Advertisement

ಮಹಿಳೆಯರ ಸುರಕ್ಷತೆಗೆ ಆಗ್ರಹಿಸಿ ಬೃಹತ್‌ ಪ್ರತಿಭಟನಾ ರ್ಯಾಲಿ

02:15 PM Oct 26, 2021 | Shwetha M |

ವಿಜಯಪುರ: ಜಿಲೆಯಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ ಪ್ರಕರಣ ಖಂಡಿಸಿ ವಿಜಯಪುರ ನಗರ ಸ್ಲಂ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ, ಪ್ರಗತಿಪರ ಸಂಘಟನೆಗಳ ವೇದಿಕೆ ಸಂಘಟನೆಗಳ ಸಹಯೋಗದಲ್ಲಿ ನಗರದಲ್ಲಿ ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.

Advertisement

ಡಾ| ಬಿ.ಆರ್‌.ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮಹಿಳೆಯರ ಮೇಲಿನ ದೌರ್ಜನ್ಯ ಕೃತ್ಯಗಳನ್ನು ಖಂಡಿಸುವ ಘೋಷ ವಾಕ್ಯಗಳ ಫಲಕಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತ ಪ್ರತಿಭಟನಾ ರ್ಯಾಲಿ ನಡೆಸಿದ ಮಹಿಳೆಯರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಗಳ ನೇತೃತ್ವ ವಹಿಸಿದ್ದ ನಿರ್ಮಲಾ ಹೊಸಮನಿ, ವಿಜಯಪುರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಒಂದೇ ವಾರದಲ್ಲಿ ಎರಡು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವಾಗಿದೆ. ಸಮಾಜದಲ್ಲಿ ಮಹಿಳೆಯರಿಗೆ ಸುರಕ್ಷತೆ ಎಂಬುದೇ ಇಲ್ಲವಾಗಿದೆ. ಅದರಲ್ಲೂ ಚಿಕ್ಕ ಚಿಕ್ಕ ಮಕ್ಕಳ ಮೇಲೆ ಅತ್ಯಾಚಾರದಂಥ ದೌರ್ಜನ್ಯ ಕೃತ್ಯಗಳು ನಡೆಯುತ್ತಿರುವುದು ಖಂಡನೀಯ ಎಂದರು.

ಸಮಾಜದಲ್ಲಿ ಮಹಿಳೆಯರು ಅದರಲ್ಲೂ ಅಪ್ರಾಪ್ತ ಬಾಲೆಯರ ಮೇಲೆ ನಡೆಯುತ್ತಿರುವ ಇಂಥ ಕೃತ್ಯಗಳನ್ನು ತಡೆಯುವ ಕುರಿತು ಪ್ರತಿ ಕುಟುಂಬದಲ್ಲಿ ಮಕ್ಕಳಿಗೆ ಪಾಲಕರು ತಿಳಿವಳಿಕೆ ನೀಡಬೇಕು. ಈ ಕೆಲಸ ಆಗುತ್ತಿಲ್ಲ. ಪರಿಣಾಮ ತಂದೆ-ತಾಯಂದಿರು ತಮ್ಮ ಮಕ್ಕಳನ್ನು ಮನೆಯಿಂದ ಹೊರಗೆ ಕಳಿಸಲು ಭಯಪಡುವ ದುಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರ ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣದಲ್ಲಿ ಕಾಮುಕರನ್ನು ಗಲ್ಲಿಗೆ ಏರಿಸುವ ಇಲ್ಲವೇ ಸಮಾಜಕ್ಕೆ ಪಾಠವಾಗುವ ರೀತಿಯಲ್ಲಿ ಕಠಿಣ ಶಿಕ್ಷೆ ವಿಧಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದರು.

ಟಿಯೋಲ ಮಚಾದೊ ಮಾತನಾಡಿ, ಸಮಾಜದಲ್ಲಿ ಈಚೆಗೆ ನಡೆಯುತ್ತಿರುವ ಇಂಥ ಘಟನೆಗಳು ಅದರಲ್ಲೂ ವಿಜಯಪುರ ಜಿಲ್ಲೆಯಲ್ಲಿ ಅಮಾನವೀಯ ಇಂಥ ಕೃತ್ಯಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಇದರಿಂದ ಹೆಣ್ಣು ಮಕ್ಕಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಕಾರಣ ಇಂತಹ ಕೃತ್ಯಗಳನ್ನು ತಡೆಗಟ್ಟಲು ಸಮಾಜದ ಪ್ರತಿಯೊಬ್ಬರೂ ಜಾಗೃತರಾಗಬೇಕು. ಸರ್ಕಾರ ಕಾಮುಕರಿಗೆ ಕಠಿಣ ಶಿಕ್ಷೆ ನೀಡಬೇಕು. ಇಲ್ಲವಾದಲ್ಲಿ ಸಾರ್ವಜನಿಕವಾಗಿ ಮಹಿಳೆಯರಿಗೆ ಅಪರಾಧಿಗಳನ್ನು ಒಪ್ಪಿಸಿ ಬಿಡಿ ಮಹಿಳೆಯರೆ ಅವರನ್ನು ಶಿಕ್ಷಿಸುತ್ತಾರೆ ಎಂದು ಆಗ್ರಹಿಸಿದರು.

Advertisement

ಸರ್ಕಾರ ಬೇಗನೆ ಎಚ್ಚೆತ್ತುಕೊಂಡು ಸಂತ್ರಸ್ತರಿಗೆ ನ್ಯಾಯ ಕೊಡಿಸಬೇಕು. ಪುನಃ ಇಂತಹ ಪ್ರಕರಣಗಳು ಜರುಗದಂತೆ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿಕಠಿಣ ಕಾನೂನುಗಳನ್ನು ಜಾರಿಗೆತರಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿ ತಮ್ಮ ಮಾತನ್ನು ಮುಗಿಸಿದರು.

ಇದನ್ನೂ ಓದಿ: ಕೃಷಿ ಕಾಯ್ದೆತಿದ್ದುಪಡಿ ವಿರುದ್ದ ಹೋರಾಟ ಅಗತ್ಯ

ಪ್ರತಿಭಟನಾ ಸ್ಥಳಕ್ಕೆ ಆಗಿಸಿದ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಮನವಿ ಸ್ವೀಕರಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಮಹಿಳಾ ಒಕ್ಕೂಟದ ಹಮೀದಾ ಪಟೇಲ್‌, ಮೀನಾಕ್ಷಿ ಕಾಲೇಬಾಗ, ಶ್ರೀದೇವಿ ಡೆಂಗಿ, ರೇಣುಕಾ ಕೊಳೂರ, ಸುಜಾತಾ ಶಿಂಗೆ, ಟೀನಾ, ಅಮಲಾ, ಫರ್ಜಾನಾ ಜಮಾದಾರ, ರೇಷ್ಮಾ ಪಡಗಾನೂರ, ಬೀನಾ ಬಾಗಡೆ, ಜ್ಯೋತಿ ಬಾಗಡೆ, ಸವಿತಾ ಬಾಗಡೆ, ಸರಸ್ವತಿ ಕಪಾಳೆ, ಅಕ್ರಂ ಮಾಶ್ಯಾಳಕರ, ಸದಾನಂದ ಮೊದಿ, ಕಲಿಫಾ, ಆಜಾದಟೇಲರ್‌, ಭರತಕುಮಾರ, ಕೃಷ್ಣ ಜಾಧವ, ರಫೀಕ ಮನಗೂಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next