Advertisement

ಮಾರುತಿ ಸುಜುಕಿ “ಇನ್ವಿಕ್ಟೊ” ಬಿಡುಗಡೆ

12:33 AM Jul 06, 2023 | Team Udayavani |

ಮಾರುತಿ ಸುಜುಕಿ ಇಂಡಿಯಾ ಕಂಪೆನಿಯು ತನ್ನ ಅತ್ಯಂತ ದುಬಾರಿ ಕಾರು “ಇನ್ವಿಕ್ಟೊ” ಅನ್ನು ಬುಧವಾರ ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಆರಂಭಿಕ ಬೆಲೆ 24.79 ಲಕ್ಷ ರೂ. ಇದ್ದು, ಟಾಪ್‌ ವೇರಿಯಂಟ್‌ 28.42 ಲಕ್ಷ ರೂ. ಇದೆ.

Advertisement

ಮೂರು ವೇರಿಯಂಟ್‌ಗಳಲ್ಲಿ; ಜೆಟಾ+(7 ಆಸನ), ಜೆಟಾ+(8 ಆಸನ) ಮತ್ತು ಆಲ್ಫಾ+(7 ಆಸನ) ಲಭ್ಯವಿದೆ. ಅಲ್ಲದೇ ನೆಕ್ಸಾ ಬ್ಲೂ, ಮಿಸ್ಟಿಕ್‌ ವೈಟ್‌ ಸೇರಿದಂತೆ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ಈ ಕಾರು 2.0 ಲೀಟರ್‌ ಪೆಟ್ರೋಲ್‌ ಎಂಜಿನ್‌ ಹೊಂದಿದ್ದು, ಎಲ್ಲ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಮಾಸಿಕ 61,860 ರೂ.ಗೆ ಸಬ್‌ಸ್ಕ್ರಿಪ್ಶನ್‌ ಸೌಲಭ್ಯ ಲಭ್ಯವಿದೆ ಎಂದು ಕಂಪೆನಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next