Advertisement

ಹಸೆಮಣೆ ಏರಿದ 35 ಜೋಡಿಗಳು: ವಾರಾಂತ್ಯ ಕರ್ಫ್ಯೂ ರದ್ದು ಬಳಿಕ ಕಟೀಲಿನಲ್ಲಿ ಸರಳ ವಿವಾಹ

10:41 PM Jan 23, 2022 | Team Udayavani |

ಕಟೀಲು: ವಾರಾಂತ್ಯ ಕರ್ಫ್ಯೂ ರದ್ದಾದ ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ರವಿವಾರ 35 ಜೋಡಿಗಳಿಗೆ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.

Advertisement

ಬೆಳಗ್ಗೆ 8.45ರಿಂದ ಆರಂಭವಾದ ವಿವಾಹ ಮುಹೂರ್ತಗಳು ಮಧ್ಯಾಹ್ನ 12.30ರ ವರೆಗೆ ನಡೆದಿದ್ದು, ಸುಮಾರು 6 ಸಾವಿರ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.

ದೇವಸ್ಥಾನದ ಪ್ರಾಂಗಣದಲ್ಲಿ ಮದುವೆ ಮುಹೂರ್ತಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಡುವ ಸಲುವಾಗಿ ನಾಲ್ವರು ಅರ್ಚಕ ಪುರೋಹಿತರು, ಎರಡು ಕೌಂಟರ್‌ ಮತ್ತು ನೋಂದಣಿಗೆ ಪ್ರತ್ಯೇಕ ಸಿಬಂದಿ ವ್ಯವಸ್ಥೆ ಮಾಡಲಾಗಿತ್ತು. ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನ ಫಲಕ ಹಾಕಲಾಗಿದ್ದು, ಧ್ವನಿವರ್ಧಕದ ಮೂಲಕ ಪ್ರಕಟಿಸಿದ ಜಾಗೃತಿ ಮೂಡಿಸಲಾಯಿತು.

ಉತ್ತಮ ಟ್ರಾಫಿಕ್‌ ನಿರ್ವಹಣೆ
ಮದುವೆ ಆಗಮಿಸಿದ ದಿಬ್ಬಣದವರು ಮತ್ತು ರಜಾ ದಿನವಾದುದರಿಂದ ಕಟೀಲು ಪೇಟೆ ಮತ್ತು ರಥಬೀದಿ ಬಸ್‌ ನಿಲ್ದಾಣದಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗುವ ನಿರೀಕ್ಷೆ ಮೊದಲೇ ಇದ್ದುದರಿಂದ ಎಲ್ಲವನ್ನೂ ಸುವಸ್ಥಿತಗೊಳಿಸಲಾಯಿತು.
– ಸನತ್‌ ಕುಮಾರ್‌ ಶೆಟ್ಟಿ ಕೊಡೆತ್ತೂರುಗುತ್ತು
ಆಡಳಿತ ಮಂಡಳಿಯ ಅಧ್ಯಕ್ಷರು, ಆಡಳಿತ ಮೊಕ¤ೇಸರರು,
ಕಟೀಲು ದೇವಸ್ಥಾನ

Advertisement

Udayavani is now on Telegram. Click here to join our channel and stay updated with the latest news.

Next