ಚಿಕ್ಕೋಡಿ : ಕೊರೊನಾ ಎರಡನೆ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರಿ ನೌಕರರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು. ಇಲ್ಲದೇ ಹೋದರೆ ಅಂಥವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಇಂದಿನಿಂದಲೇ ಎಲ್ಲ ಸರ್ಕಾರಿ ನೌಕರರು ಮಾಸ್ಕ್ ಧರಿಸುವಂತೆ ಆದೇಶ ಹೊರಡಿಸಲಾಗುತ್ತದೆ ಎಂದು ಜಿಲ್ಲಾ ಧಿಕಾರಿ ಡಾ| ಕೆ.ಹರೀಶ ಕುಮಾರ ಹೇಳಿದರು.
ಪಟ್ಟಣದ ಮಿನಿವಿಧಾನಸೌಧದಲ್ಲಿ ಚಿಕ್ಕೋಡಿ ಉಪವಿಭಾಗದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೊರೊನಾ ಎರಡನೆ ಅಲೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಕೊರೊನಾ ನಿಯಂತ್ರಿಸಲು ಸರ್ಕಾರ ಕಠಿಣ ಕ್ರಮಗಳನ್ನು ಜಾರಿ ಮಾಡಿದೆ. ಆದರೂ ಜನ ಗುಂಪು ಗುಂಪಾಗಿ ಹೊರಗೆ ತಿರುಗಾಡುತ್ತಿರುವುದು ಕಂಡು ಬರುತ್ತಿದೆ. ಜನರಿಗೆ ತಿಳಿವಳಿಕೆ ಹೇಳುವ ಮೂಲಕ ಮಾಸ್ಕ್ ಹಾಕಿಕೊಳ್ಳಲು ಆಯಾ ತಾಲೂಕಾಡಳಿತ ಜಾಗೃತಿ ಮೂಡಿಸುತ್ತಿದೆ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ಈ ಹಿಂದೆ ಪ್ರತಿದಿನ ಮೂರು ಸಾವಿರ ಜನರ ತಪಾಸಣೆ ಮಾಡಲಾಗುತ್ತಿತ್ತು. ಅದನ್ನು ಆರು ಸಾವಿರಕ್ಕೆ ಹೆಚ್ಚಿಸಲಾಗುತ್ತಿದೆ. ಬೆಳಗಾವ ಜಿಲ್ಲೆಯ 14 ತಾಲೂಕಿನಿಂದ ಪ್ರತಿದಿನ ತಲಾ 500 ಜನರು ಕೊರೊನಾ ಟೆಸ್ಟಿಂಗ್ ಮಾಡಲು ಸೂಚಿಸಲಾಗಿದೆ. ಜಿಲ್ಲೆಯ ಬೀಮ್ಸ್, ಐಸಿಎಂಆರ್ ಹೀಗೆ ಹಲವು ಕಡೆಗಳಲ್ಲಿ ಕೊರೊನಾ ಟೆಸ್ಟಿಂಗ್ ಮಾಡಲಾಗುತ್ತದೆ ಎಂದರು.
ಬೆಳಗಾವಿ ದೊಡ್ಡ ಜಿಲ್ಲೆಯಾಗಿರುವುದರಿಂದ ಚಿಕ್ಕೋಡಿ ವಿಭಾಗದಲ್ಲಿ ಕೊರೊನಾ ತಪಾಸಣಾ ಕೇಂದ್ರ ಸ್ಥಾಪನೆ ಮಾಡಬೇಕೆಂದು ಬೇಡಿಕೆ ಬಂದಿತ್ತು. ಆದರೆ ಕೊರೊನಾ ಎರಡನೆ ಅಲೆ ತೀವ್ರತೆ ಪಡೆದಿರುವ ಪರಿಣಾಮ ಚಿಕ್ಕೋಡಿಯಲ್ಲಿ ಸ್ಥಾಪನೆ ಮಾಡಲು ಸಾಧ್ಯವಾಗಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಇರುವ ಟೆಸ್ಟಿಂಗ್ ಲ್ಯಾಬ್‌ದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ತ್ವರಿತವಾಗಿ ಕೊರೊನಾ ವರದಿ ಕೊಡಲು ತೀರ್ಮಾನಿಸಲಾಗಿದೆ ಎಂದರು. ನೌಕರರ ಬಳಕೆಗೆ ಉಪವಿಭಾಗಾಧಿ ಕಾರಿಗೆ ಅ ಧಿಕಾರ: ಕೊರೊನಾ ನಿಯಂತ್ರಿಸುವಲ್ಲಿ ಎಲ್ಲ ಇಲಾಖೆ ಅ ಧಿಕಾರಿಗಳ ಪಾತ್ರ ಮಹತ್ವ ಪಡೆದಿದೆ. ಹೀಗಾಗಿ ಎಲ್ಲ ಸರ್ಕಾರಿ ನೌಕರರನ್ನು ಕೋವಿಡ್ ಗೆ ಬಳಕೆ ಮಾಡಿಕೊಳ್ಳಲು ಚಿಕ್ಕೋಡಿ ಉಪವಿಭಾಗಾಧಿಕಾರಿಗೆ ಅಧಿಕಾರ ನೀಡಲಾಗಿದೆ.
ಉಪವಿಭಾಗಾಧಿ ಕಾರಿ ನಿಯೋಜಿಸಿರುವ ಸರ್ಕಾರಿ ನೌಕರರು ಕಡ್ಡಾಯವಾಗಿ ಕೋವಿಡ್ ನಿಯಂತ್ರಣಕ್ಕೆ ಹಾಜರಾಗಬೇಕು ಎಂದರು.ಈ ಸಂದರ್ಭದಲ್ಲಿ ಉಪವಿಭಾಗಾಧಿ ಕಾರಿ ಯುಕೇಶಕುಮಾರ, ತಹಶೀಲ್ದಾರ್ ಪ್ರವೀಣ ಜೈನ, ಎಡಿಎಚ್‌ಒ ಡಾ| ಎಸ್.ಎಸ್. ಗಡಾದ, ತಾಲೂಕಾ ಆರೋಗ್ಯಾ ಧಿಕಾರಿ ಡಾ| ವಿಠ್ಠಲ ಶಿಂಧೆ ಮುಂತಾದವರು ಇದ್ದರು.