Advertisement
ಹರಿಯಿತು ಜನಸಾಗರಪ್ರತಿಭಟನೆಯ ಹಿನ್ನೆಲೆಯಲ್ಲಿ ಭಾರೀ ಪೊಲೀಸ್ ನಿಯೋಜನೆ ಮಾಡಲಾಗಿತ್ತು. ಆದರೆ ದೌರ್ಜನ್ಯದ ವಿರುದ್ಧ ದನಿ ಎತ್ತುವುದಕ್ಕಾಗಿ ಬಿ.ಸಿ. ರೋಡ್ ಮತ್ತು ಸುತ್ತಲಿನ ಪ್ರದೇಶಗಳಿಂದ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಪ್ರತಿಭಟನೆಯನ್ನು ತಡೆಯಲು ಪೊಲೀಸರು ವಿವಿಧ ರೀತಿಯಲ್ಲಿ ಪ್ರಯತ್ನಿಸಿದರೂ ಫಲ ನೀಡಲಿಲ್ಲ. ತುರ್ತು ಪರಿಸ್ಥಿತಿ ನಿಭಾವಣೆಗೆ ವಜ್ರ ಪಡೆ, ವಿವಿಧ ಜಿಲ್ಲೆಗಳ ಹೆಚ್ಚುವರಿ ಪೊಲೀಸ್ ಪಡೆಯನ್ನು ತರಿಸಿಕೊಳ್ಳಲಾಗಿತ್ತು. ಲಾಠಿಚಾರ್ಜ್‌ಗೂ ಪೊಲೀಸರು ಸಿದ್ಧಗೊಂಡಿದ್ದರು. ಬಿ.ಸಿ.ರೋಡ್ ಬಿಜೆಪಿ ಕಚೇರಿಯಲ್ಲಿ, ಬಸ್ ನಿಲ್ದಾಣದಲ್ಲಿ, ಬ್ರಹ್ಮಶ್ರೀ ನಾರಾಯಣಗುರು ವೃತ್ತದಲ್ಲಿ ತಂಡಗಳಾಗಿ ಸೇರಿಕೊಂಡಿದ್ದ ಕಾರ್ಯಕರ್ತರು ಪ್ರತಿಭಟನೆ ಆರಂಭವಾಗುತ್ತಿದ್ದಂತೆ ಬಸ್‌ಸ್ಟಾಂಡ್ ಪ್ರದೇಶಕ್ಕೆ ಏಕಕಾಲದಲ್ಲಿ ಬಂದು ಸೇರ್ಪಡೆಗೊಂಡರು.
ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು, ಬಿಜೆಪಿ ಪ್ರಮುಖರಾದ ರಾಜೇಶ್ ನಾೖಕ್ ಉಳಿಪಾಡಿಗುತ್ತು, ಕೆ. ಪದ್ಮನಾಭ ಕೊಟ್ಟಾರಿ ಮತ್ತಿತರರು ಬಿಜೆಪಿ ಕಚೇರಿಯಿಂದ ಮೆರವಣಿಗೆಯಲ್ಲಿ ಬಂದಿದ್ದರು. ಉಳಿದಂತೆ ಡಾ| ಕಲ್ಲಡ್ಕ ಪ್ರಭಾಕರ ಭಟ್, ಶಾಸಕರಾದ ಸುನಿಲ್ ಕುಮಾರ್, ಎಸ್.ಅಂಗಾರ ಮೊದಲಾದವರು ನೇರವಾಗಿ ಬಂದು ಸೇರಿಕೊಂಡರು. ಮುಚ್ಚಿದ ಅಂಗಡಿ
ಪ್ರತಿಭಟನೆ ಆರಂಭವಾಗುತ್ತಿದ್ದಂತೆ ಬಿ.ಸಿ.ರೋಡ್‌ನ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿಕೊಂಡಿದ್ದವು. ಖಾಸಗಿ ಸರ್ವಿಸ್ ಬಸ್ ಮತ್ತು ವಾಹನಗಳು ಬಸ್‌ಸ್ಟಾಂಡ್ ತೆರವು ಮಾಡಿದವು. ಅಟೋರಿಕ್ಷಾಗಳು ಬಸ್ ನಿಲ್ದಾಣ ಪಕ್ಕದಲ್ಲಿ ಇರಲಿಲ್ಲ. ಪ್ರತಿಭಟನೆಗೆ ಜನ ಸೇರುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಪೊಲೀಸರು ನಿಲುಗಡೆ ಮಾಡಿದರು. ಬಿ.ಸಿ.ರೋಡ್‌ನಿಂದ ಫರಂಗಿಪೇಟೆ ತನಕ, ಪಾಣೆಮಂಗಳೂರಿಂದ ಮೆಲ್ಕಾರ್ ಕಲ್ಲಡ್ಕ ತನಕ, ಬಿ.ಸಿ.ರೋಡ್ ಧರ್ಮಸ್ಥಳ ರಸ್ತೆಯಲ್ಲಿ ಜಕ್ರಿಬೆಟ್ಟು ತನಕ ವಾಹನಗಳ ಸರತಿಸಾಲು ನಿಲುಗಡೆ ಆಗಿತ್ತು. ಮೆಲ್ಕಾರ್ ಮೂಲಕ ಮಂಗಳೂರಿಗೆ ಹೋಗುವಂತೆ ಬದಲಿ ರಸ್ತೆಯನ್ನು ಸೂಚಿಸಲಾಗಿತ್ತು.
Related Articles
ಶರಣ್ ಪಂಪ್‌ವೆಲ್, ಸತ್ಯಜಿತ್ ಸುರತ್ಕಲ್, ದಿನೇಶ್ ಭಂಡಾರಿ, ಚೆನ್ನಪ್ಪ ಕೋಟ್ಯಾನ್, ನಾರಾಯಣ ಸೋಮಯಾಜಿ, ರೊನಾಲ್ಡ್ ಡಿ’ಸೋಜಾ, ಪುರುಷೋತ್ತಮ ಸಾಲ್ಯಾನ್ ದಿಂಡಿಕೆರೆ, ಮೋನಪ್ಪ ದೇವಸ್ಯ, ಡಾ| ಕಮಲಾ ಪ್ರ. ಭಟ್, ಆಶಾಪ್ರಸಾದ್ ರೈ, ರಾಧಾಕೃಷ್ಣ ಅಡ್ಯಂತಾಯ ಸಹಿತ ಅನೇಕ ಕಾರ್ಯಕರ್ತರನ್ನು ಬಂಧಿಸಲಾಯಿತು.
Advertisement
ಪ್ರತಿಭಟನಕಾರರ ಬಂಧನಪ್ರತಿಭಟನೆಯಲ್ಲಿ ತೊಡಗಿದ್ದವರನ್ನು ಪೊಲೀಸರು ಬಂಧಿಸುತ್ತಿದ್ದಂತೆ ಕೆಲವು ಮಂದಿ ಕುಳಿತು, ನೆಲದಲ್ಲಿ ಹೊರಳಾಡಿ ಪ್ರತಿಭಟಿಸಿದಾಗ ಅವರನ್ನು ಎತ್ತಿಕೊಂಡು ಬಸ್ಸಿಗೆ ತಳ್ಳಿದ್ದು, ಕೆಲವರನ್ನು ಪುತ್ತೂರು ನಗರ, ಗ್ರಾಮಾಂತರ, ಬೆಳ್ತಂಗಡಿ ಠಾಣೆಗೆ ಸಾಗಿಸಿದ್ದರು. ಸಂಸದರು, ಶಾಸಕರನ್ನು ಬಂಟ್ವಾಳ ಗ್ರಾಮಾಂತರ ಠಾಣೆಗೆ ಕರೆದೊಯ್ದು ಬಂಧನದ ಬಳಿಕ ಅವರು ಜಾಮೀನು ಪಡೆದು ಬಿಡುಗಡೆ ಹೊಂದಿದ್ದಾರೆ.