ಅಯೋಧ್ಯೆ: ಕಳೆದ ಸೋಮವಾರ ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿದ್ದು ಇದರೊಂದಿಗೆ ನೂರಾರು ವರುಷಗಳ ತಪಸ್ಸಿನ ಫಲವಾಗಿ ನೆರವೇರಿದಂತಾಗಿದೆ. ಅಂದಿನಿಂದ ಅಯೋಧ್ಯೆಗೆ ಭಕ್ತರ ದಂಡೇ ಹರಿದು ಬರುತ್ತಿದೆ.
ಮಂಗಳವಾರ ಮುಂಜಾನೆ ಮೂರೂ ಗಂಟೆಯಿಂದಲೇ ರಾಮ ಮಂದಿರದ ಹೊರ ಭಾಗದಲ್ಲಿ ಭಕ್ತರು ಬಾಲ ರಾಮನ ದರ್ಶನಕ್ಕೆ ಕಾದು ನಿಂತಿದ್ದು ಕೇವಲ ಮಂಗಳವಾರ ಒಂದೇ ದಿನದಲ್ಲಿ ಸುಮಾರು ಐದು ಲಕ್ಷ ಮಂದಿ ಭಕ್ತರು ಬಾಲ ರಾಮನ ದರ್ಶನ ಪಡೆದಿದ್ದಾರೆ ಎಂದು ಟ್ರಸ್ಟ್ ಹೇಳಿದೆ.
ಅದರಂತೆ ಬುಧವಾರವೂ ಭಕ್ತರ ದಂಡು ಅಯೋಧ್ಯೆಯತ್ತ ಹರಿದು ಬರುತ್ತಿದ್ದು ಪೊಲೀಸರಿಗೆ ಭಕ್ತರನ್ನು ನಿಯಂತ್ರಿಸುವುದೇ ದೊಡ್ಡ ಸಾಹಸದ ಕೆಲವಾಗಿ ಪರಿಣಮಿಸಿದೆ. ಅಲ್ಲದೆ ಭಾರಿ ಭಕ್ತರು ಸೇರುತ್ತಿರುವುದರಿಂದ ಭಕ್ತರನ್ನು ನಿಯಂತ್ರಿಸಲು ಕೆಲ ಕಿಲೋಮೀಟರ್ ದೂರದಲ್ಲೇ ವಾಹನಗಳನ್ನು ತಡೆದು ನಿಲ್ಲಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಅದೆಷ್ಟೋ ವರ್ಷದಿಂದ ರಾಮ ಮಂದಿರ ನಿರ್ಮಾಣವಾಗಬೇಕೆಂಬ ಬಯಕೆ ಈಡೇರಿದೆ ಹಾಗಾಗಿ ಜೀವನದಲ್ಲಿ ಒಮ್ಮೆ ರಾಮನ ದರ್ಶನ ಪಡೆಯಬೇಕೆಂಬ ಹಂಬಲ ಭಕ್ತರಲ್ಲಿ ಹಾಗಾಗಿ ಎರಡು ದಿನಗಳಿಂದ ಅಯೋಧ್ಯೆಗೆ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ ಇನ್ನೂ ಆಗಮಿಸುತ್ತಿದ್ದಾರೆ. ಇಷ್ಟೊಂದು ಸಂಖ್ಯೆಯಲ್ಲಿ ಬಂದ ಭಕ್ತರನ್ನು ನಿಯಂತ್ರಿಸಲು ಅಲ್ಲಿದ್ದ ಪೊಲೀಸರು ಭದ್ರತಾ ಸಿಬಂದಿ ಹರಸಾಹಸ ಪಡುವಂತಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿರುವ ಕಾರಣ ಅಯೋಧ್ಯೆಯಲ್ಲಿ ಹೋಟೆಲ್, ರೂಮ್ ಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಎಷ್ಟೋ ತಿಂಗಳ ಕಾಲದ ವರೆಗೆ ಹೋಟೆಲ್ ಗಳು ಬುಕ್ ಆಗಿದೆ ಎನ್ನಲಾಗಿದೆ, ಅದೂ ಅಲ್ಲದೆ ಕೆಲವೊಂದು ಹೋಟೆಲ್ ಗಳಲ್ಲಿ ಹೆಚ್ಚಿನ ಬಾಡಿಗೆ ವಸೂಲಿ ಮಾಡುತ್ತಿರುವ ಆರೋಪಗಳು ಕೇಳಿಬರುತ್ತಿವೆ.