Advertisement
ತಜ್ಞರು ಹೇಳುವ ಪ್ರಕಾರ, ಎನ್ 95 ಸುರಕ್ಷಾ ಮಾಸ್ಕ್ಗಳನ್ನು ಬಳಸುವುದು ಉತ್ತಮ. ಇವುಗಳನ್ನು ಸಾಮಾನ್ಯವಾಗಿ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ವೈದ್ಯರು ಬಳಸುತ್ತಾರೆ. ಮೂರು ಮೈಕ್ರಾನ್‌ಗಿಂತ ದೊಡ್ಡ ಕಣಗಳು ಉಸಿರಿನ ಸಂಪರ್ಕಕ್ಕೆ ಬಾರದಂತೆ ತಡೆಯುವ ಸಾಮರ್ಥ್ಯ ಇದಕ್ಕಿದೆ. ಎನ್ 95 ಮಾಸ್ಕ್ ಶೇ.95ರಷ್ಟು ಸೂಕ್ಷ್ಮಾಣುಗಳನ್ನು ತಡೆಯಬಲ್ಲದು. ಹೀಗಾಗಿ ಇದು ದುಬಾರಿ. ಮೂರು ಪದರುಗಳನ್ನು ಹೊಂದಿದ ಈ ಮಾಸ್ಕ್ಗಳನ್ನು ರೋಗಿಗಳು, ರೋಗಿಗಳ ಸಂಪರ್ಕದಲ್ಲಿರುವವರು, ವೈದ್ಯರು ಧರಿಸಬೇಕೆಂದು ಜಾಗತಿಕ ಆರೋಗ್ಯ ಸಂಸ್ಥೆ ತಿಳಿಸಿದೆ.
ಮಾಧ್ಯಮಗಳಲ್ಲಿ ಪೋಟೊ ನೋಡಿ, ಮುಖಕ್ಕೊಂದು ಮಾಸ್ಕ್ ಧರಿಸಿಬಿಟ್ಟರೆ, ರೋಗ ಹರಡುವುದಿಲ್ಲ ಅಂತ ಜನರು ತಪ್ಪಾಗಿ ಭಾವಿಸಿದ್ದಾರೆ. ಗುಣಮಟ್ಟಕ್ಕೆ ಗಮನ ಕೊಡದೆ, ಕಡಿಮೆ ಬೆಲೆಯ ಮಾಸ್ಕ್ ಅನ್ನು ಕೊಳ್ಳುತ್ತಿದ್ದಾರೆ. ಇದರಿಂದ ವ್ಯಾಪಾರಿಗಳಿಗೆ ಲಾಭವಷ್ಟೇ ಹೊರತು, ಇತರರಿಗೆ ಯಾವುದೇ ಪ್ರಯೋಜನವಿಲ್ಲ. ಎಫ್.ಡಿ.ಎ. ಮಾನ್ಯತೆ ಹೊಂದಿದ ಮಾಸ್ಕ್ಗಳು ಮಾತ್ರ ಸೂಕ್ಷ್ಮಾಣುಗಳಿಂದ ರಕ್ಷಿಸಬಲ್ಲವು. ಹಾಗಾಗಿ, ಬೆಲೆ ಸ್ವಲ್ಪ ಹೆಚ್ಚಾದರೂ ಪರವಾಗಿಲ್ಲ. ಎಫ್.ಡಿ.ಎ. ಮಾನ್ಯತೆ ಹೊಂದಿದ ಮಾಸ್ಕ್ಗಳನ್ನೇ ಖರೀದಿಸಿ. ಜೊತೆಗೆ, ಕೆಲವೊಂದಷ್ಟು ಮುಂಜಾಗ್ರತೆಗಳನ್ನು ಪಾಲಿಸಿ. ಜನನಿಬಿಡ ಸ್ಥಳಗಳಲ್ಲಿ ಸಂಚರಿಸಿ ಮನೆಗೆ ಬಂದ ನಂತರ, ಸೋಪು, ಬಿಸಿನೀರಿನಿಂದ ಕೈ ತೊಳೆಯಿರಿ. ಹೊರಗಡೆ ಸಾಧ್ಯವಾದಷ್ಟು ಏನನ್ನೂ ಮುಟ್ಟಬೇಡಿ. ಮೂಗು, ಮುಖ ಮುಟ್ಟುವುದನ್ನು ಕಡೆಗಣಿಸಿ. ಕಣ್ಣು ಉಜ್ಜಿಕೊಳ್ಳಬೇಡಿ. ಅನಾರೋಗ್ಯ ಪೀಡಿತ ವ್ಯಕ್ತಿಗಳಿಂದ ದೂರವಿರಿ.
Related Articles
Advertisement