Advertisement

ಮಾಸ್ಕ್ ಹಾಕದೆ ನಿಯಮ ಉಲ್ಲಂಘನೆ: ಐದೂವರೆ ಕೋಟಿ ದಂಡ ಸಂಗ್ರಹ

07:44 AM Dec 04, 2020 | Suhan S |

ಬೆಂಗಳೂರು: ರಾಜಧಾನಿಯಲ್ಲಿ ಕಡ್ಡಾಯ ಮಾಸ್ಕ್ ಮತ್ತು ಸಾಮಾಜಿಕ ಅಂತರ ಉಲ್ಲಂಘಿಸಿದವರಿಂದ ಈವರೆಗೂ ಬರೋಬ್ಬರಿ ಐದೂವರೆ ಕೋಟಿರೂ.ದಂಡ ಸಂಗ್ರಹವಾಗಿದೆ. ಇದು ದಂಡ ವಸೂಲಿ ಮಾಡುತ್ತಿರುವವರನ್ನು ಸೇರಿದಂತೆ ಬಿಬಿಎಂಪಿ ಎಲ್ಲಾ ಮಾರ್ಷಲ್‌ಗ‌ಳ ಅರು ತಿಂಗಳ ವೇತನಕ್ಕೆ ಸಮವಾಗಿದೆ.

Advertisement

ಲಾಕ್‌ಡೌನ್‌ ತೆರವಾದ ಬಳಿಕ ಕೋವಿಡ್ ಸೋಂಕು ಹರಡದಂತೆ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕಸ್ಥಳಗಳಲ್ಲಿ ಕಡ್ಡಾಯ ಮಾಸ್ಕ್ ಧರಿಸಬೇಕು ಮತ್ತುಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂಬನಿಯಮವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿತ್ತು. ಈನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿ 250 ರೂ. ದಂಡ ವಿಧಿಸುವಂತೆ ಜೂನ್‌ ನಿಂದ ಸೂಚನೆ ನೀಡಿತ್ತು. ನಗರದಲ್ಲಿ ಜೂ. 9 ರಂದು ಮಾಸ್ಕ್ ಧರಿಸದ ವ್ಯಕ್ತಿಗೆ ಮೊದಲ ಬಾರಿ ದಂಡ ವಿಧಿಸಲಾಯಿತು. ಆ ನಂತರ ಜೂ. 18 ರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಗುಂಪು ಸೇರುವವರ ವಿರುದ್ಧ ದಂಡ ಹಾಕಲಾಯಿತು.

ಇಲ್ಲಿಯವರೆಗೂ ಒಟ್ಟಾರೆ 2.47 ಲಕ್ಷ ಪ್ರಕರಣಗಳು ದಾಖಲಾಗಿದ್ದು, 5.67 ಕೋಟಿ ರೂ. ದಂಡ ವಿಧಿಸಲಾಗಿದೆ. ಈ ಪೈಕಿ ಮಾಸ್ಕ್ ಧರಿಸದವರ ವಿರುದ್ಧ2.2 ಲಕ್ಷ ಪ್ರಕರಣಗಳು ದಾಖಲಾಗಿದ್ದು,5.14ಕೋಟಿರೂ.ದಂಡ, ಸಾಮಾಜಿಕ ಅಂತರ ಕಾಪಾಡಿಕೊಳ್ಳದವರ ವಿರುದ್ಧ24,011 ಪ್ರಕರಣಗಳನ್ನು ದಾಖಲಾಗಿದ್ದು,53 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.

ಇದನ್ನೂ ಓದಿ : ನಾಳೆ ರಾಜ್ಯ ಬಂದ್‌ಗೆ ಕರೆ : ರಾಜ್ಯಾದ್ಯಂತ ಪೊಲೀಸ್‌ ಬಂದೋಬಸ್ತ್

ಮಾರ್ಷ್‌ಲ್‌ಗ‌ಳ ಆರು ತಿಂಗಳ ವೇತನಕ್ಕೆ ಸಮ: ಬಿಬಿಎಂಪಿ ವ್ಯಾಪ್ತಿಯಲ್ಲಿ ನಿಯಮಉಲ್ಲಂಘಿಸುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾರ್ಯವನ್ನುಮಾರ್ಷಲ್‌ಗ‌ಳು ಮಾಡುತ್ತಿದ್ದಾರೆ. ಒಟ್ಟು 235 ಮಾರ್ಷಲ್‌ಗ‌ಳು, 18 ಮೇಲ್ವಿಚಾರಕರರು ಕಾರ್ಯಾಚರಣೆಯಲ್ಲಿದ್ದಾರೆ. ಇವರ ವೇತನ ಸೇರಿದಂತೆ ಮಾಸಿಕ ವೆಚ್ಚ ಅಂದಾಜು 55 ಲಕ್ಷ ರೂ. ಇದೆ. ಈವವರೆಗೂ ನಿಯಮೋಲ್ಲಂಘನೆ ಮಾಡಿದವ ರಿಂದ ಸಂಗ್ರಹಿಸಿದ ದಂಡ ಮೊತ್ತವು ಮಾರ್ಷಲ್‌ಗ‌ಳ ಆರು ತಿಂಗಳ ವೇತನಕ್ಕೆ ಸಮವಾಗಲಿದೆ.

Advertisement

ಕೇಂದ್ರ ಭಾಗದಲ್ಲಿಯೇ ಹೆಚ್ಚು : ನಿಯಮೋಲ್ಲಂಘನೆ ಪ್ರಕರಣಗಳು ಜನದಟ್ಟಣೆ ಇರುವ ನಗರದ ಕೇಂದ್ರ ಭಾಗದಲ್ಲಿಯೇ ಹೆಚ್ಚು ವರದಿಯಾಗುತ್ತಿವೆ. ನಗರದ ಹೊರ ಭಾಗಗಳಾದ ಯಲಹಂಕ, ದಾಸರಹಳ್ಳಿ, ಮಹಾದೇವಪುರ, ಬೊಮ್ಮನಹಳ್ಳಿ ವಲಯದಲ್ಲಿ ನಿತ್ಯ ನೂರರ ಆಸುಪಾಸಿನಲ್ಲಿ, ಕೇಂದ್ರ ಭಾಗಗದ ವಲಯ ಗಳಾದ ಪೂರ್ವ, ಪಶ್ಚಿಮ, ದಕ್ಷಿಣ ವಲಯದಲ್ಲಿ 400ಆಸುಪಾಸಿನಲ್ಲಿ ಪ್ರಕರಣಗಳು ದಾಖಲಾಖಲಾಗುತ್ತಿವೆ.

ಪ್ರಕರಣ ದಾಖಲುಕಷ್ಟ : ಒಟ್ಟಾರೆ ನಿಯಮೋಲ್ಲಂಘನೆ ಪ್ರಕರಣಗಳಲ್ಲಿ ಮಾಸ್ಕ್ ದ್ದು ಶೇ.90 ರಷ್ಟಿದ್ದು, ಸಾಮಾಜಿಕ ಅಂತರ ಪ್ರಕರಣಗಳು ಶೇ.10 ರಷ್ಟಿವೆ. ಮಾರ್ಷಲ್‌ ಕೊರತೆಯೆ ಇದ್ದಕ್ಕೆಕಾರಣ ಎಂಬ ಅಭಿಪ್ರಾಯಕೇಳಿ ಬಂದಿದೆ. ಸದ್ಯ198 ವಾರ್ಡ್‌ಗೆ235 ಮಾರ್ಷಲ್‌ ಗಳು ಮಾತ್ರ ಇದ್ದಾರೆ. ಒಬ್ಬ ಮಾರ್ಷಲ್‌ ಇಡೀ ವಾರ್ಡ್‌ನ ಸುತ್ತಾಟಕ್ಕೆ ಸಾಧ್ಯವಾಗುತಿಲ್ಲ. “ಸಾಮಾಜಿಕ ಅಂತರ ಉಲ್ಲಂಘಟನೆ ಪ್ರಕರಣಗಳಲ್ಲಿ ನಾಲ್ಕೈದು ಮಂದಿ ಇರುತ್ತಾರೆ. ಅವರೆಲ್ಲರಿಗೂ ಒಬ್ಬರು ನಿಯಮ ಹೇಳಿ ದಂಡ ವಸೂಲಿ ಮಾಡಲು ಕಷ್ಟವಾಗುತ್ತಿದೆ’ ಎಂದು ನಗರಕೇಂದ್ರ ಭಾಗದ ಮಾರ್ಷಲ್‌ ಒಬ್ಬರು ತಿಳಿಸಿದರು.

ಪೊಲೀಸ್‌ ಸಹಕಾರ ಸಿಗುತ್ತಿಲ್ಲ! :  ಮಾರ್ಷಲ್‌ಗ‌ಳು ಪ್ರಕರಣ ದಾಖಲಿಸಿ ದಂಡ ವಸೂಲಿ ಸಂದರ್ಭದಲ್ಲಿ ಪೊಲೀಸ್‌ ಸಿಬ್ಬಂದಿ ಸಹಕಾರ
ಪಡೆದುಕೊಳ್ಳಿ ಎಂದು ಬಿಬಿಎಂಪಿ ತಿಳಿಸಿದೆ. ಆದರೆ,ಕಳೆದ ಒಂದು ತಿಂಗಳಿಂದ ಪೊಲೀಸ್‌ ಇಲಾಖೆಯು ತನ್ನ ಮಾಸ್ಕ್ ಮತ್ತು ಸಾಮಾಜಿಕ ಅಂತರ ಉಲ್ಲಂಘನೆ ದಂಡ ವಸೂಲಿಗೆ ಸೂಚಿಸಿದೆ. ಈ ಹಿನ್ನೆಲೆ ಮಾರ್ಷಲ್‌ಗಳಿಗೆ ಸ್ಥಳೀಯ ಪೊಲೀಸ್‌ ಸಿಬ್ಬಂದಿ ನೆರವು ನೀಡುತ್ತಿಲ್ಲ ಎಂದು ಮಾರ್ಷಲ್‌ಗ‌ಳು ಬೇಸರವ್ಯಕ್ತ ಪಡಿಸಿದ್ದಾರೆ.

ಏನು ಮಾಡ್ತಾರೆ? : ಮಾರ್ಷಲ್‌ಗ‌ಳು ನಿತ್ಯ ಸಂಗ್ರಹಿಸುವ ದಂಡದ ಮೊತ್ತವನ್ನು ಮರು ದಿನ ಬ್ಯಾಂಕ್‌ಗೆ ತೆರಳಿಬಿಬಿಎಂಪಿಖಾತೆಗೆ ಜಮೆ ಮಾಡುತ್ತಾರೆ.

 

ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next