Advertisement

ಪಾಲ್ಘರ್‌ನಲ್ಲಿ ಅಂಧ-ವಿಕಲಾಂಗ ಸೇವಾ ಸಂಸ್ಥೆಯಿಂದ ಸಾಮೂಹಿಕ ವಿವಾಹ 

03:52 PM Dec 08, 2018 | Team Udayavani |

ಮುಂಬಯಿ: ಶಾರೀರಿಕವಾಗಿ ಉತ್ತಮವಾಗಿರುವ ಜನರ ಮನಸ್ಸಿನಲ್ಲಿ ಛಲ, ಪೈಪೋಟಿ ಅಥವಾ ಅಸೂಯೆಯಂತಹ ಭಾವನೆಗಳು ತುಂಬಿರುತ್ತವೆೆ. ಆದರೆ ಅಂಗವಿಕಲರು ಹಾಗಲ್ಲ. ಅವರ ಮನಸ್ಸು ಮಾಲಿನ್ಯರಹಿತ ಹಾಗೂ ಚಿಕ್ಕ ಮಕ್ಕಳಂತೆ ಮುಗ್ಧ ಹಾಗೂ ಪವಿತ್ರವಾಗಿರುತ್ತದೆ. ಅವರಲ್ಲಿ ಯಾವುದೇ ರೀತಿಯ ಕಪಟ-ಮೋಸಗಳು ಇರುವುದಿಲ್ಲ. ವಿಕಲಾಂಗರು ಪರಿಶುದ್ಧ ಮನಸ್ಸಿನಿಂದ ಕೂಡಿರುತ್ತಾರೆ. ವಿಕಲಾಂಗರು ತಮ್ಮಲ್ಲಿರುವ ಕೀಳರಿಮೆಯನ್ನು ಬಿಟ್ಟು ನಡೆದಾಗ ಅವರ ಬದುಕು ಹಚ್ಚಿಟ್ಟ ಹಣತೆಯಂತಾಗುತ್ತದೆ. ತಮಗೆ ಒದಗುವ ಎಲ್ಲ ರೀತಿಯ ಸವಲತ್ತುಗಳನ್ನು, ಅವಕಾಶಗಳನ್ನು ಪಡೆದುಕೊಂಡು ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗಿ ಬಾಳಬೇಕು ಎಂದು ಉದ್ಯಮಿ, ಸಮಾಜ ಸೇವಕ ವಿರಾರ್‌ ಶಂಕರ್‌ ಶೆಟ್ಟಿ ಅವರು ನುಡಿದರು.

Advertisement

ಜಾಗತಿಕ ವಿಕಲಾಂಗ ದಿನದ ಅಂಗವಾಗಿ ಪಾಲ^ರ್‌ನ ವಂದೇ ಮಾತರಂ ಅಂಧ ವಿಕಲ ಸೇವಾಭಾವಿ ಸಂಸ್ಥೆಯ ವತಿಯಿಂದ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ  ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಂತೋಷವಾಗುತ್ತದೆ. ಮನಸ್ಸು ಪ್ರಫುಲ್ಲಗೊಳ್ಳುತ್ತದೆ ಎಂದು ಅಭಿಪ್ರಾಯಿಸಿದರು.

ನಾವು ವಿಕಲಾಂಗರಾಗಿದ್ದರೂ ಸುಂದರ ವ್ಯಕ್ತಿಗಳಾಗಿರುವೆವು ಎಂಬ ಶೀರ್ಷಿಕೆಯಡಿ ಜರಗಿದ ವಿಶೇಷ ಸಮಾರಂಭದಲ್ಲಿ ಐದು ವಿಕಲಾಂಗ ಜೋಡಿಗಳು ಹಸೆಮಣೆ ಏರಿದ್ದು, ಪ್ರಾಯೋಜಕರಾದ ವಿರಾರ್‌ ಶಂಕರ್‌ ಶೆಟ್ಟಿ ಮತ್ತು ರತಿ ಶಂಕರ್‌ ಶೆಟ್ಟಿ ದಂಪತಿಯು ಜೋಡಿಗಳನ್ನು ಆಶೀರ್ವದಿಸಿದರು. ಪುರೋಹಿತ ಯೋಗೇಶ್‌ ಜೋಶಿ ಅವರು ವಿವಿಧ ವಿಧಿ-ವಿಧಾನಗಳನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿರಾರ್‌ ಶಂಕರ್‌ ಶೆಟ್ಟಿ ಅವರನ್ನು ಗಣ್ಯರು ಗೌರವಿಸಿದರು.

ಪಾಲ^ರ್‌ ಪಶ್ಚಿಮದಲ್ಲಿನ ವಿಟuಲ ಮಂದಿರದ ಬಳಿಕ ದಾಂಡೇಕರ್‌ ಸಭಾಗೃಹದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ವಿನೋದ್‌ ರಾವುತ್‌, ಪಾಲ^ರ್‌ನ ನಗರಾಧ್ಯಕ್ಷ ಉತ್ತಮ್‌ ಪಿಂಪಾಳೆ, ರೋಟರಿ ಅಧ್ಯಕ್ಷ ಮಯೂರ್‌ ಕಾಶೀಕರ್‌, ಕಾಂತಾ ಹಾಸ್ಪಿಟಲ್‌ನ ಡಾ| ರಾಜೇಂದ್ರ ಚವ್ಹಾಣ್‌, ಕಾರ್ಯಕ್ರಮದ ಸಂಚಾಲಕ ಸಂತೋಷ್‌ ಲಹಾಂಗೆ, ನ್ಯಾಯವಾದಿ ವಿ. ಡಿ. ಜರಾಪRರ್‌, ಆದಿವಾಸಿ ಮಂಡಳದ ಅಶೋರ್‌ ಚುರಿ, ತಾರಾಪುರದ ಸಮಾಜ ಸೇವಕ ಇಸಾಮುದ್ದೀನ್‌ ಶೇಖ್‌, ಬೊಯಿಸರ್‌ ಸಮಾಜ ಸೇವಕಿ ನೀತಾ 

ರಾವುತ್‌ ಹಾಗೂ ಸಂಸ್ಥೆಯ ಪದಾಧಿಕಾರಿಗಳು, ವಧು-ವರರ ಕುಟುಂಬದ ಸದಸ್ಯರು, ಹಿತಚಿಂತಕರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ವಿರಾರ್‌ನ ವಿವಾ ಕಾಲೇಜಿನ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳ ವ್ಯವಸ್ಥಾಪನೆಯಲ್ಲಿ ಕಾರ್ಯಕ್ರಮವು ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next