Advertisement

ಲಾಕ್‌ಡೌನ್‌ಗೆ ಭಾರೀ ಜನ ಬೆಂಬಲ

07:51 AM May 25, 2020 | Team Udayavani |

ಕಾರವಾರ: ರಾಜ್ಯ ಸರ್ಕಾರದ ಕರೆಯ ಮೇರೆಗೆ ರವಿವಾರದ ಲಾಕ್‌ಡೌನ್‌ ಕಾರವಾರ ಸೇರಿದಂತೆ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ಕರ್ಫ್ಯೂಗೆ ಭಾರೀ ಜನ ಬೆಂಬಲ ವ್ಯಕ್ತವಾಗಿದೆ. ಕಾರವಾರದಲ್ಲಿ ಬೆಳಗ್ಗೆಯಿಂದಲೇ ಜನರು ಬೀದಿಗೆ ಬರಲಿಲ್ಲ. ಕೆಲವರು ಮನೆ ಬಾಗಿಲು ಸಹ ತೆಗೆಯಲಿಲ್ಲ.

Advertisement

ನಗರದ ಮುಖ್ಯ ರಸ್ತೆಗಳು ಖಾಲಿ ಖಾಲಿಯಾಗಿದ್ದವು. ಆಟೋ ಮತ್ತು ಖಾಸಗಿ ವಾಹನಗಳ ಸಂಚಾರ ಪೂರ್ಣ ಸ್ತಬ್ಧವಾಗಿತ್ತು. ಜನರಿಂದ ತುಂಬಿರುತ್ತಿದ್ದ ಗ್ರೀನ್‌ಸ್ಟ್ರೀಟ್‌, ಕಾರವಾರ ಕೋಡಿಬಾಗ ರಸ್ತೆ, ಅಂಬೇಡ್ಕರ್‌ ಸರ್ಕಲ್‌, ಸುಭಾಷ್‌ ಸರ್ಕಲ್‌, ಪಿಕಳೆ ರಸ್ತೆ. ಮಹಾತ್ಮ ಗಾಂಧಿ ರಸ್ತೆಗಳು ಜನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿದ್ದವು. ಅಗತ್ಯ ವಸ್ತುಗಳಾದ ಔಷಧ, ಹಾಲು, ತರಕಾರಿ ಲಭ್ಯವಿದ್ದವು. ಆಸ್ಪತ್ರೆಗೆ ತೆರಳಬೇಕಾಗಿದ್ದ ಜನರು ಸ್ವಂತ ವಾಹನಗಳನ್ನು ಬಳಸಿ ಆಸ್ಪತ್ರೆ ತಲುಪಿದರು. ಬಸ್‌ ನಿಲ್ದಾಣದಲ್ಲಿ ಯಾವುದೇ ಬಸ್‌ ಇರಲಿಲ್ಲ. ಜನ ಹಾಗೂ ವಾಹನ ಸಂಚಾರ ನಿಂತಿದ್ದು, ಬಂದ್‌ ವಾತಾವರಣ ಕಂಡು ಬಂತು. 36 ಗಂಟೆಗಳ ಜನತಾ ಕರ್ಫ್ಯೂ ಮಾದರಿಯ ಲಾಕ್‌ಡೌನ್‌ ಯಶಸ್ಸಿನತ್ತ ಸಾಗಿದ್ದು, ಕೋವಿಡ್‌ ದೂರವಾದರೆ ಸಾಕು ಎಂದು ಜನ ಬಯಸುತ್ತಿದ್ದಾರೆ.

ಲಾಕ್‌ಡೌನ್‌ನಿಂದ ಜನರು ರೋಸಿ ಹೋಗಿದ್ದು, ಇನ್ನಾದರೂ ಈ ನಿರ್ಬಂಧಗಳು ಮುಗಿಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಸ್ವಯಂ ಬಂಧನಕ್ಕೆ ಒಳಗಾಗಿರುವ ಜನರು ಸರ್ಕಾರಗಳ ಅಸಹಾಯಕತೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ಹಿನ್ನೆಡೆಗೆ ತಮ್ಮನ್ನು ತಾವೇ ಶಪಿಸಿಕೊಳ್ಳುತ್ತಿದ್ದಾರೆ. ಅಂಗಡಿ ಮುಂಗಟ್ಟುಗಳು ಕಳೆದ 60ಕ್ಕೂ ಹೆಚ್ಚು ದಿನಗಳಿಂದ ಅನುಭವಿಸಿದ ಯಾತನೆಯ ಮೆಲುಕು ಸಹ ನಡೆಯುತ್ತಿದ್ದು, ಜನರ ಆಕ್ರೋಶ ಮುಂದಿನ ದಿನಗಳಲ್ಲಿ ಭಿನ್ನ ಬಗೆಯಲ್ಲಿ ವ್ಯಕ್ತವಾದರೂ ಅಚ್ಚರಿಯಿಲ್ಲ ಎಂದು ಮಾನಸಿಕ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next