Advertisement
ತಾಲೂಕಿನ ತೋರಣದಿನ್ನಿ ಜಿಪಂ ವ್ಯಾಪ್ತಿಯ ಗಾಳಿದುರ್ಗಮ್ಮ ಕ್ಯಾಂಪ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಮತದಾರರನ್ನು ಖರೀದಿ ಮಾಡುವುದು ದೊಡ್ಡ ಅಪರಾಧ. ಹಣ ಹಂಚುವ ಮೂಲಕ ಜನರನ್ನು ಖರೀದಿ ಮಾಡುತ್ತೇವೆ ಎನ್ನುವುದು ಮೂರ್ಖತನ. ಆದರೆ ಈ ಚುನಾವಣೆಯಲ್ಲಿ ಹಂಚುವ ಹಣ ಅದು ಪಾಪದ ಹಣ. ಬಿಜೆಪಿಯೇ ಆಗಲಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೇ ಆಗಲಿ ಯಾವ ಪಕ್ಷ ಹಂಚಿದರೂ ಅದು ಪಾಪದ ರೊಕ್ಕ. ಜನ ಇದನ್ನು ಗುಡಿ-ಗುಂಡಾರಕ್ಕೂ ಮತ್ತೂಂದು ಒಳ್ಳೆಯ ಕಾರ್ಯಕ್ಕೋ ಬಳಸಬೇಕು. ಯಾರು ಎಷ್ಟು ದೊಡ್ಡ ಕೊಟ್ಟರೂ ಅದನ್ನು ಪಡೆದು ಒಳ್ಳೆಯ ವ್ಯಕ್ತಿಗಳಿಗೆ ಮಾತ್ರ ಮತ ಹಾಕಬೇಕು. ಅದರಲ್ಲೂ ಈ ಬಾರಿ ಉಪಚುನಾವಣೆಯಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಕೋಟಿಗಟ್ಟಲೇ ಹಣ ಖರ್ಚು ಮಾಡುತ್ತಾರೆ. ಅವರ ಹಣದ ಅಹಂಕಾರಕ್ಕೆ ಬುದ್ಧಿ ಕಲಿಸಬೇಕು. ಬಸನಗೌಡ ತುರುವಿಹಾಳ ಅವರಿಗೆ ವೋಟ್ ಹಾಕಬೇಕು ಎಂದು ಮನವಿ ಮಾಡಿದರು.
Related Articles
Advertisement
ವಿರೋಧಿ ಗಳ ಆರೋಪದಲ್ಲಿ ಹುರುಳಿಲ್ಲ:
ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಮಾತನಾಡಿ, ಹಣಕ್ಕಾಗಿ ಬಿಜೆಪಿಗೆ ಹೋಗಿದ್ದಾರೆಂಬ ನಮ್ಮ ವಿರೋ ಧಿಗಳ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಹಿಂದಿನ ಚುನಾವಣೆಯಲ್ಲಿ ನಮ್ಮ ಪ್ರತಿಸ್ಪ ರ್ಧಿಗೆ 60 ಸಾವಿರ ಮತ ಬಿದ್ದಾಗ ನಮಗೂ ಅಚ್ಚರಿಯಾಗಿತ್ತು. ಅದು ಅವರ ಮೇಲಿನ ಅಭಿಮಾನದ ಮತಗಳಲ್ಲ. ಬದಲಿಗೆ ರಾಜ್ಯದಲ್ಲಿ, ರಾಷ್ಟ್ರದಲ್ಲಿ ಬಿಜೆಪಿಯನ್ನು ಅಧಿ ಕಾರಕ್ಕೆ ತರಬೇಕೆಂಬ ಮತಗಳಾಗಿದ್ದವು. ಜನರ ನಾಡಿಮಿಡಿತವನ್ನು ಅರಿತು ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಏಕೈಕ ಉದ್ದೇಶದಿಂದ ಬಿಜೆಪಿ ಸೇರಬೇಕಾಯಿತು. ಕಾಂಗ್ರೆಸ್ ಗೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ ಋಣಕ್ಕಾಗಿ ಸಿಎಂ, ಕಳೆದ ಒಂದೂವರೆ ವರ್ಷದಲ್ಲೇ ಕ್ಷೇತ್ರಕ್ಕೆ ಸಿಎಂ 1200 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲೂ ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಲು, ಬಿಎಸ್‌ವೈ ಶಕ್ತಿಯನ್ನು ಬಲಪಡಿಸಲು ಬಿಜೆಪಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.
ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಜಿಪಂ ಸದಸ್ಯ ಅಮರೇಗೌಡ ವಿರೂಪಾಪುರ ಅವರು ಮಾತನಾಡಿ, ಬಿಜೆಪಿ ಅಭ್ಯìಥಿಯನ್ನು ಯಾಕೆ ಗೆಲ್ಲಿಸಬೇಕು. ಅವರು ಗೆದ್ದರೆ ಕ್ಷೇತ್ರಕ್ಕೆ ಆಗುವ ಅನುಕೂಲಗಳನ್ನು ವಿವರಿಸಿದರು. ಜಿಪಂ ಅಧ್ಯಕ್ಷೆ ಆದಿಮನೆ ವೀರಲಕ್ಷಿŒ, ಜಿಪಂ ಸದಸ್ಯ ಎನ್.ಶಿವನಗೌಡ ಗೋರೆಬಾಳ, ಬಸವರಾಜಗೌಡ ಕುರುಕುಂದಿ ಇದ್ದರು. ಅದ್ಧೂರಿ ಮೆರವಣಿಗೆ: ಬಿಜೆಪಿ ಅಭ್ಯರ್ಥಿ ಗ್ರಾಮಕ್ಕೆ ಕಾಲಿಟ್ಟಾಗ ಕುರುಕುಂದಾ, ತಿಡಿಗೋಳ ಸೇರಿದಂತೆ ಈ ಮಾರ್ಗದ ಗ್ರಾಮಗಳಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.