗಿದೆ.

ಸೆಕ್ಷನ್‌ ಏನು ಹೇಳುತ್ತೆ?:
ಭಾರತೀಯ ದಂಡ ಸಂಹಿತೆ (ಇಂಡಿಯನ್‌ ಪೀನಲ್‌ ಕೋಡ್‌) 304: ನಿರ್ಲಕ್ಷದಿಂದ ಸಾವಿಗೆ ಕಾರಣರಾದ ಆರೋಪ. ಐಪಿಸಿ ಸೆಕ್ಷನ್‌ 34: ಒಂದು ಕೃತ್ಯದಲ್ಲಿ ಭಾಗಿಯಾದ ಹಲವರು. ಎಲ್ಲರಲ್ಲೂ ಸಾಮಾನ್ಯ ಉದ್ದೇಶ ಇರುವ ಆರೋಪ.

ಐಪಿಸಿ ಸೆಕ್ಷನ್‌ 304ರಡಿ ದೋಷಾರೋಪ:
ಚಿತ್ರದ ನಿರ್ಮಾಪಕ ಸುಂದರ್‌ ಪಿ.ಗೌಡ, ನಿರ್ದೇಶಕ ನಾಗಶೇಖರ್‌, ಸಹನಿರ್ದೇಶಕ ಸಿದ್ಧಾರ್ಥ್, ಸಾಹಸ ನಿರ್ದೇಶಕ ರವಿವರ್ಮ, ಯೂನಿಟ್‌ ಮ್ಯಾನೇಜರ್‌ ಭರತ್‌ ಹಾಗೂ ಹೆಲಿಕಾಪ್ಟರ್‌ ಪೈಲೆಟ್‌ ಪ್ರಕಾಶ್‌ ಬಿರಾದಾರ್‌ ವಿರುದ್ಧ ಐಪಿಸಿ ಸೆಕ್ಷನ್‌ 304 (ರೀಡ್‌ ವಿತ್‌ ಐಪಿಸಿ 34) ಸೆಕ್ಷನ್‌ ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಸುಮಾರು 400 ಪುಟಗಳಿರುವ ದೋಷಾರೋಪ ಪಟ್ಟಿಯನ್ನು ಡಿಸಿಬಿ ಇನ್ಸ್‌ಪೆಕ್ಟರ್‌ ಅನಿಲ್‌ಕುಮಾರ್‌ ನ್ಯಾಯಾಲಯಕ್ಕೆ ಸಲ್ಲಿಸಿದ್ದು, 70ಕ್ಕೂ ಹೆಚ್ಚು ಸಾಕ್ಷಿಗಳನ್ನು ಈ ಪಟ್ಟಿಯಲ್ಲಿ ನಮೂದಿಸಲಾಗಿದೆ. ಪ್ರಕರಣ ಸಂಬಂಧ ತಿಪ್ಪಗೊಂಡನಹಳ್ಳಿ ಜಲಾಶಯದ ಎಇಇ ಅನುಸೂಯ ಎಂಬುವರು ತಾವರೆಕೆರೆ ಠಾಣೆಗೆ ದೂರು ನೀಡಿದ್ದರು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next