Advertisement

ಮಾರುತಿ, ಹ್ಯುಂಡೈ ಮಾರುಕಟ್ಟೆಯ ಚೇತರಿಕೆ; ಟಾಟಾ ಕಾರು ಭರ್ಜರಿ ಬುಕ್ಕಿಂಗ್

02:43 PM Oct 28, 2020 | Nagendra Trasi |

ಬೆಂಗಳೂರು: ಪಾತಾಳಕ್ಕೆ ಕುಸಿದಿರುವ ಆರ್ಥಿಕತೆಯನ್ನು ಹಬ್ಬದ ಋತು ಕೊಂಚ ಮೇಲೆತ್ತಿದೆ. ಕಳೆದ ನವರಾತ್ರಿಗೆ ಹೋಲಿಸಿದಲ್ಲಿ ಈ ವರ್ಷದ ಖರೀದಿ ಹೆಚ್ಚಾಗಿದ್ದು, ಅದರಲ್ಲೂ ಗ್ರಾಹಕ ಸರಕು ಉತ್ಪಾದಕರು ಬಂಪರ್‌ ಲಾಭದತ್ತ ಮುಖಮಾಡಿದ್ದಾರೆ.

Advertisement

ಮಾರುತಿ, ಹ್ಯುಂಡೈ, ಸ್ಯಾಮ್‌ ಸಂಗ್‌, ಎಲ್‌ಜಿ, ಸೋನಿ ಮತ್ತು ಲಕ್ಷುರಿ ರಿಟೇಲರ್‌ಗಳಾದ ಮರ್ಸಿಡಿಸ್‌ ಬೆ ನ್ಜ್ ಮತ್ತು ಡೈಸನ್‌ಗಳಿಗೂ ಮಾರುಕಟ್ಟೆಯ ಚೇತರಿಕೆ ಭರವಸೆ ಹುಟ್ಟಿಸಿದೆ. “ಮಾರುಕಟ್ಟೆಯ ಅತ್ಯಂತ ಸಂಕಷ್ಟದ ಅವಧಿ ಮುಕ್ತಾಯದಂಚಿಗೆ ಬಂದಿರುವ ಲಕ್ಷಣ ತೋರಿದೆ’ ಎಂದೇ ವಿಶ್ಲೇಷಿಸಲಾಗಿದೆ.

“ಆಟೋ’ ಉದ್ಯಮ: ಮಾರುತಿ ಸಂಸ್ಥೆಯ ಕಾರುಗಳ ವ್ಯಾಪಾರ ನವರಾತ್ರಿಯಲ್ಲಿ ಕಳೆದ ವರ್ಷಕ್ಕಿಂತ ಶೇ.20ರಷ್ಟು ಹೆಚ್ಚಳ ಕಂಡಿದೆ. ಮರ್ಸಿಡಿಸ್‌ ದಸರೆಯಲ್ಲಿ 550 ಕಾರುಗಳನ್ನು ಮಾರಿದ್ದು, ಕಳೆದ ವರ್ಷಕ್ಕಿಂತ ಮಾರಾಟ ದ್ವಿಗುಣಗೊಂಡಿದೆ. ಹ್ಯುಂಡೈ ಕಾರುಗಳು ಒಟ್ಟಾರೆ  ಶೇ.28ರಷ್ಟು ಹೆಚ್ಚು ಮಾರಾಟಕಂಡಿವೆ. ಕಿಯಾ ಕೂಡ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದೆ.

“ಸ್ಮಾರ್ಟ್‌’ ಉತ್ಪನ್ನ: ಹಬ್ಬದ ದಿನಗಳಲ್ಲಿ ಸ್ಯಾಮ್‌ಸಂಗ್‌ ಉತ್ಪನ್ನಗಳ ಮಾರಾಟದಲ್ಲಿ ಶೇ.50 ಏರಿಕೆ ಕಂಡಿದೆ. ಬೇಡಿಕೆ ಹೆಚ್ಚಿದ್ದರಿಂದ ಟಿವಿ ದಾಸ್ತಾನು ಖಾಲಿ ಆಗಿದೆ. ಎಲ್‌ಜಿ ಕಂಪನಿಯ ವಾಷಿಂಗ್‌ ಮಷೀನ್‌, ಟಿವಿ, ಮೈಕ್ರೋ ವೇವ್‌ ಓವನ್‌ ಮತ್ತು ಡಿಶ್‌ವಾಷರ್‌ ಗಳ ಮಾರಾಟ ದುಪ್ಪಟ್ಟಾಗಿದೆ.

ಇದನ್ನೂ ಓದಿ:ಮುನಿರತ್ನಗೆ ಕಣ್ಣೀರು ಹಾಕುವುದು, ಹಾಕಿಸುವುದು ಚೆನ್ನಾಗಿ ಗೊತ್ತಿದೆ : ಡಿಕೆ ಸುರೇಶ್

Advertisement

ಪ್ಯಾನಸಾನಿಕ್‌ನ ಮೈಕ್ರೋವೇವ್‌ ಮಾರಾಟ ಕಳೆದ ವರ್ಷಕ್ಕಿಂತ ಶೇ.41, ಎ.ಸಿ. ಶೇ.33, ಫ್ರಿಡ್ಜ್ ಶೇ.71, ವಾಷಿಂಗ್‌ ಮಷೀನ್‌ಗಳು ಶೇ.25ಕ್ಕೂ ಹೆಚ್ಚು ಮಾರಾಟವಾಗಿವೆ. ಅಷ್ಟೇ ಅಲ್ಲದೆ, ಶಾಪರ್ಸ್‌ ಸ್ಟಾಪ್‌, ಅರವಿಂದ್‌ ಫ್ಯಾಷನ್ಸ್‌ನಂತಹ ಫ್ಯಾಷನ್‌ ರಿಟೇಲರ್‌ ಗಳಿಗೂ ನವರಾತ್ರಿ ಉತ್ತಮ ಆದಾಯ ತಂದುಕೊಟ್ಟಿದೆ. ಇದು ದೀಪಾವಳಿ ಹಬ್ಬದ ಆಶಾಭಾವನೆ ಮೂಡಿಸಿದೆ.

“ಟಾಟಾ’ ಹರ್ಷ
“ನವರಾತ್ರಿ ಅವಧಿಯಲ್ಲಿ ಟಾಟಾ ಮೋಟಾರ್ಸ್‌ 2019ಕ್ಕಿಂತ ಈ ವರ್ಷ ಶೇ.90ರಷ್ಟು ಹೆಚ್ಚು ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ. ಕಾರುಗಳ ಬುಕ್ಕಿಂಗ್‌ ನಲ್ಲಿ ಶೇ.103ರಷ್ಟು ಹೆಚ್ಚಳವಾಗಿದೆ’ ಎಂದು ಸಂಸ್ಥೆ ಹರ್ಷ ವ್ಯಕ್ತಪಡಿಸಿದೆ. ಹಬ್ಬದ ಋತುವನ್ನು ದೃಷ್ಟಿಯಲ್ಲಿ ಟ್ಟುಕೊಂಡು ಟಾಟಾ ಅಲ್ಟ್ರಾಝ್ ಹ್ಯಾಚ್‌ಬ್ಯಾಕ್‌ ಸೇರಿದಂತೆ ಹಲವು ಹೊಸ ಕಾರುಗಳನ್ನು ಪರಿಚಯಿಸಿದ್ದು ಸಂಸ್ಥೆಗೆ ಪ್ಲಸ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next