Advertisement
ತಿಮ್ಮಾಪೂರ ಒಂದು ಸಣ್ಣ ಗ್ರಾಮ. ಇದು ಅಮರಾವತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುತ್ತದೆ.
Related Articles
Advertisement
ದೇವಾಲಯದ ಒಳ, ಹೊರ ಗೋಡೆಗಳ ಮೇಲೆ ಪೌರಾಣಿಕ ಹಿನ್ನೆಲೆಯ ಕಥೆ ಹೇಳುವ ಅನೇಕ ಚಿತ್ರಗಳಿವೆ. ದೇವಸ್ಥಾನದ ಎದುರಿಗೆ ಭರಮದೇವರ ಕಟ್ಟೆ ಇದೆ. ಜಾತ್ರೆಯ ದಿವಸ ಹತಾರ ಸೇವೆ ನಡೆದ ನಂತರ ಕೊನೆಯ ಪೂಜಾರಿಯು ಈ ಕಟ್ಟೆಯ ಮೇಲೆ ನಿಂತು ಹೇಳಿಕೆ ಕೊಡುತ್ತಾರೆ.
ತಿಮ್ಮಾಪುರದ ಪೂಜಾರಿಗಳಾದ ದೇಸಾಯಿಯವರು ಹರಪನಹಳ್ಳಿಯಿಂದ ಹುನಗುಂದ ದಮ್ಮೂರದ ಗುಡ್ಡದ ಕಡೆ ಬರುತ್ತಿರುವಾಗ ಅಲ್ಲಿ ಏನೋ ಅವರ ಮನ¨ಲ್ಲಿ ಮೂಡಿ ಬಂದು ಕಲ್ಲಿನ ಮೇಲೆ ನಿಂತರಂತೆ. ಆ ಸಂದರ್ಭದಲ್ಲಿ ಅವರಿಗೆ ಕಣ್ಣುಗಳು ಕಾಣದಂತಾಯಿತಂತೆ. ಮತ್ತೆ ಆ ಸ್ಥಳ ಬಿಟ್ಟು ಕದಲಿದಾಗ, ಸ್ವಲ್ಪ ಸ್ವಲ್ಪ ಕಣ್ಣುಗಳು ಕಾಣಿಸಿದಂತಾಗಿದೆ. ಕಣ್ಣು ತರೆದಾಗ ಮಾರುತೇಶ್ವರ ಪ್ರತ್ಯಕ್ಷನಾದನಂತೆ.
“ಭಕ್ತನೇ, ನೀನು ಎಲ್ಲಿಗೆ ಹೋಗುವೆ.? ನನ್ನನ್ನೂ ಅಲ್ಲಿಗೆ ಕರದುಕೊಂಡು ಹೋಗು. ನಾನೂ ನಿನ್ನ ಜೋತೆ ಬರುತ್ತೇನೆ’ ಎಂದು ಅಶರೀರವಾಣಿ ಕೇಳಿಸಿತಂತೆ.
ಆಗ ಆ ಭಕ್ತನು ನಿನ್ನನ್ನು ಕರೆದೊಯ್ಯಲು ಹೇಗೆ ಸಾಧ್ಯ? ಎಂದು ಅವನನ್ನು ಕೇಳಿದನಂತೆ. ಆಗ ಅಶರೀರವಾಣಿಯು, ನಾನು ರೋಟಿ ತೂಕದಲ್ಲಿ ಬರುತ್ತೇನೆ ಎನ್ನಲು, ಆ ವ್ಯಕ್ತಿ ನೆಲದಲ್ಲಿಯ ಆ ಕಲ್ಲನ್ನು ಎತ್ತಿಕೊಂಡನಂತೆ. ಅದು ಬಹಳ ಹಗುರವಾಯಿತು. ಅದನ್ನು ಎತ್ತಿಕೊಂಡು ಅಲ್ಲಿಂದ ಹುನಗುಂದ ತಾಲೂಕಿನ ತಿಮ್ಮಾಪೂರ ಸಮೀಪಕ್ಕೆ ಬರುತ್ತಿರಲು, ಆ ಕಲ್ಲು ಭಾರವಾಯಿತಂತೆ.
ಆಗ ಆ ವ್ಯಕ್ತಿಯು ಆ ಮೂರ್ತಿಯನ್ನು ಆ ಸ್ಥಳದಲ್ಲಿ ಬಿಟ್ಟು ಹೊರಟನಂತೆ. ಆಗ ಆ ಮೂರ್ತಿಯು- ನನ್ನನ್ನು ಇಲ್ಲಿ ಬಿಟ್ಟು ಹೋಗಬೇಡಾ. ಈ ಊರಿನ ಡೊಳ್ಳು-ಕಳಸದೊಂದಿಗೆ ಬಂದು ನನ್ನನ್ನು ಕರೆದುಕೊಂಡು ಹೋಗು. ನನಗೆ ಸಂಗಟಿ ಎಡೆಯನ್ನು ಮಾಡಿ ತರಲು ಈ ಊರಿನ ಹಿರಿಯರಿಗೆ ಹೇಳು’ ಎಂದಿತಂತೆ . ಆ ಪ್ರಕಾರ ಗ್ರಾಮಕ್ಕೆ ತಂದು ಮಾರುತೇಶ್ವರನನ್ನು ಪ್ರತಿಷ್ಠಾಪಿಸಿದರು ಎನ್ನುವ ಪ್ರತೀತಿ ಇದೆ.
ವೈ.ಬಿ.ಕಡಕೋಳ