Advertisement
ನಂತರ ಮಾತನಾಡಿದ ಇಸ್ಕಾನ್ ಬೆಂಗಳೂರಿನ ಅಧ್ಯಕ್ಷ ಮಧು ಪಂಡಿತ ದಾಸ ಅವರು, ಬಾಂಗ್ಲಾದೇಶ ದಲ್ಲಿ ಇಸ್ಕಾನ್ ಭಕ್ತರ, ಹಿಂದೂಗಳ ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ನಡೆದ ಅಪ್ರಚೋದಿತ ದಾಳಿಯು ತುಂಬ ನೋವುಂಟುಮಾಡಿದೆ. ಬಾಂಗ್ಲಾ ದೇಶದ ಅಲ್ಪಸಂಖ್ಯಾತರಿಗೆ ನಾವೆಲ್ಲರೂ ಒಗ್ಗಟ್ಟಾಗಿ ಬೆಂಬಲ ಮತ್ತು ಐಕಮತ್ಯ ಸೂಚಿಸುತ್ತೇವೆ ಮತ್ತು ಅವರ ಸುರಕ್ಷತೆ, ಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇವೆ ಎಂದರು.
Related Articles
Advertisement
ಬಾಂಗ್ಲಾದ ಅಲ್ಪಸಂಖ್ಯಾತರ ರಕ್ಷಣೆಗೆ ಇಸ್ಕಾನ್ ವಿಶ್ವದಾದ್ಯಂತ ಶಾಂತಿಯುತ ಪ್ರತಿಭಟನೆ ನಡೆಸುತ್ತಿದೆ. ಬಾಂಗ್ಲಾದೇಶದ ಹಿಂದೂಗಳೊಂದಿಗೆ ಐಕಮತ್ಯ ಸೂಚಿಸಲು ಮತ್ತು ತನ್ನ ನೋವು, ದುಃಖವನ್ನು ಅಭಿವ್ಯಕ್ತಪಡಿಸಲು ಜಾಗತಿಕ ಹಿಂದೂ ಸಮಾಜವು ಜಾಗತಿಕ ಕೀರ್ತನೆ ಮೆರವಣಿಗೆ ನಡೆಸಿದೆ. ಈ ಪ್ರತಿ ಭಟನೆಯು ಯಾವುದೇ ಧಾರ್ಮಿಕ ಸಮುದಾ ಯದ ವಿರುದ್ಧವಾಗಲಿ, ಬಾಂಗ್ಲಾದೇಶದ ಸರ್ಕಾರದ ವಿರುದ್ಧವಾಗಲಿ ಅಲ್ಲ. ಇದು ಬಾಂಗ್ಲಾ ದೇಶದ ಎಲ್ಲ ಅಲ್ಪಸಂಖ್ಯಾತರ ಸುರಕ್ಷತೆಗಾಗಿ ನಡೆಯುತ್ತಿದೆ ಎಂದರು. ದೇವಸ್ಥಾನದ ಸ್ವಯಂ ಸೇವಕರು, ಭಕ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ಕೀರ್ತನೆ ಮೆರವಣಿಗೆಯಲ್ಲಿದ್ದರು.