ಉಡುಪಿ: ದೇವಸ್ಥಾನಗಳ ಅರ್ಚಕರಂತೆ ಗರೋಡಿಗಳ ಗುರಿಕಾರರಿಗೂ ಮಾಸಾಶನ ದೊರಕಬೇಕು ಎಂದು ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಆಗ್ರಹಿಸಿದರು. ಜಿಲ್ಲಾ ಬಿಲ್ಲವ ಯುವ ವೇದಿಕೆ ಪುರಭವನದಲ್ಲಿ ರವಿವಾರ ಆಯೋಜಿಸಿದ ಜಿಲ್ಲಾ ವ್ಯಾಪ್ತಿಯ ಗರೋಡಿ ಗುರಿಕಾರರ ಸಮ್ಮಾನ, ಪ್ರಮುಖರ ಸಮ್ಮಿಲನ ಸಮಾರಂಭ ಉದ್ಘಾಟಿಸಿ ಮಾತನಾಡಿದ
ಅವರು, ಕೋಟಿ ಚೆನ್ನಯರ ಸಿದ್ಧಾಂತ ಜಾರಿಗೆ ಬರುವಂತಾಗಬೇಕು ಎಂದರು.
Advertisement
ಕೋಟಿ ಚೆನ್ನಯರು ಅನ್ಯಾಯ, ಶೋಷಣೆ ವಿರುದ್ಧ ಹೋರಾಡಿದವರು, ದುರ್ಬಲರಿಗೆ ನೆರವಾದವರು. ನಾವು ಬಹುಸಂಖ್ಯಾಕರಿದ್ದರೂ ಹಲವು ಜನಪ್ರತಿನಿಧಿಗಳನ್ನು ಹೊಂದಿಯೂ ಸಾಮಾ ಜಿಕ, ಆರ್ಥಿಕ ಸ್ವಾತಂತ್ರ್ಯ ಸಿಗಲಿಲ್ಲ. 2013ರಲ್ಲಿ ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದಾಗ ಮಂಗಳೂರಿನಲ್ಲಿ ಒಂದು ಜಾಗ ಕೊಟ್ಟರು. ಅಲ್ಲಿ ನವೀನಚಂದ್ರ ಸುವರ್ಣ ಪ್ರಯತ್ನದಿಂದ ಹಾಸ್ಟೆಲ್ ನಿರ್ಮಾಣವಾಯಿತು. ನಾವು ಅಧಿಕಾರದಲ್ಲಿದ್ದು, ಸಮಾಜಕ್ಕೆ ಏನಾದರೂ ಕೆಲಸ ಮಾಡದೆ ಇದ್ದರೆ ಪ್ರಯೋಜನವಿಲ್ಲ. ನಾನು ಮಂಜೂರು ಮಾಡಿದರೂ ಎಷ್ಟೋ ಕೆಲಸಗಳನ್ನು ಅಧಿಕಾರಿಗಳು ಮಾಡಲಿಲ್ಲ. ಕಾರಣವೆಂದರೆ ಬಿಲ್ಲವರು ಸರಕಾರಿ ನೌಕರರಾಗಿಲ್ಲ ಎಂದರು.
ಅಧ್ಯಕ್ಷ ದಾಮೋದರ ಕಲ್ಮಾಡಿ ಅವರನ್ನು ಸಮ್ಮಾನಿಸಲಾಯಿತು. ಗುಜರಾತ್ ಬಿಲ್ಲವ ಸಂಘದ ಗೌರವಾಧ್ಯಕ್ಷ ದಯಾ
ನಂದ ಬೋಂಟ್ರ ಅವರ “ದೇಯಿ ಬೈದೆತಿ’ ಪುಸ್ತಕ ಬಿಡುಗಡೆ ಗೊಳಿಸ ಲಾಯಿತು.
Related Articles
ವೇದಿಕೆ ಅಧ್ಯಕ್ಷ ಪ್ರವೀಣ್ ಎಂ. ಪೂಜಾರಿ ಸ್ವಾಗತಿಸಿ ಗೌರವಾಧ್ಯಕ್ಷ ಅಚ್ಯುತ ಅಮೀನ್ ಕಲ್ಮಾಡಿ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕಲ್ಮಾಡಿ ವಂದಿಸಿದರು. ದಯಾನಂದ ಉಗ್ಗೇಲುಬೆಟ್ಟು, ಸಂತೋಷ್ ಬಡಾ
ನಿಡಿಯೂರು ಕಾರ್ಯಕ್ರಮ ನಿರ್ವಹಿಸಿದರು. ಆರಂಭದಲ್ಲಿ ಸೂಡ ಕೋಟಿ ಪೂಜಾರಿ, ಹೆಜಮಾಡಿ ಗುರುರಾಜ ಪೂಜಾರಿ ಜೋಡು ನಂದಾದೀಪ ಬೆಳಗಿದರು.
Advertisement
ಸರಕಾರದ ಗಮನಕ್ಕೆ ಗರೋಡಿಗಳ ಸರ್ವೆ, ಮಾಸಾಶನ: ಕೋಟ ಶ್ರೀನಿವಾಸ ಪೂಜಾರಿಕರಾವಳಿಯ 252 ಗರೋಡಿಗಳಿರುವ ಜಾಗ ಗರೋಡಿ ಹೆಸರಿನಲ್ಲಿಲ್ಲ. ಆದ್ದರಿಂದ ಈ ಭೂಮಿಯನ್ನು ಸರ್ವೆ ಮಾಡಿಸಿ ಜಾಗ ಗರೋಡಿ ಹೆಸರಿನಲ್ಲಿ ಬರುವಂತೆ ಮಾಡಬೇಕು. ಈ ವಿಷಯವನ್ನು ಕಂದಾಯ ಸಚಿವರ ಮುಂದೆ ಮಂಡಿಸುತ್ತೇನೆ. ಗುರಿಕಾರರಿಗೆ ಮಾಸಾಶನ ಕೊಡಲು ಸರಕಾರವನ್ನು ಆಗ್ರಹಿಸುತ್ತೇನೆ ಎಂದು ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಸೌಲಭ್ಯ ಪಡೆಯುವಲ್ಲಿಯೂ ಹಿಂದುಳಿದವರು!
ನಾವು ಹಿಂದೆ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿರುವಾಗ ಗರೋಡಿಗಳ ಪರಿಚಾರಕರ ಸಮ್ಮೇಳನದಲ್ಲಿ ಪರಿಚಾರಕರಿಗೆ ಮಾಸಾಶನ ದೊರಕಿಸಲು ವಿನಂತಿಸಿದ್ದೆವು. ಆದರೆ ಪಂಬದ, ಪರವ, ವಾದ್ಯದವರಿಗೆ ಮಾತ್ರ ಕಲಾವಿ
ದರ ನೆಲೆಯಲ್ಲಿ ಮಾಸಾಶನ ಸಾಧ್ಯ ಎಂದು ಹೇಳಿದರು. ಆಗ ಗುರಿಕಾರರ ಪ್ರಸ್ತಾವ ಬಿದ್ದು ಹೋಯಿತು. ಗರೋಡಿಗಳ ಅಭಿವೃದ್ಧಿಗೆ ಶಾಸಕರು, ಸಚಿವರಿಗೂ ಅನುದಾನವನ್ನು ನೇರವಾಗಿ ಕೊಡಲು ಆಗುತ್ತಿಲ್ಲ. ನಾವು ಹಿಂದುಳಿದ ವರ್ಗ ಎ ಗುಂಪಿನವರಾದರೂ, ಬಹುಸಂಖ್ಯಾಕರಾದರೂ ಸರಕಾರದ ಸೌಲಭ್ಯ ಪಡೆಯು ವಾಗಲೂ ಹಿಂದುಳಿಯುತ್ತಿದ್ದೇವೆ. - ಅಚ್ಯುತ ಅಮೀನ್ ಕಲ್ಮಾಡಿ