ಸಿಡ್ನಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ‘ಮಾಸ್ಟರ್ ಚೆಫ್ ಮತ್ತು ಕ್ರಿಕೆಟ್’ ಭಾರತ ಮತ್ತು ಆಸ್ಟ್ರೇಲಿಯಾದ ನಡುವಿನ ಬಾಂಧವ್ಯವನ್ನು ಒಂದುಗೂಡಿಸಿದೆ ಎಂದು ಹೇಳಿದರು.
ಉಭಯ ದೇಶಗಳ ನಡುವಿನ ಬಾಂಧವ್ಯಕ್ಕೆ ನೀಡಿದ ಕೊಡುಗೆಗಾಗಿ ಅವರು ಭಾರತೀಯ ಡಯಾಸ್ಪೊರಾವನ್ನು ಶ್ಲಾಘಿಸಿದರು. ಪ್ರಧಾನಿ ಮೋದಿ ಅವರು ಮೂರು ದಿನಗಳ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ.
“ನಮ್ಮ ಜೀವನಶೈಲಿ ಬೇರೆ ಇರಬಹುದು. ಆದರೆ ಈಗ ಯೋಗ ನಮ್ಮದ್ದು ಒಂದುಗೂಡಿಸಿದೆ. ಹಲವು ಸಮಯದಿಂದ ನಾವು ಕ್ರಿಕೆಟ್ ಕಾರಣದಿಂದ ಒಂದಾಗಿದ್ದೆವು. ಆದರೆ ಈಗ ಟೆನ್ನಿಸ್ ಮತ್ತು ಸಿನಿಮಾ ಕೂಡಾ ನಮ್ಮ ಒಂದು ಮಾಡುತ್ತಿದೆ. ನಾವು ಭಿನ್ನ ರೀತಿಯಲ್ಲಿ ಆಹಾರ ತಯಾರಿ ಮಾಡುತ್ತಿರಬಹುದು ಆದರೆ ಮಾಸ್ಟರ್ ಚೆಫ್ ನಮ್ಮನ್ನು ಕನೆಕ್ಟ್ ಮಾಡುತ್ತಿದೆ’ ಎಂದು ಮೋದಿ ಹೇಳಿದರು.
ಇದನ್ನೂ ಓದಿ:Missing Fisherman: ಪಾಕ್ ಜೈಲಿನಲ್ಲಿ ಕೊನೆಯುಸಿರೆಳೆದ ನಾಪತ್ತೆಯಾಗಿದ್ದ ಕೇರಳದ ಮೀನುಗಾರ
ಉಭಯ ದೇಶಗಳ ನಡುವಿನ ಸಂಬಂಧವು 3C ಗಳನ್ನು ಮೀರಿದೆ – ಕಾಮನ್‌ವೆಲ್ತ್, ಕ್ರಿಕೆಟ್ ಮತ್ತು ಕರಿ, 3Dಗಳು- ಡೆಮಾಕ್ರಸಿ, ಡಯಾಸ್ಪೊರಾ ಮತ್ತು ದೋಸ್ತಿ (ಸ್ನೇಹ) ಮತ್ತು 3Eಗಳು – ಎನರ್ಜಿ, ಎಕಾನಮಿ ಮತ್ತು ಎಜುಕೇಶನ್. ಇದು “ಪರಸ್ಪರ ನಂಬಿಕೆಯ” ಮತ್ತು “ಪರಸ್ಪರ ಗೌರವ”ದ ಮೇಲೆ ಆಧಾರಿತವಾಗಿದೆ ಎಂದು ಅವರು ಹೇಳಿದರು.