Advertisement
ಇಂದಿನ ಯುವ ಪೀಳಿಗೆಯಲ್ಲಿ ಇವುಗಳನ್ನು ಇಷ್ಟಪಡದವರು ಇಲ್ಲವೇ ಇಲ್ಲ ಅದುವೇ ”ಪಾಸ್ತಾ” . ಇದು ಸಾಂಪ್ರದಾಯಕ ಇಟಾಲಿಯನ್ ಪಾಕ ಪದ್ಧತಿಯ ಒಂದು ಪ್ರಧಾನ ಆಹಾರವಾಗಿದೆ. ಪಾಸ್ತಾ ನಮ್ಮ ಭಾರತೀಯರ ಆಹಾರ ಅಲ್ಲ ,ಆದರೆ ಅದು ಈಗ ಭಾರತೀಯರಿಗೂ ಚಿರಪರಿಚಿತ ತಿಂಡಿ ತಿನಿಸಾಗಿದೆ.
ಮ್ಯಾಕರೋನಿ ಪಾಸ್ತಾ 1 ಕಪ್, ಈರುಳ್ಳಿ-1,ಟೊಮೆಟೋ 2,ಕ್ಯಾರೆಟ್ ಸ್ವಲ್ಪ,ಬೀನ್ ಸ್ವಲ್ಪ, ಹಸಿ ಮೆಣಸು-2, ಶುಂಠಿ ಸ್ವಲ್ಪ,ಬೆಳ್ಳುಳ್ಳಿ-3ರಿಂದ 5 ಎಸಳು, ಎಣ್ಣೆ-4 ಚಮಚ, ದೊಣ್ಣೆ ಮೆಣಸು (ಕ್ಯಾಪ್ಸಿಕಂ)- ಸ್ವಲ್ಪ, ಚಿಲ್ಲಿ ಸಾಸ್-2 ಚಮಚ,ಟೊಮೆಟೋ ಸಾಸ್ 2 ಚಮಚ, ನೀರು- 3ಕಪ್, ಚೀಸ್ ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
Related Articles
– ಒಂದು ಪಾತ್ರೆಗೆ 2 ಕಪ್ ನೀರನ್ನು ಹಾಕಿ, ಮ್ಯಾಕರೋನಿ ಪಾಸ್ತಾವನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ,ಸುಮಾರು 6 ರಿಂದ 7 ನಿಮಿಷಗಳ ಕಾಲ ಬೇಯಿಸಿ.ನಂತರ ನೀರಿನಿಂದ ಪಾಸ್ತಾವನ್ನು ಬೇರ್ಪಡಿಸಿ ಬೇರೆ ಪಾತ್ರೆಗೆ ಹಾಕಿರಿ.
– ತದನಂತರ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಶುಂಠಿ,ಬೆಳ್ಳುಳ್ಳಿ,ಈರುಳ್ಳಿ ,ಹಸಿಮೆಣಸು,ದೊಣ್ಣೆ ಮೆಣಸನ್ನು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ.
-ನಂತರ ಟೊಮೆಟೋ,ಕ್ಯಾರೆಟ್,ಬೀನ್ಸ್ ನ್ನು ಹಾಕಿ 5ರಿಂದ 7 ನಿಮಿಷಗಳ ಕಾಲ ಬೇಯಿಸಿರಿ.
-ಆಮೇಲೆ ಚಿಲ್ಲಿ ಸಾಸ್, ಟೊಮೆಟೋ ಸಾಸ್,ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿಕೊಳ್ಳಿ.
– ತದನಂತರ ಅದೇ ಬಾಣಲೆಗೆ ಬೇಯಿಸಿಟ್ಟ ಪಾಸ್ತಾವನ್ನು ಹಾಕಿ ಮಿಕ್ಸ್ ಮಾಡಿ.
– ಭಾರತೀಯ ಶೈಲಿಯ ಮಸಾಲ ಮ್ಯಾಕರೋನಿ ಪಾಸ್ತಾವನ್ನು ಚೀಸ್ ಮತ್ತು ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿರಿ.
-ರುಚಿಕರವಾದ ಮಸಾಲ ಮ್ಯಾಕರೋನಿ ಪಾಸ್ತಾ ಸವಿಯಲು ಸಿದ್ಧ.
Advertisement